Karnataka Lockdown: ಪರಿಸ್ಥಿತಿ ಕೈಮೀರುತ್ತಿದೆ.. ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ: ಮುಖ್ಯಮಂತ್ರಿ ಯಡಿಯೂರಪ್ಪ

Karnataka Lockdown Latest Updates: ಲಾಕ್​ಡೌನ್ ಮಾಡಿದರೆ ಜನರಿಗೆ ತೊಂದರೆ ಆಗುತ್ತೆ. ಲಾಕ್​ಡೌನ್​ನಿಂದ ತೊಂದರೆ ಬಗ್ಗೆ ಸರ್ಕಾರಕ್ಕೂ ಗೊತ್ತಿದೆ. ಆದರೆ ಪರಿಸ್ಥಿತಿ ಕೈಮೀರುತ್ತಿದೆ. ಈ ಹಿನ್ನೆಲೆಯಲ್ಲಿ, ವಿಪಕ್ಷದವರು ಯಾವುದೇ ಸಲಹೆ ನೀಡಿದರೂ ಸ್ವೀಕರಿಸ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

Karnataka Lockdown: ಪರಿಸ್ಥಿತಿ ಕೈಮೀರುತ್ತಿದೆ.. ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ:  ಮುಖ್ಯಮಂತ್ರಿ ಯಡಿಯೂರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ
Follow us
ಸಾಧು ಶ್ರೀನಾಥ್​
|

Updated on:Apr 12, 2021 | 12:53 PM

ಬೀದರ್: ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನರು ಸಹಕರಿಸದಿದ್ದರೆ ಲಾಕ್​ಡೌನ್ ಅನಿವಾರ್ಯವಾಗುತ್ತೆ. ಲಾಕ್​ಡೌನ್ ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ. ಹಾಗಾಗಿ ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೀದರ್​ನಲ್ಲಿ ಟಿವಿ9ಗೆ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಲಾಕ್​ಡೌನ್ ಮಾಡಿದರೆ ಜನರಿಗೆ ತೊಂದರೆ ಆಗುತ್ತೆ. ಲಾಕ್​ಡೌನ್​ನಿಂದ ತೊಂದರೆ ಬಗ್ಗೆ ಸರ್ಕಾರಕ್ಕೂ ಗೊತ್ತಿದೆ. ಆದರೆ ಪರಿಸ್ಥಿತಿ ಕೈಮೀರುತ್ತಿದೆ. ಈ ಹಿನ್ನೆಲೆಯಲ್ಲಿ, ವಿಪಕ್ಷದವರು ಯಾವುದೇ ಸಲಹೆ ನೀಡಿದರೂ ಸ್ವೀಕರಿಸ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬಸವಕಲ್ಯಾಣ ಅಸೆಂಬ್ಲಿ ಉಪಚುನಾವಣೆ ಪ್ರಚಾರಕ್ಕಾಗಿ ಜಿಲ್ಲೆಗೆ ಆಗಮಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಕಾರ್ಯಕರ್ತ ರಾಜುಮಂಟಳ್ ಅವರ ಮನೆಗೆ ಇದೀಗ ಭೇಟಿ ನೀಡಿದ್ದಾರೆ. ಬಸವಕಲ್ಯಾಣದ ಗಂಗಾ ಕಾಲೋನಿಯಲ್ಲಿ ಕಾರ್ಯಕರ್ತ ರಾಜುಮಂಟಳ್ ಮನೆಯಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ ಸೋಮಣ್ಣ, ಪ್ರಭು ಚೌಹಾಣ್, ಸಂಸದ ಭಗವಂತ ಖೂಬಾ ಸೇರಿ‌ ಹಲವಾರು ನಾಯಕರು ಸಾಥ್ ನೀಡಿದ್ದಾರೆ.

ಲಾಕ್​ಡೌನ್​ ಬಗ್ಗೆ ನಾನಾಗಲಿ, ಸಿಎಂ ಆಗಲಿ ಹೇಳಿಲ್ಲ ಇನ್ನು ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಅವರು ಬೆಂಗಳೂರಿನಲ್ಲಿ ಮಾತನಾಡಿದ್ದು “ಲಾಕ್​ಡೌನ್​ ಬಗ್ಗೆ ನಾನಾಗಲಿ, ಸಿಎಂ ಆಗಲಿ ಹೇಳಿಲ್ಲ. ಹಳ್ಳಿಗಳಲ್ಲಿರುವ ಜನರು ಎಚ್ಚರಿಕೆಯಿಂದ ಇರಬೇಕು. ಜನರು ಅನಗತ್ಯವಾಗಿ ಗುಂಪು ಸೇರೋದು ಬಿಡಬೇಕು. ನಾವೇ ನಿರ್ಬಂಧ ಹಾಕ್ಕೊಂಡ್ರೆ ಲಾಕ್​ಡೌನ್ ಅವಶ್ಯವಿಲ್ಲ. ಸರ್ಕಾರ ಪೂರ್ವಯೋಜಿತವಾಗಿ ಕ್ರಮ ಕೈಗೊಳ್ಳುತ್ತಿದೆ. ಲಾಕ್​ಡೌನ್ ಮಾಡೋದು ನಮಗೆ ಸುತರಾಂ ಇಷ್ಟವಿಲ್ಲ. ಲಾಕ್​ಡೌನ್‌ನಿಂದ ಎಷ್ಟು ಆರ್ಥಿಕ ಕಷ್ಟ ಎದುರಾಗಲಿದೆ ಎಂಬುದು ಗೊತ್ತಿದೆ. ಪ್ರತಿಯೊಬ್ಬರು ತಮಗೆ ತಾವೇ ನಿರ್ಬಂಧ ಹಾಕಿಕೊಳ್ಳಬೇಕು. ಈ ಯುಗಾದಿಯಲ್ಲಿ ಕೊವಿಡ್ ಬೇವು, ಲಸಿಕೆ ಬೆಲ್ಲ ಎಂಬಂತಾಗಿದೆ ಎಂದು ಹೇಳಿದ್ದಾರೆ.

ತಪ್ಪದೇ ಇದನ್ನೂ ಓದಿ:  2ನೇ ಅಲೆ ಸಿಕ್ಕಾಪಟ್ಟೆ ಡೇಂಜರಸ್: ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ, ಲಾಕ್​ಡೌನ್​ ಮುನ್ಸೂಚನೆ?

Published On - 10:45 am, Mon, 12 April 21

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ