ಮಹಾಮೋಸ: ಹಣ ದುಪ್ಪಟಾಗೋ ಆಸೆಗೆ ಬಿದ್ದು ₹16 ಲಕ್ಷ ಕಳ್ಕೊಂಡ.. ಮತ್ತೊಂದು ಕಡೆ ಮಹಿಳೆಗೆ ಸ್ವಂತ ಮೈದುನನಿಂದಲೇ ಮೋಸ
ಆಕೆಗೆ ಪತಿ ಇಲ್ಲ, ಪತಿ ಇಲ್ಲದೆ ಒಂಟಿಯಾಗಿದ್ದ ಮಹಿಳೆಗೆ ಸ್ವಂತ ಮೈದುನನೇ ಮೋಸ ಮಾಡಿದ್ದಾನೆ. ದಿಕ್ಕು ತೋಚದೆ ಆ ಮಹಿಳೆ ಪರದಾಡ್ತಿದ್ದಾಳೆ. ಮತ್ತೊಂದು ಪ್ರಕರಣದಲ್ಲಿ ಸರ್ಕಾರಿ ಯೋಜನೆ ಹೆಸರಲ್ಲೇ ವಂಚಕನೊಬ್ಬ ಚೀಟ್ ಮಾಡಿ ಪರಾರಿಯಾಗಿದ್ದಾನೆ. ಈ ಎರಡೂ ಕೇಸ್ಗಳ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಮಡಿಕೇರಿ: ಕೆಲವರು ಮೋಸ ಮಾಡೋಕೆ ಅಂತಾನೇ ಹುಟ್ಟಿರ್ತಾರೆ. ಅವ್ರಿಗೆ ಅಮಾಯಕರೇ ಟಾರ್ಗೆಟ್. ಇನ್ನೂ ಕೆಲ ಮಂದಿ ಮೋಸ ಹೋಗೋಕೆ ಅಂತಾನೆ ರೆಡಿ ಇರ್ತಾರೆ, ಇಂತಹವರೇ ಮೋಸಗಾರರ ಬಲೆಗೆ ಬೀಳೋದು.
ಹೂಡಿಕೆ ಮಾಡಿದ ₹16 ಲಕ್ಷ ಮಂಗಮಾಯ! ಹಣ ದುಪ್ಪಟಾಗೋ ಆಸೆಗೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡರೂ ಜನರಿಗೆ ಮಾತ್ರ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇಂತಹ ಮತ್ತೊಂದು ಮೋಸದ ಜಾಲವೀಗ ಬೆಳಕಿಗೆ ಬಂದಿದೆ. ಸರ್ಕಾರದ ಯೋಜನೆಯೊಂದರ ಹೆಸ್ರಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೊಡಗು ಜಿಲ್ಲೆ ಕುಶಾಲನಗರದ ಅಶ್ವಥ್ ಎಂಬ ವ್ಯಕ್ತಿ ಸುಮಾರು 16 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿ ಈಗ ಪರದಾಡುತ್ತಿದ್ದಾರೆ. ಅಷ್ಟಕ್ಕೂ ಇಂತಹ ಮೋಸದ ಆರೋಪ ಕೇಳಿಬಂದಿರೋದು ಬೆಂಗಳೂರು ಮೂಲದ ವಿನಯ್ ಭಾರಧ್ವಾಜ್ ಎಂಬುವವರ ಮೇಲೆ.
ಕುಶಾಲನಗರ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ. ವಿನಯ್ ವಿರುದ್ಧ ಬೆಂಗಳೂರಿನ ಪೀಣ್ಯಾ ಮತ್ತು ರಾಜಗೋಪಾಲನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದು, ತಲೆಮರೆಸಿಕೊಂಡಿದ್ದಾರೆಂಬ ಆರೋಪ ಇದೆ. ರಾಜ್ಯದ ವಿವಿಧೆಡೆ ಹಲವು ಶಾಖೆ ಹೊಂದಿದ್ದು, ಎಲ್ಲೆಡೆ ಗ್ರಾಹಕರು ಕೋಟ್ಯಾಂತರ ರೂ ವಂಚನೆಗೊಳಗಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಮಹಿಳೆಗೆ ಸಂಬಂಧಿಕರೇ ಮಾಡಿದ್ರು ಮಹಾಮೋಸ! ರಾಯಚೂರು: ಬಿಸಿಲನಾಡು ರಾಯಚೂರಿನ ರಾಂಪುರ ಗ್ರಾಮದ ನಿವಾಸಿ ಸರಸ್ವತಿ ಅವರ ಪತಿ ರವಿಂದ್ರರಾಜ 28 ವರ್ಷದ ಹಿಂದೇಯೇ ಮೃತಪಟ್ಟಿದ್ದಾರೆ. ಆದ್ರೆ ಈ ಮಹಿಳೆ ಪತಿ ಹೆಸರಲ್ಲಿದ್ದ ಜಮೀನಿನ ಮೇಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ 2018ರಿಂದ ನಿರಂತರವಾಗಿ ಸಾಲ ಪಡೆಯಲಾಗಿದೆ ಅಂತೆ. ಆದ್ರೆ ಸಾಲ ಪಡೆದಿರುವುದು ಅಸಲಿಗೆ ಈ ಮಹಿಳೆಗೆ ತಿಳಿದಿರಲಿಲ್ಲ. ಬ್ಯಾಂಕ್ ನೋಟಿಸ್ ಬಂದ ನಂತರ ಶಾಕ್ ಆಗಿದ್ದು ನೋಟಿಸ್ ಹಿಡ್ಕೊಂಡು ಬ್ಯಾಂಕ್ನಲ್ಲಿ ವಿಚಾರಿಸಿದಾಗ ಬೆಚ್ಚಿ ಬೀಳಿಸುವ ಸಂಗತಿ ಹೊರಬಿದ್ದಿದೆ. ಅಸಲಿಗೆ ಈ ಮಹಿಳೆಯ ಮೈದುನನೇ ಇಂತಹ ದೋಖಾ ಮಾಡಿರುವ ಆರೋಪ ಕೇಳಿಬಂದಿದೆ.
ಒಟ್ನಲ್ಲಿ ಮೋಸ ಮಾಡೋರು ಹೇಗಾದ್ರೂ ಮೋಸ ಮಾಡೇ ಮಾಡ್ತಾರೆ. ಆದ್ರೆ ಮೋಸ ಹೋಗುವವರು ಅಲರ್ಟ್ ಆಗಿದ್ರೆ ಇಂಥ ಘಟನೆಗಳು ಮರುಕಳಿಸುವುದಿಲ್ಲ. ಹೀಗಾಗಿ ಯಾರನ್ನಾದರೂ ಪೂರ್ತಿ ನಂಬುವ ಮುನ್ನ ಎಚ್ಚರವಾಗಿರಿ.
ಷೇರು ಬೆಲೆಯಲ್ಲಿ ಮೋಸ: ಮುಕೇಶ್ ಅಂಬಾನಿಗೂ ದಂಡ.. ರಿಲಯನ್ಸ್ ಸಮೂಹಕ್ಕೆ 70 ಕೋಟಿ ರೂ ದಂಡ ವಿಧಿಸಿದ ಸೆಬಿ