ಆ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಮುಸ್ಲಿಂ ಸಮುದಾಯದ ಸ್ಮಶಾನ ಖಾಸಗಿ ಜಾಗದಲ್ಲಿತ್ತು. ಖಾಸಗಿ ಜಾಗದ ಮಾಲೀಕರು ಕೂಡ ನೂರಾರು ವರ್ಷಗಳಿಂದ ಯಾವುದೇ ತಕರಾರು ಮಾಡಿರಲಿಲ್ಲ. ಆದ್ರೆ ಶತಮಾನಗಳ ಬಳಿಕ ಮಾಲೀಕ ಏಕಾಏಕಿ ಬಂದು ಅದು ಪೂರ್ವಜರ ಆಸ್ತಿ ಎಂದು ಜೆಸಿಬಿಯಿಂದ ಸ್ಮಶಾನವನ್ನ ನೆಲಸಮ ಮಾಡಿದ್ದಾರೆ. ಯಾರಿಗೂ ಹೇಳದೆ ಕೇಳದೆ ಪುರಾತನ ಕಾಲದ ಸ್ಮಶಾನ ನೆಲಸಮ ಮಾಡಿದ್ದಕ್ಕೆ ಮುಸ್ಲಿಂ ಸಮುದಾಯದ ಜನ ಆಕ್ರೋಶಗೊಂಡಿದ್ದಾರೆ. ಇದೆ ಕಾರಣಕ್ಕೆ ಸ್ಮಶಾನ ನೆಲಸಮ ಮಾಡಿದ ವ್ಯಕ್ತಿ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ನೂರಾರು ವರ್ಷ ಹಳೆಯ ಸಮಾಧಿ ನೆಲಸಮ.. ಮುಸ್ಲಿಂ ಗೋರಿಗಳನ್ನ (Muslims graveyard ) ಜೆಸಿಬಿಯಿಂದ ತೆರವು.. ತನ್ನದೇ ಜಮೀನು ಎಂದು ಹೇಳದೆಕೇಳದೆ ಜೆಸಿಬಿ ಬಳಸಿ ಗೋರಿಗಳ ನೆಲಸಮ… ಯಸ್, ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ (Ramasamudra, Yadgiri)..
ಹೌದು ರಾಮಸಮುದ್ರ ಗ್ರಾಮದಲ್ಲಿ ಕಳೆದ 200 ವರ್ಷಕ್ಕೂ ಅಧಿಕ ಕಾಲದಿಂದ ಗ್ರಾಮದ ಮುಸ್ಲಿಂ ಸಮುದಾಯದ ಜನ ಗ್ರಾಮದ ಹೊರ ಭಾಗದ ಒಂದು ಎಕರೆ ಜಮೀನಿನಲ್ಲಿ ಖಬರಿಸ್ತಾನ ಮಾಡಿಕೊಂಡಿದ್ದಾರೆ. ಆದ್ರೆ ಇದು ಖಾಸಗಿ ಜಮೀನು ಆಗಿದೆ. ಖಾಸಗಿ ಜಮೀನು ಮಾಲೀಕರಿಂದ ಒಪ್ಪಂದ ಮಾಡಿಕೊಂಡೆ ಖಬರಿಸ್ತಾನ ಮಾಡಿಕೊಂಡಿದ್ದಾರೆ.
ಇದೆ ಕಾರಣಕ್ಕೆ ಗ್ರಾಮದ ಮುಸ್ಲಿಂ ಸಮುದಾಯದ ಜನ ಯಾರೆ ಮೃತಪಟ್ಟಾಗ ಇದೆ ಜಾಗದಲ್ಲಿ ಶವಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಇನ್ನೂರು ವರ್ಷಗಳಿಂದ ಯಾವುದೇ ಸಮಸ್ಯೆ ಜೊತೆಗೆ ಯಾರದೆ ಸಣ್ಣ ತಕರಾರು ಬಂದಿಲ್ಲ. ಆದ್ರೆ ಈಗ ಇನ್ನೂರು ವರ್ಷಕ್ಕೂ ಅಧಿಕ ಕಾಲ ಆದ ಮೇಲೆ ಪಂಪಣ್ಣಗೌಡ ಎಂಬಾತ ಇದು ನನ್ನ ಜಮೀನು ಎಂದು ಹೇಳಿಕೊಂಡು ಏಕಾಏಕಿ ಜೆಸಿಬಿ ಸಮೇತನಾಗಿ ಬಂದು ನೂರಾರು ವರ್ಷಗಳ ಖಬರಿಸ್ತಾನ ಒಡೆದು ಹಾಕಿದ್ದಾರೆ.
ಪಂಪಣ್ಣಗೌಡ ತಾಯಿಯ ಹೆಸರಲ್ಲಿ ಈ ಜಮೀನು ಇದೆ. ಆದ್ರೆ ಪಂಪಣ್ಣಗೌಡ ತಾಯಿ ಕೂಡ ಖಬರಿಸ್ತಾನಕ್ಕಾಗಿ ಜಾಗ ಬಿಟ್ಟು ಕೊಟ್ಟಿದ್ದರು. ಮುಂದೆ ಪಂಪಣ್ಣಗೌಡನ ತಾಯಿ ತೀರಿಕೊಂಡ ಬಳಿಕ ತಾಯಿಯ ಜಮೀನು ನನಗೆ ಬೇಕು ಎಂದು ಮಗ ಈಗ ಮುಂದೆ ಬಂದಿದ್ದಾನೆ. ಹಿಂದೆ ಹಿರಿಯರಿಂದ ದಾನವಾಗಿ ಕೊಟ್ಟ ಜಾಗ ಅಂತ ಮುಸ್ಲಿಂ ಸಮುದಾಯದ ಜನ ಖಬರಿಸ್ತಾನವನ್ನಾಗಿಯೇ ಮಾಡಿಕೊಂಡು ಮುಂದುವರಿಸಿಕೊಂಡು ಬಂದಿದ್ದಾರೆ. ಆದ್ರೆ ಈಗ ಪಂಪಣ್ಣಗೌಡ ಏಕಾಏಕಿ ಬಂದು ಜೆಸಿಬಿಯಿಂದ ಇಡೀ ಖಬರಿಸ್ತಾನ ನೆಲಸಮ ಮಾಡಿದ್ದಾನೆ.
ಇನ್ನು ಇನ್ನೂರು ವರ್ಷಕ್ಕೂ ಅಧಿಕ ಕಾಲದಿಂದ ಇದೆ ಜಾಗದಲ್ಲಿ ಅಂತ್ಯಕ್ರಿಯೆ ಮಾಡಿಕೊಂಡು ಬರ್ತಾಯಿದ್ದಾರೆ. ಇದೆ ಕಾರಣಕ್ಕೆ ಕೇವಲ ಮುಸ್ಲಿಂ ಸಮುದಾಯದ ಅಷ್ಟೇ ಅಲ್ದೆ ಇಡೀ ಗ್ರಾಮದ ಜನರೆ ಇದು ಖಬರಿಸ್ತಾನದ ಜಾಗ ಅಂತ ಹೇಳ್ತಾಯಿದ್ದಾರೆ. ಆದ್ರೆ ಪಂಪಣ್ಣಗೌಡ ಮಾತ್ರ ಈಗ ಬಂದು ಜಮೀನು ನಂದು ಅಂತ ಹೇಳಿಕೊಂಡು ಖಬರಿಸ್ತಾನ ನೆಲಸಮ ಮಾಡಿದ್ದಾನೆ. ಇದು ಮುಸ್ಲಿಂ ಸಮುದಾಯದ ಜನ ಸೇರಿದಂತೆ ಇಡೀ ಊರಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Also Read: ಹೆಂಡತಿಯ ಅಗಲಿಕೆ ನೋವಿನಲ್ಲಿ ಆಕೆಯ ಸಮಾಧಿ ಪೂಜೆ ಮಾಡಿ, ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡ ಗಂಡ
ಒಂದು ವೇಳೆ ಅದು ಪಂಪಣ್ಣಗೌಡ ಜಾಗವೇ ಅಗಿದ್ದರೂ ಸಹ ಮುಸ್ಲಿಂ ಸಮುದಾಯದ ಜನರ ಗಮನಕ್ಕೆ ತರಬೇಕಾಗಿತ್ತು. ಅವರು ಹಣ ಕೊಟ್ಟು ಖರೀದಿ ಮಾಡ್ತಾಯಿದ್ದರು. ಯಾಕೆಂದ್ರೆ ಅನೇಕ ಕುಟುಂಬಗಳ ಮೃತರ ಅಂತ್ಯಕ್ರಿಯೆ ಇದೇ ಜಾಗದಲ್ಲಿ ಮಾಡಿದ್ದಾರೆ. ಹಬ್ಬ ಹರಿ ದಿನಗಳಲ್ಲಿ ಇದೆ ಜಾಗಕ್ಕೆ ಬಂದು ತಮ್ಮ ಹಿರಿಯರ ದರ್ಶನವನ್ನ ಪಡೆದುಕೊಂಡು ಹೋಗುತ್ತಾರೆ.
ಅದೊಂದು ಭಾವನಾತ್ಮಕ ಭಕ್ತಿ ಪ್ರಧಾನ ಜಾಗವಾಗಿದೆ ಸ್ಥಳೀಯ ಮುಸಲ್ಮಾನರಿಗೆ. ಆದ್ರೆ ಈಗ ಖಬರಿಸ್ತಾನ ನೆಲಸಮ ಆಗಿರುವ ಕಾರಣಕ್ಕೆ ಹಬ್ಬ ಹರಿ ದಿನಗಳಲ್ಲಿ ಎಲ್ಲಿಗೆ ಹೋಗಿ ದರ್ಶನ ಪಡೆಯಬೇಕು ಅಂತ ಯೋಚನೆ ಮಾಡುವಂತಾಗಿದೆ. ಇದೆ ಕಾರಣಕ್ಕೆ ಮುಸ್ಲಿಂ ಸಮುದಾಯದ ಜನ ಯಾದಗಿರಿ ಎಸ್ ಪಿ ಸೇರಿದಂತೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದಾರೆ. ಯಾಕೆಂದ್ರೆ ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಇದೆ ಕಾರಣಕ್ಕೆ ಪಂಪಣ್ಣಗೌಡನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಒಟ್ನಲ್ಲಿ ನೂರಾರು ವರ್ಷಗಳಿಂದ ಒಂದೆ ಜಾಗದಲ್ಲಿ ನೂರಾರು ಜನರ ಅಂತ್ಯಕ್ರಿಯೆ ಮಾಡಲಾಗಿದೆ. ಈಗ ಏಕಾಏಕಿ ಖಬರಿಸ್ತಾನ ಜಾಗವನ್ನ ತೆರವು ಮಾಡಿದ್ದಕ್ಕೆ ಮುಸ್ಲಿಂ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅಧಿಕಾರಿಗಳು ಯಾವ ರೀತಿ ಕ್ರಮಕೈಗೊಳ್ಳುತ್ತಾರೆ ಅಂತ ಕಾದು ನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ