‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’; ಬೆಳ್ಳಂಬೆಳಗ್ಗೆ ಬಿಡುಗಡೆಯಾದ ಸಿಡಿ ಲೇಡಿಯ ಇನ್ನೊಂದು ವಿಡಿಯೋದಲ್ಲಿ ಹೇಳಿಕೆ!

|

Updated on: Mar 27, 2021 | 12:13 PM

ನಾನು ಹೇಳಿಕೆ ನೀಡಬೇಕಾದರೆ ಪೋಷಕರು ಇರಬೇಕು. ನನ್ನ ಕಣ್ಣು ಮುಂದೆ ತಂದೆ, ತಾಯಿ, ಅಜ್ಜಿ ಸಹೋದರಿರಬೇಕು.‘ನನ್ನ ಪೋಷಕರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’.

‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’; ಬೆಳ್ಳಂಬೆಳಗ್ಗೆ ಬಿಡುಗಡೆಯಾದ ಸಿಡಿ ಲೇಡಿಯ ಇನ್ನೊಂದು ವಿಡಿಯೋದಲ್ಲಿ ಹೇಳಿಕೆ!
Follow us on

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯ ಮತ್ತೊಂದು ವಿಡಿಯೋ ಬೆಳ್ಳಂಬೆಳಗ್ಗೆ ಬಿಡುಗಡೆಯಾಗಿದೆ. ರಮೇಶ್ ಜಾರಕಿಹೊಳಿ ಒಂದೇ ದಿನದಲ್ಲಿ ಸರ್ಕಾರ ಬೀಳಿಸುತ್ತೇನೆ ಎಂದು ಹೇಳುತ್ತಾರೆ. ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಂದು ಹೇಳುತ್ತಾರೆ. ಎಲ್ಲರನ್ನೂ ಜೈಲಿಗೆ ಹಾಕಿಸುವುದಾಗಿಯೂ ರಮೇಶ್ ಹೇಳ್ತಾರೆ. ಅವರು ಈ ರೀತಿಯಾಗಿ ಹೇಳುತ್ತಾರೆಂದರೆ ಏನು ಅರ್ಥ? ಜನರೇ ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಎಷ್ಟು ಹಣ ಬೇಕಾದರೂ ಖರ್ಚು ಮಾಡುತ್ತೇನೆಂದು ಹೇಳ್ತಾರೆ. ನಮ್ಮ ತಂದೆ, ತಾಯಿ ತಲೆ ಬೇಕಿದ್ದರೂ ತೆಗೆಯಬಹುದು. ನಾಳೆ ದಿನ ನನ್ನನ್ನೇ ಸಾಯಿಸಬಹುದು. ಏನಾಗುತ್ತೆಂದು ಯಾರಿಗೂ ಗೊತ್ತಿಲ್ಲ. ನಾನು ಹೇಳಿಕೆ ನೀಡಬೇಕಾದರೆ ಪೋಷಕರು ಇರಬೇಕು. ನನ್ನ ಕಣ್ಣು ಮುಂದೆ ತಂದೆ, ತಾಯಿ, ಅಜ್ಜಿ ಸಹೋದರಿರಬೇಕು.‘ನನ್ನ ಪೋಷಕರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’. ನನಗೆ ಅಷ್ಟೊಂದು ಕಿರುಕುಳವಾಗುತ್ತಿದೆ. ನನಗೆ ನ್ಯಾಯ ಕೊಡಿಸಿ ಎಂದು ಯುವತಿ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾಳೆ

ವಿಡಿಯೋದಲ್ಲಿ ಇನ್ನೂ ಏನೇನಿದೆ?
ಮಾರ್ಚ್ 2ರಂದು CD ರಿಲೀಸ್ ಆಯ್ತು. ಆ CDಯನ್ನು ಯಾರು ರಿಲೀಸ್ ಮಾಡಿದರೆಂದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ವಿಡಿಯೋ ಬರುತ್ತಿರುವುದನ್ನು ನೋಡಿ ಕರೆ ಮಾಡಿದರು. ನಾನು ನರೇಶ್ ಅಣ್ಣಗೆ ಕರೆ ಮಾಡಿ ಮಾತನಾಡಿದ್ದೆ. ಏನು ಮಾಡಲಿ ಅಣ್ಣಾ ಎಂದು ನರೇಶ್ ಜತೆ ಮಾತಾಡಿದ್ದೆ. ಈ ವಿಚಾರದಲ್ಲಿ ನಾನು ತುಂಬಾ ಚಿಕ್ಕವನು ಎಂದಿದ್ದರು. ಇದಕ್ಕೆ ಪೊಲಿಟಿಕಲ್ ಸಪೋರ್ಟ್ ಬೇಕೆಂದು ಹೇಳಿದ್ದರು. ತುಂಬಾ ‘ದೊಡ್ಡವರ ಜತೆ ಮಾತಾಡೋಣ ಎಂದು ಹೇಳಿದ್ದರು. ಸಿದ್ದರಾಮಯ್ಯ, ಡಿಕೆಶಿ ಜತೆ ಮಾತನಾಡೋಣ ಎಂದಿದ್ದರು. ಅವರ ಜತೆ ಮಾತನಾಡಿದರೆ ನ್ಯಾಯ ಸಿಗುತ್ತೆಂದು ನರೇಶ್ ಅಣ್ಣ ಹೇಳಿದ್ದರು.

ಅಲ್ಲದೇ, ನಾನಿರುವ ಜಾಗಕ್ಕೆ ನರೇಶ್ ಅಣ್ಣ ಅವರು ಬಂದಿದ್ದರು. ಡಿ.ಕೆ.ಶಿವಕುಮಾರ್ ಮನೆಗೆ ಹೋಗೋಣ ಎಂದಿದ್ದರು. ಆ ಸಮಯದಲ್ಲಿ ನಮ್ಮ ಮನೆಯಿಂದ ಪದೇಪದೆ ಕರೆಮಾಡುತ್ತಿದ್ದರು. ನಮ್ಮ ಮನೆಯವರು ಅಳುವುದು ಕೇಳಿ ಭಯವಾಯಿತು. ಅವರ ಜೀವಕ್ಕೆ ಏನಾದ್ರು ಆಗುತ್ತೆಂಬ ಭಯ ನನಗಿತ್ತು. ಆಗ ನಮ್ಮ ಪೋಷಕರನ್ನು ನಾನು ಸಮಾಧಾನ ಮಾಡಿದ್ದೆ. ಡಿಕೆಶಿ ಮನೆಗೆ ಹೋಗುತ್ತಿದ್ದೇನೆಂದು ಅವರಿಗೆ ಹೇಳಿದ್ದೆ. ನಾವು ಡಿಕೆಶಿ ಮನೆಯ ಬಳಿ ಹೋಗಿದ್ದೆವು ಆದರೆ ಅವರು ಸಿಕ್ಕಿರಲಿಲ್ಲ. ಭೇಟಿ ಮಾಡಲು ಹೋದಾಗ ಡಿ.ಕೆ.ಶಿವಕುಮಾರ್ ಸಿಗಲಿಲ್ಲ. ನಾನು ಸೇಫಾಗಿದ್ದೇನೆ, ನಾನು ಕಿಡ್ನ್ಯಾಪ್ ಆಗಿಲ್ಲ. ನಮ್ಮ ಪೋಷಕರು ಎಲ್ಲಿದ್ದಾರೆಂದು ನನಗೆ ಗೊತ್ತಿಲ್ಲ. ನಮ್ಮ ತಂದೆ, ತಾಯಿ, ಅಜ್ಜಿ, ಸಹೋದರರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಅವರನ್ನು ರಕ್ಷಣೆ ನೀಡಿ. ಎಸ್‌ಐಟಿ ಅಧಿಕಾರಿಗಳ ಬಳಿ ಮನವಿ ಮಾಡಿದ ಯುವತಿ ಕಳೆದ 24 ದಿನಗಳಿಂದ ತುಂಬಾ ಟಾರ್ಚರ್ ಆಗುತ್ತಿದೆ. ನಾನು ಏನೇ ಹೇಳಲು ಬಂದ್ರು ಅದು ರಿವರ್ಸ್ ಆಗುತ್ತಿದೆ. ನನ್ನ ಮಾನ, ಮರ್ಯಾದೆ ಹೋಗಿದೆ, ನ್ಯಾಯ ಸಿಗಬೇಕು. ನಾನು ಸಂತ್ರಸ್ತೆಯಾಗಿರುವುದರಿಂದ ನ್ಯಾಯ ಸಿಗಬೇಕು ಎಂದು ವಿಡಿಯೊದಲ್ಲಿ ಯುವತಿ ಹೇಳಿಕೆ ನೀಡಿದ್ದಾಳೆ.

Published On - 8:13 am, Sat, 27 March 21