
ಮೈಸೂರು: ಜಿಲ್ಲೆಯ ಹುಣಸೂರಿನಲ್ಲಿ ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. 60 ವರ್ಷದ ಹುಣಸೂರು TAPCMS (Taluk Agricultural Produce Co-operative Marketing Society Ltd) ಸದಸ್ಯೆ ರತ್ನಮ್ಮ ಎಂಬುವವರು ಅಪಘಾತದಲ್ಲಿ ಅಸು ನೀಗಿದ್ದಾರೆ.
ಘಟನೆಯಲ್ಲಿ ಮಹಿಳೆಯ ಪತಿ ಸತ್ಯನಾರಾಯಣ್ಗೆ ಗಂಭೀರ ಗಾಯಗಳಾಗಿದೆ. ದಂಪತಿ ಹುಣಸೂರು ಪಟ್ಟಣದ ಕಚೇರಿಯಲ್ಲಿ ಸಭೆ ಮುಗಿಸಿ ಹೋಗುವಾಗ ಘಟನೆ ಸಂಭವಿಸಿದೆ.
ಟಿಪ್ಪರ್ ಚಾಲಕನ ಅತಿ ವೇಗದಿಂದ ವಾಹನ ಚಾಲಯಿಸುತ್ತಿದ್ದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ. ಸದ್ಯ, ಪೊಲೀಸರು ಟಿಪ್ಪರ್ನ ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೀ ಕುಡಿಯುವ ವೇಳೆ.. ಉಸಿರು ಚೆಲ್ಲಿದ ಕುಂದಾನಗರಿಯ ಗ್ರಾ.ಪಂ ಚುನಾವಣೆ ಅಭ್ಯರ್ಥಿ