AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳುಸುತ್ತಿನ ಕೋಟೆ ವೀಕ್ಷಣೆಯ ಎಂಟ್ರಿ ಟಿಕೆಟ್ ಹೆಸರಲ್ಲಿ ಮೋಸದಾಟ, ಸಾರ್ವಜನಿಕರ ಆಕ್ರೋಶ

ಒಬ್ಬರಿಗೆ 25ರೂಪಾಯಿ ಟಿಕೆಟ್ ನೀಡುವಲ್ಲಿ ಗೋಲಾಮಾಲ್ ನಡೆಸುತ್ತಿದ್ದಾರೆ ಅನ್ನೋ ಆರೋಪವಿದೆ. ಆನ್​ಲೈನ್ ಟಿಕೆಟ್ ಸಿಗದೆ ಜನ ಪರದಾಡುವಂತಾಗಿದ್ದು ತಾಸುಗಟ್ಟಲೇ ಕಾದ ಜನ ಕೊನೆಗೆ ಸಿಬ್ಬಂದಿ ಕೇಳಿದಷ್ಟು ಹಣವನ್ನು ಕೈಗಿಟ್ಟು ಕೋಟೆ ವೀಕ್ಷಣೆಗೆ ತೆರಳುತ್ತಿದ್ದಾರೆ.

ಏಳುಸುತ್ತಿನ ಕೋಟೆ ವೀಕ್ಷಣೆಯ ಎಂಟ್ರಿ ಟಿಕೆಟ್ ಹೆಸರಲ್ಲಿ ಮೋಸದಾಟ, ಸಾರ್ವಜನಿಕರ ಆಕ್ರೋಶ
ಏಳುಸುತ್ತಿನ ಕೋಟೆ
ಪೃಥ್ವಿಶಂಕರ
|

Updated on: Nov 28, 2020 | 9:50 AM

Share

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಏಳುಸುತ್ತಿನ ಕೋಟೆ ವೀಕ್ಷಣೆಗೆ ನಿತ್ಯ ಸಾವಿರಾರು ‌ಜನ ಬರುತ್ತಾರೆ. ಆದರೆ, ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಕೋಟೆ ಅಭಿವೃದ್ಧಿ, ಜನರಿಗೆ ಸೌಕರ್ಯ ಕಲ್ಪಿಸುವ ಕಾರ್ಯ ಕೈಗೊಂಡಿಲ್ಲ. ಇದರ ಬದಲಾಗಿ ಕೋಟೆ ಪ್ರವೇಶ ಟಿಕೆಟ್​ನಲ್ಲಿ ಗೋಲ್​ಮಾಲ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಎಂಟ್ರಿ ಟಿಕೆಟ್ ಹೆಸರಲ್ಲಿ ನಡೆದಿದೆಯಾ ಮೋಸದಾಟ..? ಅಂದಹಾಗೆ ಐತಿಹಾಸಿಕ ಕೋಟೆ, ಒನಕೆ ಓಬವ್ವ ಕಿಟಕಿ, ಗಾಳಿ ಮಂಟಪ, ಮೂಲ ಮುರುಘಾಮಠ, ದೇಗುಲ ವೀಕ್ಷಿಸಲು‌ ನಿತ್ಯ ಸಾವಿರಾರು ಜನ ಬರುತ್ತಾರೆ. ಆದ್ರೆ,‌ ಪ್ರವಾಸಿಗರಿಗೆ ಕೋಟೆಯಲ್ಲಿ‌ ಸಮರ್ಪಕ ಮೂಲ ಸೌಲಭ್ಯಗಳೇ ಸಿಗುವುದಿಲ್ಲ. ಈ ಬಗ್ಗೆ ಕೇಳಿದರೆ ಪುರಾತತ್ವ ಇಲಾಖೆ ಅಧಿಕಾರಿಗಳು ಕೇಂದ್ರ ಸರ್ಕಾರದತ್ತ ಬೊಟ್ಟು ತೋರಿಸುತ್ತಾರೆ.

ಒಬ್ಬರಿಗೆ 25ರೂಪಾಯಿ ಟಿಕೆಟ್ ನೀಡುವಲ್ಲಿ ಗೋಲಾಮಾಲ್ ನಡೆಸುತ್ತಿದ್ದಾರೆ ಅನ್ನೋ ಆರೋಪವಿದೆ. ಆನ್​ಲೈನ್ ಟಿಕೆಟ್ ಸಿಗದೆ ಜನ ಪರದಾಡುವಂತಾಗಿದ್ದು ತಾಸುಗಟ್ಟಲೇ ಕಾದ ಜನ ಕೊನೆಗೆ ಸಿಬ್ಬಂದಿ ಕೇಳಿದಷ್ಟು ಹಣವನ್ನು ಕೈಗಿಟ್ಟು ಕೋಟೆ ವೀಕ್ಷಣೆಗೆ ತೆರಳುತ್ತಿದ್ದಾರೆ. ಕೋಟೆ ಸಿಬ್ಬಂದಿ ಮೂಲಕ ಅಧಿಕಾರಿಗಳು ಗೋಲ್​ಮಾಲ್ ಮಾಡ್ತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಗೋಲ್ ಮಾಲ್‌ ನಡೆಯುತ್ತಿದೆ ಎಂದ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ.. ಈಗಾಗ್ಲೇ ಈ ಬಗ್ಗೆ ಕೋಟೆ ವಿಹಾರಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ‌ ನೀಡಿದ್ದಾರೆ. ಸರ್ಕಾರದ‌ ಹಣ ಜೇಬಿಗೇರಿಸಿಕೊಂಡು ಕೋಟೆ ಅಭಿವೃದ್ಧಿ ಕಡೆಗಣಿಸ್ತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಬಿಜೆಪಿ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಅವ್ರನ್ನ ಕೇಳಿದ್ರೆ, ಕೋಟೆ ಪ್ರವೇಶ ಟಿಕೆಟ್​ನಲ್ಲಿ ಗೋಲ್ ಮಾಲ್‌ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು ಅಂತಿದ್ದಾರೆ.

ಒಟ್ನಲ್ಲಿ ಐತಿಹಾಸಕ ಕೋಟೆಯನ್ನು ರಕ್ಷಿಸಬೇಕಿದ್ದ ಅಧಿಕಾರಿಗಳ ವಿರುದ್ಧವೇ ಈ ರೀತಿಯ ಗಂಭೀರ ಆರೋಪ ಕೇಳಿಬರುತ್ತಿದೆ. ಟಿಕೆಟ್ ಹಂಚಿಕೆಯಲ್ಲೇ ಗೋಲ್​ಮಾಲ್ ನಡೆಯುತ್ತಿದ್ರೆ, ಇನ್ನು ಅಭಿವೃದ್ಧಿ ವಿಚಾರದಲ್ಲಿ ಏನೆಲ್ಲಾ ಆಟ ಆಡಿರಬಹುದು ಅಂತಾ ಸ್ಥಳೀಯರು ಗೊಣಗುತ್ತಿದ್ದಾರೆ. ಕೂಡಲೇ ಸರ್ಕಾರ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೆ ಮುಂದಾಗಬೇಕಿದೆ.

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು