Karnataka Lockdown: 2ನೇ ಅಲೆ ಸಿಕ್ಕಾಪಟ್ಟೆ ಡೇಂಜರಸ್: ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ, ಲಾಕ್​ಡೌನ್​ ಮುನ್ಸೂಚನೆ?

Karnataka Lockdown Latest News: ಕೇವಲ ಇನ್ನು 10 ದಿನಗಳಲ್ಲೇ 30 ಸಾವಿರದವರೆಗೂ ಕೇಸ್ ಬರಬಹುದು. ಸರ್ಕಾರ ಐಸಿಯು ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಗಳನ್ನ ಹೆಚ್ಚಳ ಮಾಡಿಕೊಳ್ಳಬೇಕು. ಮೊದಲ ಅಲೆಗಿಂತಲೂ ಇದು ಭಾರೀ ಡೇಂಜರ್ ಅಂತಿದ್ದಾರೆ ತಜ್ಞರು.

Karnataka Lockdown: 2ನೇ ಅಲೆ ಸಿಕ್ಕಾಪಟ್ಟೆ ಡೇಂಜರಸ್: ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ, ಲಾಕ್​ಡೌನ್​ ಮುನ್ಸೂಚನೆ?
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Apr 12, 2021 | 5:35 PM

ಬೆಂಗಳೂರು: ಕೊರೊನಾ ಮಹಾಮಾರು ಎರಡನೆಯ ಅಲೆ ಸಿಕ್ಕಾಪಟ್ಟೆ ಡೇಂಜರಸ್ ಆಗಿದೆ. ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ. ಲಾಕ್ ಡೌನ್ ಮಾಡದೆಯೋ ಹೆಮ್ಮಾರಿಯನ್ನ ಕಟ್ಟಿಹಾಕೋದಕ್ಕೆ ಟಫ್ ರೂಲ್ಸ್ ಜಾರಿಯಾಗಲೇಬೇಕು. ಕನಿಷ್ಠ ಎರಡು ತಿಂಗಳು ಅತ್ಯೆಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಸ್ಪಷ್ಟವಾಗಿ ನುಡಿದಿದ್ದಾರೆ.

ಈಗಿನ ನೈಟ್ ಕರ್ಫ್ಯೂವನ್ನು ಮೇ ತಿಂಗಳವರೆಗಾದರೂ ಮುಂದುವರಿಸಲೇಬೇಕು. ಆರ್ಥಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಸಾಹಸದ ಕೆಲಸ ಅಂತಿದ್ದಾರೆ ಎಕ್ಸ್​​ಪರ್ಟ್ಸ್. ಇದರ ಹೊರತಾಗಿಯೂ ಮತ್ತೊಮ್ಮೆ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ಲಾಕ್ ಡೌನ್ ಮಾಡದೆಯೂ ಹೆಮ್ಮಾರಿಯನ್ನ ಕಟ್ಟಿಹಾಕೋದಕ್ಕೆ ಟಫ್ ರೂಲ್ಸ್ ಜಾರಿಯಾಗಲೇಬೇಕು. ಪ್ರಮುಖವಾಗಿ ಗುಂಪು ಸೇರೋದಕ್ಕೆ ಬ್ರೇಕ್ ಹಾಕಬೇಕು ಎಂದು ತಜ್ಙರು ಅಭಿಪ್ರಾಐಪಟ್ಟಿದ್ದಾರೆ.

ಇದನ್ನು ಓದಿ: ಪರಿಸ್ಥಿತಿ ಕೈಮೀರುತ್ತಿದೆ.. ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ: ಮುಖ್ಯಮಂತ್ರಿ ಯಡಿಯೂರಪ್ಪ

ಪ್ರತಿಭಟನೆ, ಧರಣಿಗಳನ್ನು ಈ ಸಮಯದಲ್ಲಿ ಮಾಡಲೇಬಾರದು. ಚುನಾವಣೆ ಪ್ರಚಾರ ಸಭೆಗಳಿಗೂ ಬ್ರೇಕ್ ಬೀಳಲೇಬೇಕು. ಜಾತ್ರೆ, ಉತ್ಸವ ಧಾರ್ಮಿಕ ಆಚರಣೆಗಳಿಗೆ ಕಡ್ಡಾಯ ನಿಷೇಧ ಹೇರಬೇಕು ಎಂಬುದು ಪರಿಣತರ ಸ್ಪಷ್ಟ ಸಂದೇಶ. ಇನ್ನು ಮದುವೆ ಸಮಾರಂಭ, ನಾಮಕರಣ, ಗೃಹ ಪ್ರವೇಶ, ಬರ್ಥ್ ಡೆ ಪಾರ್ಟಿಗಳನ್ನು ಕನಿಷ್ಠ ಎರಡು ತಿಂಗಳು ಮುಂದೂಡಬೇಕು ಎಂದು ಅವರು ಸೂಚಿಸಿದ್ದಾರೆ.

ಮಾಲ್, ಮಾರುಕಟ್ಟೆ, ಸಿನಿಮಾ ಥಿಯೇಟರ್ಸ್, ಅಂಗಡಿ ಮುಗ್ಗಟ್ಟಗಳ ಮುಂದೆ ಕಟ್ಟೆಚ್ಚರ ವಹಿಸಬೇಕು. ಪಾರ್ಕ್, ದೇವಾಸ್ಥಾನ, ಮಸೀದಿ, ಚರ್ಚ್ ಗಳಲ್ಲೂ ಹೆಚ್ಚು ಜನ ಸೇರಬಾರದು. ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆಯನ್ನು ನೇರವಾಗಿ ಮನೆಗಳಿಗೇ ಮಾಡುವುದು ಸೂಕ್ತ ಎಂದಿರುವ ಪರಿಣರು ಕಂಪನಿ, ಕಾರ್ಖಾನೆ, ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೂ ಗುಂಪು ಸೇರದ ರೀತಿಯಲ್ಲಿ ಮಾರ್ಗಸೂಚಿ ನೀಡಬೇಕು. ಹೋಟೆಲ್, ಪಬ್, ರೆಸ್ಟೋರೆಂಟ್, ಬಾರ್ ಗಳಲ್ಲಿ ಹೆಚ್ಚು ಜನ ಸೇರದ ಹಾಗೇ ಮಾಲೀಕರೇ ನೋಡಿಕೊಳ್ಳಬೇಕು ಎಂದಿದ್ದಾರೆ.

ಇನ್ನು 10 ದಿನಗಳಲ್ಲೇ 30 ಸಾವಿರದವರೆಗೂ ಕೇಸ್

ಕನಿಷ್ಠ ಮೇ ತಿಂಗಳ ಅಂತ್ಯದವರಿಗಾದರೂ ಈ ನಿಯಮಗಳನ್ನ ಜಾರಿಗೊಳಿಸಲೇಬೇಕು. ಬೆಂಗಳೂರಿನಲ್ಲಿ ಕಡ್ಡಾಯವಾಗಿ 144 ಸಕ್ಷನ್ ಜಾರಿ ಮಾಡಬೇಕು. ಹೆಚ್ಚು ಆರೋಗ್ಯಯುತ ಯುವಕರು ಹೊರಗಡೆ ಬಂದು ಕೆಲಸ ಮಾಡಬೇಕು. ವಯಸ್ಸಾದವರು, ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಮನೆಯಿಂದ ಆದಷ್ಟು ಹೊರ ಬರಬಾರದು. ಕೇವಲ ಇನ್ನು 10 ದಿನಗಳಲ್ಲೇ 30 ಸಾವಿರದವರೆಗೂ ಕೇಸ್ ಬರಬಹುದು. ಸರ್ಕಾರ ಐಸಿಯು ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಗಳನ್ನ ಹೆಚ್ಚಳ ಮಾಡಿಕೊಳ್ಳಬೇಕು. ಮೊದಲ ಅಲೆಗಿಂತಲೂ ಇದು ಭಾರೀ ಡೇಂಜರ್ ಅಂತಿದ್ದಾರೆ ತಜ್ಞರು.

Published On - 11:16 am, Mon, 12 April 21

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ