ಮದ್ಯದ ನಶೆಯಲ್ಲಿ ಭಿಕ್ಷುಕಿ ಮೇಲೆ ರೇಪ್, ಪ್ರಶ್ನಿಸಿದಾಗ ನನ್ನ ಹೆಂಡ್ತಿ ಆಗಬೇಕೆಂದು ನಾಟಕ ಮಾಡಿದ ಕಾಮುಕ

| Updated By: ಸಾಧು ಶ್ರೀನಾಥ್​

Updated on: Nov 27, 2021 | 8:57 AM

ಯಾದಗಿರಿ ಜಿಲ್ಲೆಯಲ್ಲಿ ಮತ್ತೊಂದು ರೇಪ್ ಪ್ರಕರಣ ನಡೆದಿದ್ದು, ಭಿಕ್ಷುಕಿಯ ಮೇಲೆ‌‌ ಕಾಮುಕ ಎರಗಿದ್ದಾನೆ. ನವೆಂಬರ್ 23 ರ ರಾತ್ರಿ ಯಾದಗಿರಿ ನಗರದ ಹಳೆ‌ ಬಸ್‌‌ ನಿಲ್ದಾಣದಲ್ಲಿ ಘಟನೆ ನಡೆದಿದೆ. ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿ, ತಾನೂ ಕುಡಿದು ರೇಪ್ ಮಾಡಿದ್ದಾನೆ ಎನ್ನಲಾಗಿದೆ.

ಮದ್ಯದ ನಶೆಯಲ್ಲಿ ಭಿಕ್ಷುಕಿ ಮೇಲೆ ರೇಪ್, ಪ್ರಶ್ನಿಸಿದಾಗ ನನ್ನ ಹೆಂಡ್ತಿ ಆಗಬೇಕೆಂದು ನಾಟಕ ಮಾಡಿದ ಕಾಮುಕ
ಮದ್ಯದ ನಶೆಯಲ್ಲಿ ಭಿಕ್ಷುಕಿ ಮೇಲೆ ರೇಪ್, ಪ್ರಶ್ನಿಸಿದ್ದಾಗ ನನ್ನ ಹೆಂಡ್ತಿ ಆಗಬೇಕೆಂದು ನಾಟಕ ಮಾಡಿದ ಕಾಮುಕ
Follow us on

ಯಾದಗಿರಿ: ಯಾದಗಿರಿ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮದ್ಯದ ನಶೆಯಲ್ಲಿ ಭಿಕ್ಷುಕಿ ಮೇಲೆಯೇ ಅತ್ಯಾಚಾರವೆಗಿರುವ ಪ್ರಕರಣ ನಡೆದಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ಕಾಮುಕ ಹನುಮಂತ (40) ಸೆರೆಯಾಗಿರುವ ಆರೋಪಿ. ಯಾದಗಿರಿ ‌ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿ, ತಾನೂ ಕುಡಿದು ರೇಪ್:
ಯಾದಗಿರಿ ಜಿಲ್ಲೆಯಲ್ಲಿ ಮತ್ತೊಂದು ರೇಪ್ ಪ್ರಕರಣ ನಡೆದಿದ್ದು, ಭಿಕ್ಷುಕಿಯ ಮೇಲೆ‌‌ ಕಾಮುಕ ಎರಗಿದ್ದಾನೆ. ನವೆಂಬರ್ 23 ರ ರಾತ್ರಿ
ಯಾದಗಿರಿ ನಗರದ ಹಳೆ‌ ಬಸ್‌‌ ನಿಲ್ದಾಣದಲ್ಲಿ ಘಟನೆ ನಡೆದಿದೆ. ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿ, ತಾನೂ ಕುಡಿದು ರೇಪ್ ಮಾಡಿದ್ದಾನೆ ಎನ್ನಲಾಗಿದೆ. ಭಿಕ್ಷುಕಿ ನಿರಾಕರಿಸಿದರೂ, ಹಲ್ಲೆ‌ ಮಾಡಿ ರೇಪ್‌ ಮಾಡಿದ್ದಾನೆ ಕಾಮುಕ. ಸ್ಥಳೀಯರು ಪ್ರಶ್ನಿಸಿದಾಗ ನನ್ನ ಹೆಂಡ್ತಿ ಆಗಬೇಕೆಂದು ನಾಟಕ ಮಾಡಿದ್ದಾನೆ. ಸ್ಥಳೀಯರು ಪೊಲೀಸರನ್ನ ಸ್ಥಳಕ್ಕೆ ಕರೆಸಿ ಕಾಮುಕನನ್ನ ಒಪ್ಪಿಸಿದ್ದಾನೆ. ನವೆಂಬರ್ ‌24 ರಂದು ಘಟನೆ ನಡೆದ ಮಾರನೇ ದಿನ ಬೆಳಗ್ಗೆ ಯಾದಗಿರಿ ‌ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕೇಸ್ ದಾಖಲಾದ ಬಳಿಕ ಕಾಮುಕನನ್ನ ಪೊಲೀಸರು ಬಂಧಿಸಿದ್ದಾರೆ.