ಕರ್ನಾಟಕದ ಅತ್ಯಂತ ಬಡ, ಹಿಂದುಳಿದ ಜಿಲ್ಲೆ ಎನಿಸಿಕೊಂಡ ಯಾದಗಿರಿಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಮಕ್ಕಳಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಹೆಚ್ಚಿಸಲು ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡುವ ಮುನ್ನ ನಡೆಸಿದ ಸಮೀಕ್ಷೆಯ ಪ್ರಕಾರ, ಸುಮಾರು 64 ಪ್ರತಿಶತದಷ್ಟು ಮೂರು ವರ್ಷದೊಳಗಿನ ಮಕ್ಕಳು ಮತ್ತು ಮೂರರಿಂದ ಐದು ವರ್ಷದೊಳಗಿನ ಸುಮಾರು 74 ಪ್ರತಿಶತ ಹೆಣ್ಣು ಮತ್ತು 72 ಪ್ರತಿಶತ ಗಂಡು ಮಕ್ಕಳು ಬೆಳವಣಿಗೆಯಲ್ಲಿ ಕುಂಠಿತ ಹಾಗೂ ಕಡಿಮೆ ತೂಕ ಹೊಂದಿದ್ದಾರೆ ಎನ್ನಲಾಗಿದೆ.
ಜೊತೆಗೆ ಜಿಲ್ಲೆಯ ಉತ್ತರದ ಬಡವರ ಮನೆಗಳ 11-18 ವಯಸ್ಸಿನ 83 ಪ್ರತಿಶತದಷ್ಟು ಹುಡುಗರು ಮತ್ತು 75 ಪ್ರತಿಶತ ಹುಡುಗಿಯರು ತಮ್ಮ ಎತ್ತರ ಮತ್ತು ದೇಹದ ತೂಕದಲ್ಲಿ ಭಾರೀ ವ್ಯತ್ಯಾಸ (BMI) ಹೊಂದಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಜಿಲ್ಲೆಯಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಲು ಮತ್ತು ಗ್ರಾಮೀಣ ಜೀವನೋಪಾಯವನ್ನು ಒದಗಿಸಲು ಎಸ್‌ಎಚ್‌ಜಿ/ಎಫ್‌ಪಿಒ ಉದ್ಯಮಗಳನ್ನು ಸ್ಥಾಪಿಸುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನಿತ ಯೋಜನೆಯ ಬೇಸ್‌ಲೈನ್ ಸಮೀಕ್ಷೆಯು ಯಾದಗಿರಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ವರದಿ ಮಾಡಿದ್ದಕ್ಕಿಂತ 5 ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಕಡಿಮೆಯಾಗಿದೆ ಎಂದು ಬಹಿರಂಗಪಡಿಸಿದೆ. ಆದ್ರೆ, ಕಡಿಮೆ ತೂಕದ ಮಕ್ಕಳ ಶೇಕಡಾವಾರು ಹೆಚ್ಚಾಗಿದೆ.
ಇದನ್ನೂ ಓದಿ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಕಟ್ಟಡ ಕಾರ್ಮಿಕರ ಮಕ್ಕಳಲ್ಲಿ ಶೇ.71ರಷ್ಟು ಮಕ್ಕಳು ಅಧಿಕ ತೂಕ ಹೊಂದಿದ್ದಾರೆ: ಸಮೀಕ್ಷೆ
ಆರೊ ಸೊಸೈಟಿ ಫಾರ್ ಪಬ್ಲಿಕ್ ನ್ಯೂಟ್ರಿಷನ್, ಪಬ್ಲಿಕ್ ಹೆಲ್ತ್ ಅಂಡ್ ಪಬ್ಲಿಕ್ ಪಾಲಿಸಿ ಕಳೆದ ವಾರ ಪ್ರಕಟಿಸಿದ ಸಮೀಕ್ಷೆಯ ಪ್ರಕಾರ, ಶೇಕಡಾ 57.5ಕ್ಕೆ ಹೋಲಿಸಿದರೆ ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇಕಡಾ 47.9 ರಷ್ಟು ಬೆಳವಣಿಗೆ ಕುಂಠಿತವಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 ವರದಿ ಮಾಡಿದೆ.
2019 ರ NFHS-5 ಡೇಟಾದ ಅನುಕ್ರಮವಾಗಿ ಶೇಕಡಾ 17.7 ಮತ್ತು 45.2 ಶೇಕಡಾಕ್ಕೆ ಹೋಲಿಸಿದರೆ 32.5 ಮತ್ತು 53.5 ಶೇಕಡಾ ವ್ಯರ್ಥ ಮತ್ತು ಕಡಿಮೆ ತೂಕ ಕಂಡುಬಂದಿದೆ. 11-18 ವರ್ಷ ವಯಸ್ಸಿನವರ BMI 83.3 ಶೇಕಡಾ ಹುಡುಗರು ಮತ್ತು 73.4 ಶೇಕಡಾ ಹುಡುಗಿಯರಲ್ಲಿ ತುಂಬಾ ಕಡಿಮೆ ಇದೆ ಎಂದು ದಾಖಲಿಸಲಾಗಿದೆ, ಇದು 47.1 ಶೇಕಡಾ ಮತ್ತು 42.4 ರಷ್ಟು NFHS-5 ರಲ್ಲಿ ವರದಿಯಾಗಿದೆ.
ಇನ್ನು ಈ ವರದಿ ಸಂಬಂಧ ಆರೊ ಸೊಸೈಟಿ ಫಾರ್ ಪಬ್ಲಿಕ್ ನ್ಯೂಟ್ರಿಷನ್‌ನ ನಿರ್ದೇಶಕಿ ವೀಣಾ ರಾವ್ ಪ್ರತಿಕ್ರಿಯೆ ನೀಡಿದ್ದು, “ಈ ಬೇಸ್‌ಲೈನ್ ಸಮೀಕ್ಷೆಯಲ್ಲಿ ಪ್ರಸ್ತುತಪಡಿಸಲಾದ ಮಾಹಿತಿಯು ನಿಜಕ್ಕೂ ತುಂಬಾ ಕಳವಳಕಾರಿಯಾಗಿದೆ. ಮಕ್ಕಳಲ್ಲಿ ಕ್ಷೀಣಿಸುವಿಕೆ ಮತ್ತು ಕಡಿಮೆ ತೂಕದ ಸೂಚಕಗಳು ಮತ್ತು ಹದಿಹರೆಯದ ಹುಡುಗಿಯರು ಮತ್ತು ಹುಡುಗರ ಕಡಿಮೆ BMI ಯ ಸೂಚಕಗಳು ಯಾದಗಿರಿ ಜಿಲ್ಲೆಯ ಸೂಚಕಗಳಿಗಿಂತ ಗಣನೀಯವಾಗಿ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ