AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಮುಷ್ಕರ; ಬಸ್​ಗಳಿಲ್ಲದೆ ಪರದಾಡುತ್ತಿದ್ದ ತಲ್ಸೇಮಿಯಾ ರೋಗಿಗೆ ನೆರವಾದ ಟಿವಿ9

ದಿಕ್ಕಿಲ್ಲದೆ ನಿಂತಿದ್ದ ತಮಿಳುನಾಡು ಮೂಲದ ತಲ್ಸೇಮಿಯಾ ರೋಗಿಯನ್ನು ಆಸ್ಪತ್ರೆ ತಲುಪಲು ಟಿವಿ9 ಸಿಬ್ಬಂದಿ ಸಹಾಯ ಮಾಡಿದ್ದಾರೆ. ತಮಿಳುನಾಡಿನ ಜೋಲಾರ್ ಪೇಟ್​ಯಿಂದ ಬಂದಿದ್ದ ತಲ್ಸೇಮಿಯಾ ಭಾದಿತ ಯುವಕ ವಿನೋದ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್​ಗಾಗಿ ಕಾದು ನಿಂತಿದ್ದ.

ಸಾರಿಗೆ ಮುಷ್ಕರ; ಬಸ್​ಗಳಿಲ್ಲದೆ ಪರದಾಡುತ್ತಿದ್ದ ತಲ್ಸೇಮಿಯಾ ರೋಗಿಗೆ ನೆರವಾದ ಟಿವಿ9
ತಲ್ಸೇಮಿಯಾ ರೋಗಿಗೆ ನೆರವಾದ ಟಿವಿ9
ಆಯೇಷಾ ಬಾನು
|

Updated on:Apr 12, 2021 | 10:08 AM

Share

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸರ್ಕಾರಿ ಸಾರಿಗೆ ನೌಕರರು ಕಳೆದ 6 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರು ಅನೇಕ ಕಷ್ಟಗಳನ್ನು ಎದುರಿಸುವಂತಾಗಿದೆ. ದುಪ್ಪಟ್ಟು ಹಣ ವ್ಯಯ ಮಾಡುವಂತಾಗಿದೆ. ಇಂದೂ ಕೂಡ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ತಲ್ಸೇಮಿಯಾ ರೋಗಿಯೊಬ್ಬ ಆಸ್ಪತ್ರೆಗೆ ಹೋಗಲು ಬಸ್ ಇಲ್ಲದೆ ಪರದಾಡುತ್ತಿದ್ದು ರೋಗಿಯ ಸಂಕಷ್ಟ ನೋಡಲಾಗದೆ ಟಿವಿ9 ಸಹಾಯ ಮಾಡಿದೆ.

ದಿಕ್ಕಿಲ್ಲದೆ ನಿಂತಿದ್ದ ತಮಿಳುನಾಡು ಮೂಲದ ತಲ್ಸೇಮಿಯಾ ರೋಗಿಯನ್ನು ಆಸ್ಪತ್ರೆ ತಲುಪಲು ಟಿವಿ9 ಸಿಬ್ಬಂದಿ ಸಹಾಯ ಮಾಡಿದ್ದಾರೆ. ತಮಿಳುನಾಡಿನ ಜೋಲಾರ್ ಪೇಟ್​ಯಿಂದ ಬಂದಿದ್ದ ತಲ್ಸೇಮಿಯಾ ಭಾದಿತ ಯುವಕ ವಿನೋದ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್​ಗಾಗಿ ಕಾದು ನಿಂತಿದ್ದ. ಎಷ್ಟೇ ಹೊತ್ತಾದರೂ ಬಸ್ ಬಾರದ ಹಿನ್ನೆಲೆಯಲ್ಲಿ ಆಸ್ಪತ್ರೆ ತಲುಪಲು ಆಟೋ ಮೊರೆ ಹೋಗಿದ್ದಾನೆ. ಆದರೆ ಮುಷ್ಕರದ ಬಿಸಿಯ ಲಾಭ ಪಡೆಯಲು ಮುಂದಾದ ಆಟೋ ಚಾಲಕ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್​ಗೆ ತೆರಳಲು 200 ರೂ. ಕೇಳಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ಟಿವ9 ವರದಿಗಾರ 80 ರೂ. ಗೆ ಮಾತನಾಡಿ ಆಟೋ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ. ಆದರೆ 200 rರೂಪಾಯಿ ಕೊಡುವಂತೆ ಅರ್ಧ ದಾರಿಯಲ್ಲೇ ಯುವಕನನ್ನು ಇಳಿಸಿ ಆಟೋ ಚಾಲಕ ಹೊರಟು ಹೋಗಿದ್ದಾನೆ.

Tv9 Helps thalassemia patient

ತಲ್ಸೇಮಿಯಾ ರೋಗಿಗೆ ನೆರವಾದ ಟಿವಿ9

ಬಳಿಕ ಮತ್ತೆ ಯುವಕ ನಡೆದುಕೊಂಡೇ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಟಿವಿ9 ವರದಿಗಾರನನ್ನು ಹುಡುಕಿಕೊಂಡು ಬಂದಿದ್ದಾನೆ. ಆಟೋಗೆ ಕೊಡುವಷ್ಟು ದುಡ್ಡಿಲ್ಲದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲೇ ಅಸ್ವಸ್ಥ ಸ್ಥಿತಿಯಲ್ಲಿ ಪರದಾಡುತ್ತಿದ್ದ ಯುವಕನನ್ನು ನೋಡಿದ ಟಿವಿ9 ವರದಿಗಾರ ತಕ್ಷಣ ಅಸ್ವಸ್ಥ ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಟಿವಿ9 ಕ್ಯಾಬ್​ನಲ್ಲೇ ರೋಗಿಯನ್ನು ಬ್ಲಡ್ ಬ್ಯಾಂಕ್ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಹಣದ ಮೋಹಕ್ಕೆ ಬಿದ್ದ ಆಟೋ ಚಾಲಕನ ರೋಗಿ ಎಂದೂ ಲೆಕ್ಕಿಸದೆ ನಡು ರಸ್ತೆಯಲ್ಲೇ ಬಿಟ್ಟು ಹೋಗಿದ್ದು ಇದೆಂಥಾ ಅಮಾನವೀಯ ನಡೆ ಎಂಬಂತಾಗಿದೆ.

ಇದನ್ನೂ ಓದಿ: ‘ಕಂದನ ಉಳಿಸು ಕರ್ನಾಟಕ’ ಟಿವಿ9 ಅಭಿಯಾನಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

(TV9 Kannada Reporter Helps Thalassemia Patient to go For Hospital During Bus Strike in Bengaluru)

Published On - 10:07 am, Mon, 12 April 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್