ಸರ್ಕಾರಿ ಜೀಪ್​ ಮೇಲೆ ಕೂತು ಪೋಸ್​ ಕೊಟ್ಟ ಚೆಲುವೆ.. ಯಾರು ಈ ಬೆಳದಿಂಗಳ ಬಾಲೆ?

| Updated By: ಸಾಧು ಶ್ರೀನಾಥ್​

Updated on: Nov 28, 2020 | 10:51 AM

ಅರಣ್ಯ ಇಲಾಖೆಯ ವಾಹನ ಮೇಲೆ ಕುಳಿತು ಅಪರಿಚಿತ ಮಾಡೆಲ್ ಒಬ್ಬಳು ಫೋಟೋಶೂಟ್ ಮಾಡಿಸಿಕೊಂಡಿರುವ ಘಟನೆ ಜಿಲ್ಲೆಯ ಯಲ್ಲಾಪುರದಲ್ಲಿ ಬೆಳಕಿಗೆ ಬಂದಿದೆ.

ಸರ್ಕಾರಿ ಜೀಪ್​ ಮೇಲೆ ಕೂತು ಪೋಸ್​ ಕೊಟ್ಟ ಚೆಲುವೆ.. ಯಾರು ಈ ಬೆಳದಿಂಗಳ ಬಾಲೆ?
ಸರ್ಕಾರಿ ವಾಹನದ ಮೇಲೆ ಪೋಸ್​ ಕೊಟ್ಟ ರೂಪದರ್ಶಿ
Follow us on

ಉತ್ತರ ಕನ್ನಡ: ಅರಣ್ಯ ಇಲಾಖೆಯ ವಾಹನ ಮೇಲೆ ಕುಳಿತು ಅಪರಿಚಿತ ಮಾಡೆಲ್ ಒಬ್ಬಳು ಫೋಟೋಶೂಟ್ ಮಾಡಿಸಿಕೊಂಡಿರುವ ಘಟನೆ ಜಿಲ್ಲೆಯ ಯಲ್ಲಾಪುರದಲ್ಲಿ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ವಾಹನವನ್ನು ದುರುಪಯೋಗ ಪಡಿಸಲಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾರು ಈ ಕಾನನದ ಬಾಲೆ?
ಅಂದ ಹಾಗೆ, ಈ ಬೆಳದಿಂಗಳ ಬಾಲೆ ಯಾರು ಎಂದು ತಿಳಿದುಬಂದಿಲ್ಲ. ಆದರೆ ಈಕೆ, ಯಲ್ಲಾಪುರದ ಮಂಚಿಕೇರಿ ಅರಣ್ಯ ವಲಯಕ್ಕೆ ಸೇರಿದ ಸರ್ಕಾರಿ ಜೀಪ್​ ಮೇಲೆ ಪೋಸ್​ ಕೊಟ್ಟಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ನಡುವೆ, ಜೀಪ್​ ಕೆಟ್ಟಿತ್ತು ಅಂತಾ ಪ್ರವಾಸಿ ಮಂದಿರದಲ್ಲಿ ನಿಲ್ಲಿಸಿದ್ದ ವಾಹನದ ಮೇಲೆ ರೂಪದರ್ಶಿಯ ಫೋಟೋಶೂಟ್​ ತೆಗೆಸಿಕೊಂಡಿದ್ದಾಳಂತೆ. ಈ ಕುರಿತು, ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.