ಅಂಬೇಡ್ಕರ್ ಇರದಿದ್ದರೆ ಇಂತಹ ಸಂವಿಧಾನ ಬರ್ತಿರಲಿಲ್ಲ-ಸಿದ್ದರಾಮಯ್ಯ

|

Updated on: Dec 08, 2019 | 7:16 PM

ಬಾಗಲಕೋಟೆ: ನಾನು ವಕೀಲ ಆಗುವುದನ್ನು ಶ್ಯಾನುಭೋಗ ತಪ್ಪಿಸಿಬಿಟ್ಟಿದ್ದ. ಊರಿನವರನ್ನೆಲ್ಲ ಸೇರಿಸಿ ಪಂಚಾಯಿತಿ ಮಾಡಿ ಲಾ ಕಲಿತೆ ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಸಭೆಯಲ್ಲಿ ಮಾತನಾಡುತ್ತ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹಳೆ ಕಳೆದು ಹೋದ ನೆನೆಪುಗಳನ್ನು ಮೆಲುಕು ಹಾಕಿದ್ದಾರೆ. ನಾನು ಲಾಯರ್ ಆಗೋದನ್ನ ತಪ್ಪಿಸಿಬಿಟ್ಟಿದ್ದ ಶಾನುಭೋಗ. ನಂತ್ರ ಒಂದ್ಸಾರಿ ಅವನೇ ನನಗೆ ವಿಟ್ನೆಸ್​ ಆಗಿ ಸಿಕ್ಕಿಹಾಕಿಕೊಂಡಿದ್ದ. ಅವನಿಗೆ ಕ್ರಾಸ್​ ಎಕ್ಸಾಮಿನ್​ ಮಾಡಿ ಸುಸ್ತುಮಾಡಿಬಿಟ್ಟಿದ್ದೆ. ಏನ್ರಿ ಶ್ಯಾನುಭೋಗರೇ ಕುರುಬರು ಲಾಯರ್ ಆಗಕ್ಕಾಗಲ್ವಾ? ಎಂದು ಶ್ಯಾನುಭೋಗನನ್ನು ನಾನು […]

ಅಂಬೇಡ್ಕರ್ ಇರದಿದ್ದರೆ ಇಂತಹ ಸಂವಿಧಾನ ಬರ್ತಿರಲಿಲ್ಲ-ಸಿದ್ದರಾಮಯ್ಯ
Follow us on

ಬಾಗಲಕೋಟೆ: ನಾನು ವಕೀಲ ಆಗುವುದನ್ನು ಶ್ಯಾನುಭೋಗ ತಪ್ಪಿಸಿಬಿಟ್ಟಿದ್ದ. ಊರಿನವರನ್ನೆಲ್ಲ ಸೇರಿಸಿ ಪಂಚಾಯಿತಿ ಮಾಡಿ ಲಾ ಕಲಿತೆ ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಭೆಯಲ್ಲಿ ಮಾತನಾಡುತ್ತ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹಳೆ ಕಳೆದು ಹೋದ ನೆನೆಪುಗಳನ್ನು ಮೆಲುಕು ಹಾಕಿದ್ದಾರೆ.

ನಾನು ಲಾಯರ್ ಆಗೋದನ್ನ ತಪ್ಪಿಸಿಬಿಟ್ಟಿದ್ದ ಶಾನುಭೋಗ. ನಂತ್ರ ಒಂದ್ಸಾರಿ ಅವನೇ ನನಗೆ ವಿಟ್ನೆಸ್​ ಆಗಿ ಸಿಕ್ಕಿಹಾಕಿಕೊಂಡಿದ್ದ. ಅವನಿಗೆ ಕ್ರಾಸ್​ ಎಕ್ಸಾಮಿನ್​ ಮಾಡಿ ಸುಸ್ತುಮಾಡಿಬಿಟ್ಟಿದ್ದೆ. ಏನ್ರಿ ಶ್ಯಾನುಭೋಗರೇ ಕುರುಬರು ಲಾಯರ್ ಆಗಕ್ಕಾಗಲ್ವಾ? ಎಂದು ಶ್ಯಾನುಭೋಗನನ್ನು ನಾನು ಪ್ರಶ್ನೆ ಮಾಡಿದ್ದೆ ಎಂದು ಸಿದ್ದರಾಮಯ್ಯ ತಮ್ಮ ನೆನಪುಗಳನ್ನು ಬಿಚ್ಚಿಟ್ರು.

ಸತತ ಪ್ರಯತ್ನ, ಛಲ, ಶ್ರದ್ಧೆ ಇದ್ದರೆ ಮಾತ್ರ ಸಾಧಿಸಬಹುದು. ಅಂಬೇಡ್ಕರ್ ಇರದಿದ್ದರೆ ಇಂತಹ ಸಂವಿಧಾನ ಬರ್ತಿರಲಿಲ್ಲ. ನಾನು ಸಿಎಂ ಆಗಿದ್ದು ಅಂಬೇಡ್ಕರ್​ರ​ ಸಂವಿಧಾನದಿಂದಲೇ. ಈಗ ಪ್ರಧಾನಿ ಆಗಿದ್ದಾರಲ್ಲ ಅವರೂ ಸಹ ಇದೇ ಸಂವಿಧಾನದಿಂದಲೇ ಪ್ರಧಾನಮಂತ್ರಿ ಆಗಿದ್ದಾರೆ. ಒಬ್ಬ ಅಂಬೇಡ್ಕರ್​ ದೇಶಕ್ಕೆ ಇಷ್ಟೊಂದು ಕೊಡುಗೆ ಕೊಟ್ಟಿದ್ದಾರೆ. ಸಮಾಜಕ್ಕೆ ನಾವು ಕಿಂಚಿತ್ತಾದರೂ ಕೊಡುಗೆ ಕೊಡಬೇಕಲ್ವಾ? ಎಂದು ಬಾದಾಮಿಯಲ್ಲಿ ಸಿದ್ದರಾಮಯ್ಯ ಅಂಬೇಡ್ಕರ್ ಅವರನ್ನು ನನೆದು ಸಂವಿಧಾನವನ್ನು ಹೊಗಳಿದ್ದಾರೆ.

Published On - 7:13 pm, Sun, 8 December 19