ಜೀವನದಲ್ಲಿ ಜಿಗುಪ್ಸೆ.. ಮಹಿಳೆ ನೇಣಿಗೆ ಶರಣು

ಪತಿಯಿಂದ ದೂರಾಗಿ ತವರು ಮನೆಗೆ ಬಂದು ಸೇರಿದ್ದ ರಾಧಾ ಎಂಬುವವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ.. ಮಹಿಳೆ ನೇಣಿಗೆ ಶರಣು
ಮಾದನಾಯಕನಹಳ್ಳಿ ಪೊಲೀಸ್ ಠಾಣೆ

Updated on: Jan 04, 2021 | 8:23 AM

ನೆಲಮಂಗಲ: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಶ್ರೀಕಂಠಪುರದಲ್ಲಿ ನಡೆದಿದೆ. ರಾಧಾ(25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಜೀವನದಲ್ಲಿ ಆಸೆಗಳ ತುಂಬಿದ ಚೀಲ ಹೊತ್ತು ಸಾಗುವಾಗ ಎಲ್ಲೋ ಒಂದು ಕಡೆ ಕಾಲೆಡವಿ ಆಸೆಗಳನ್ನು ತುಂಬಿದ್ದ ಚೀಲ ನೆಲಕ್ಕೆ ಬಿದ್ದು ಆಸೆಗಳು ಚೂರಾದಾಗ ಜೀವನವೇ ಬೇಡಾಗಿ ಹೋಗುತ್ತೆ. ಹೀಗಾಗಿಯೇ ಹಿರಿಯರು ಹೇಳೋದು ದೇವರು ದಾರಿ ತೋರಿಸಿದಂತೆ ನಡೆಯಬೇಕೆಂದು.

ಆದರೆ ಇಲ್ಲೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಪತಿಯಿಂದ ದೂರಾಗಿ ತವರು ಮನೆಗೆ ಬಂದು ಸೇರಿದ್ದ ರಾಧಾ ಎಂಬುವವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹುಣಸೂರು ತಾಲೂಕಿನಲ್ಲಿ ಸಾಲಬಾಧೆಯಿಂದ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ