ಕೂಲಿ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದ ಮಹಿಳೆ ತಲುಪಿದ್ದು ಮಾತ್ರ ಮಸಣಕ್ಕೆ..
ಕೂಲಿಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿಯಾಗಿ ಗಾಡಿಯಲ್ಲಿದ್ದ ಮಹಿಳೆ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಡಂಗ ಎಡಪಾಲದ ಬಳಿ ನಡೆದಿದೆ.

ಕೊಡಗು: ಕೂಲಿಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿಯಾಗಿ ಗಾಡಿಯಲ್ಲಿದ್ದ ಮಹಿಳೆ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಡಂಗ ಎಡಪಾಲದ ಬಳಿ ನಡೆದಿದೆ. ಪಿಕಪ್ ವಾಹನದಲ್ಲಿದ್ದ ಪಾಲಿಬೆಟ್ಟದ ನಿವಾಸಿ ಮಹೇಶ್ವರಿ(30) ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.
ಇನ್ನು, ಅಪಘಾತದಲ್ಲಿ 13 ಜನರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ ವಾಹನ ಕಡಂಗ ಎಡಪಾಲ ಬಳಿ ತೆರಳುವಾಗ ರಸ್ತೆ ಬದಿ ಇದ್ದು ಹಳ್ಳಕ್ಕೆ ಉರುಳಿ ಅವಘಡ ಸಂಭವಿಸಿದೆ. ಕಾರ್ಮಿಕರೆಲ್ಲರು ಕೂಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವಾಗ ವಾಹನ ಹಳ್ಳಕ್ಕೆ ಉರುಳಿದೆ. ಪಿಕಪ್ ವಾಹನದಲ್ಲಿ ಒಟ್ಟು 15 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಗ್ರಾ.ಪಂ ಎಲೆಕ್ಷನ್ನಲ್ಲಿ ಸೋತಿದ್ದಕ್ಕೆ ಹಲ್ಲೆ ಆರೋಪ: ಗುಂಪು ಘರ್ಷಣೆಯಲ್ಲಿ ನಿವೃತ್ತ ಶಿಕ್ಷಕ ಸಾವು
Published On - 10:56 pm, Sun, 3 January 21