ಬಿಜೆಪಿ ಮುಖಂಡ ಶೇಖರಪ್ಪ ಮನೆ ಮೇಲೆ ಕಿಡಿಗೇಡಿಗಳಿಂದ ದಾಳಿ; ಜೆಡಿಎಸ್ ಕಾರ್ಯಕರ್ತರ ವಿರುದ್ಧ ಆರೋಪ
ಅರಿಸಿಕೆರೆ ಶಾಸಕ ಶಿವಲಿಂಗೇಗೌಡ ಅವರ ಬೆಂಬಲಿಗರು ಗಲಾಟೆ ಮಾಡಿ ತೊಂದರೆ ಕೊಡುತ್ತಿದ್ದಾರೆ. ಈ ರೀತಿಯ ದಾಳಿ ನಡೆಸುವಂತೆ ಶಿವಲಿಂಗೇಗೌಡರು ಕುಮ್ಮಕ್ಕು ನೀಡಿದ್ದಾರೆ ಎಂದು ಶೇಖರಪ್ಪ ಪತ್ನಿ ಆರೋಪ ಮಾಡಿದ್ದಾರೆ.

ಹಾಸನ: ಬಿಜೆಪಿ ಮುಖಂಡ ಶೇಖರಪ್ಪ ಮನೆ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರದಲ್ಲಿ ನಡೆದಿದೆ. ನಿನ್ನೆ ರಾತ್ರಿ ಮನೆ ಮೇಲೆ ದಾಳಿ ಮಾಡಿರುವ ಗುಂಪು, ಮನೆಯ ಕಿಟಕಿ ಗಾಜು ಮತ್ತು ಕಾರಿನ ಗಾಜು ಪುಡಿ ಮಾಡಿ ಪರಾರಿಯಾಗಿದ್ದಾರೆ. ಜೆಡಿಎಸ್ ಕಾರ್ಯಕರ್ತರೇ ಈ ರೀತಿಯ ದುಷ್ಕೃತ್ಯ ಎಸಗಿದ್ದಾರೆ ಎಂದು ಅವರ ವಿರುದ್ಧ ಆರೋಪ ಮಾಡಲಾಗಿದೆ.
ಅರಿಸಿಕೆರೆ ಶಾಸಕ ಶಿವಲಿಂಗೇಗೌಡ ಅವರ ಬೆಂಬಲಿಗರು ಗಲಾಟೆ ಮಾಡಿ ತೊಂದರೆ ಕೊಡುತ್ತಿದ್ದಾರೆ. ಈ ರೀತಿಯ ದಾಳಿ ನಡೆಸುವಂತೆ ಶಿವಲಿಂಗೇಗೌಡರು ಕುಮ್ಮಕ್ಕು ನೀಡಿದ್ದಾರೆ ಎಂದು ಶೇಖರಪ್ಪ ಪತ್ನಿ ಆರೋಪ ಮಾಡಿದ್ದಾರೆ. ಇನ್ನು ರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಮತ್ತು 20ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರ ವಿರುದ್ಧ ಆರೋಪ ಮಾಡಲಾಗಿದ್ದು, ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಜತೆ ಗುರುತಿಸಿಕೊಂಡಿದ್ದ ಶೇಖರಪ್ಪ, ಇತ್ತೀಚೆಗೆ ಸಕ್ರಿಯವಾಗಿ ಬಿಜೆಪಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು ಎಂಬ ಕಾರಣಕ್ಕೆ ಈ ರೀತಿಯ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಇನ್ನು ರಾಂಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ್ ಕೂಡ ಪ್ರತಿ ದೂರು ನೀಡಿದ್ದು, ತಮ್ಮ ಮೇಲೆ ಹಲ್ಲೆ ಮಾಡಿ ವಾಹನ ಜಖಂ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ; ಬಿಜೆಪಿ ಕೈವಾಡ ಎಂದ ಆಪ್
ಗ್ರಾಮ ಪಂಚಾಯತಿ ಸದಸ್ಯೆ ಮನೆ ಮೇಲೆ ದಾಳಿ; ಮಣ್ಣು ತೆಗೆಯುವ ವಿಚಾರಕ್ಕೆ ಕಿಡಿಗೇಡಿಗಳಿಂದ ದಾಂದಲೆ
(Stone pelt by mischief on the house of BJP leader shekarappa in Hassan)