ಹೈಕೋರ್ಟ್​ ಸ್ಪಷ್ಟ ತೀರ್ಪು ಹೊರತಾಗಿಯೂ ಪರೀಕ್ಷೆ ಬಹಿಷ್ಕರಿಸಿ ಕಾಲೇಜಿನಿಂದ ಹೊರನಡೆದ 35 ವಿದ್ಯಾರ್ಥಿನಿಯರು!

ನಮಗೆ ಶಿಕ್ಷಣವೂ ಬೇಕು, ಹಿಜಾಬ್ ಕೂಡ ಬೇಕು. ಹಿಜಾಬ್‌ಗೆ ಅನುಮತಿ ಕೊಡುವವರೆಗೆ ಶಾಲೆಗೆ ಹೋಗಲ್ಲ ಎಂದು ಹಾಸನದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ. ಹಾಸನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗುವುದಿಲ್ಲ ಎಂಬಂತೆ ಮಾತನಾಡಿದ್ದಾರೆ.

ಹೈಕೋರ್ಟ್​ ಸ್ಪಷ್ಟ ತೀರ್ಪು ಹೊರತಾಗಿಯೂ  ಪರೀಕ್ಷೆ ಬಹಿಷ್ಕರಿಸಿ ಕಾಲೇಜಿನಿಂದ ಹೊರನಡೆದ 35 ವಿದ್ಯಾರ್ಥಿನಿಯರು!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Mar 15, 2022 | 1:39 PM

ಯಾದಗಿರಿ: ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾ ಹಿನ್ನೆಲೆ 35 ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ತೀರ್ಪು ಹಿನ್ನೆಲೆ ಪರೀಕ್ಷೆ ಬಹಿಷ್ಕರಿಸಿದ್ದಾರೆ. ಈ ಬಗ್ಗೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲೆ ಶಕುಂತಲಾ ಮಾಹಿತಿ ನೀಡಿದ್ದಾರೆ. ಇತ್ತ, ನಮಗೆ ಶಿಕ್ಷಣವೂ ಬೇಕು, ಹಿಜಾಬ್ ಕೂಡ ಬೇಕು. ಹಿಜಾಬ್‌ಗೆ ಅನುಮತಿ ಕೊಡುವವರೆಗೆ ಶಾಲೆಗೆ ಹೋಗಲ್ಲ ಎಂದು ಹಾಸನದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ. ಹಾಸನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗುವುದಿಲ್ಲ ಎಂಬಂತೆ ಮಾತನಾಡಿದ್ದಾರೆ.

ಶಾಲಾ ಕಾಲೇಜಿನಲ್ಲಿ ಹಿಜಾಬ್ ಧರಿಸುವ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಿವಿಧ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಮಧ್ಯೆ, ವಿದ್ಯಾರ್ಥಿಗಳ ಪ್ರತಿಕ್ರಿಯೆ ಕೂಡ ಮುಖ್ಯವಾಗಿದೆ. ಹಿಜಾಬ್ ಧರಿಸಲು ಎರಡು ತಿಂಗಳು ಅವಕಾಶ ನೀಡಬೇಕು. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ. ಹಿಜಾಬ್​ಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಪರೀಕ್ಷೆ ಬಹಿಷ್ಕಾರ ಮಾಡುತ್ತೇನೆ ಎಂದು ಶಿವಮೊಗ್ಗದ ವಿದ್ಯಾರ್ಥಿನಿ ಒಬ್ಬರು ಹಿಜಾಬ್​ಗಾಗಿ ಪಟ್ಟು ಮುಂದುವರೆಸಿದ್ದಾರೆ.

ಹಿಜಾಬ್ ಇಲ್ಲದೇ ಕಾಲೇಜಿಗೆ ಹೋಗುವುದಿಲ್ಲ. ಹಿಜಾಬ್​ಗೆ ಅವಕಾಶ ನೀಡಿದ್ರೆ ಮಾತ್ರ ನಾನು ಪರೀಕ್ಷೆಗೆ ಹೋಗುತ್ತೇನೆ. ಇಲ್ಲದಿದ್ದರೆ ನಾನು ಪರೀಕ್ಷೆ ಬರೆಯುವುದಿಲ್ಲ. ಇಷ್ಟು ವರ್ಷ ಹಿಜಾಬ್ ಧರಿಸಿಯೇ ಶಾಲೆ ಮತ್ತು ಕಾಲೇಜಿಗೆ ಹೋಗಿರುವೆ. ಹಿಜಾಬ್​ಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ. ಹಿಜಾಬ್​ಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಶಿವಮೊಗ್ಗದ ಮತ್ತೊಬ್ಬರು ವಿದ್ಯಾರ್ಥಿನಿ ತಿಳಿಸಿದ್ದಾರೆ.

ಹಿಜಾಬ್ ವಿಚಾರದಿಂದಾಗಿ ಶಿಕ್ಷಣದಿದ ವಂಚಿತರಾಗಬೇಡಿ: ಸುರಯ್ಯ ಅಂಜುಮ್

ಇತ್ತ ಉಡುಪಿಯಲ್ಲಿ ಹಿಜಾಬ್ ವಿಚಾರದಲ್ಲಿ ಮಾತಾನಾಡಿದ್ದ ಸುರಯ್ಯ ಅಂಜುಮ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಈ ದೇಶದ ಕಾನೂನನ್ನು ಗೌರವಿಸಬೇಕು ಅಂತ ಕುರಾನ್ ಕೂಡ ಹೇಳಿದೆ. ಹೈಕೋರ್ಟ್​ಗೆ ಹೋಗಿ ನ್ಯಾಯವನ್ನು ಪಡೆದುಕೊಳ್ಳಿ. ಆದರೆ ಹಿಜಾಬ್ ವಿಚಾರದಿಂದಾಗಿ ಶಿಕ್ಷಣದಿದ ವಂಚಿತರಾಗಬೇಡಿ. ಹಿಜಾಬ್ ನಿಷೇಧ ಆಗಿಲ್ಲ. ತರಗತಿವರೆಗೂ ಹಿಜಾಬ್ ಹಾಕಿಕೊಂಡು ಹೋಗಿ ನಂತರ ತೆಗೆದಿಟ್ಟು ಪಾಠ ಕೇಳಬಹುದು ಎಂದು ಅವರು ತಿಳಿಸಿದ್ದಾರೆ.

ಬಾಗಲಕೋಟೆ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ತೀರ್ಪು ಪ್ರಕಟ ಹಿನ್ನೆಲೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕಾಲೇಜುವರೆಗೂ ಹಿಜಾಬ್ ಹಾಗೂ ಬುರ್ಕಾ ಧರಿಸಿ ಬರುತ್ತೇವೆ. ಆದರೆ ಕ್ಲಾಸ್ ಒಳಗೆ ಬುರ್ಕಾ ಹಿಜಾಬ್ ತೆಗೆದು ಕೂರುತ್ತೇವೆ. ಆದರೆ ನಮಗೆ ಈಗ ಹಿಜಾಬ್ ಬುರ್ಕಾ ತೆಗೆಯೋದಕ್ಕೆ ಪ್ರತ್ಯೇಕ ಕೊಠಡಿ ನೀಡಬೇಕು. ಇಷ್ಟು ದಿನ ಕೊಟ್ಟಿದ್ದರು ಈಗ ಇನ್ನೂ ಕೊಟ್ಟಿಲ್ಲ. ಕಂಪೌಂಡ್ ಹೊರಗಡೆಯೇ ಹಿಜಾಬ್ ತೆಗೆದು ಬರಬೇಕು ಅಂದರೆ ನಾವು ಹಿಜಾಬ್ ಬುರ್ಕಾ ತೆಗೆಯೋದಿಲ್ಲ. ಹೊರಗಡೆಯೇ ನಿಲ್ಲುತ್ತೇವೆ. ಆದರೆ ತೆಗೆಯೋದಿಲ್ಲ. ಕೋರ್ಟ್ ಆದೇಶ ಗೌರವಿಸುತ್ತೇವೆ. ಆದರೆ ನಮಗೆ ಕಾಲೇಜಿನಲ್ಲಿ ಹಿಜಾಬ್, ಬುರ್ಕಾ ತೆಗೆಯಲು ಪ್ರತ್ಯೇಕ ಕೊಠಡಿ ನೀಡಿ ಎಂದು ವಿದ್ಯಾರ್ಥಿನಿಯರು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: Hijab Verdict: ಹಿಜಾಬ್ ಪ್ರಕರಣ ತೀರ್ಪು ಪ್ರಕಟ; ಯಡಿಯೂರಪ್ಪ, ಸಿದ್ದರಾಮಯ್ಯ ಏನಂದ್ರು? ಇಲ್ಲಿದೆ ವಿವರ

ಇದನ್ನೂ ಓದಿ: Karnataka Hijab Verdict: ಹಿಜಾಬ್ ವಿವಾದ ಹಿಂದೂ-ಮುಸ್ಲಿಮರ ಬಿಕ್ಕಟ್ಟಲ್ಲ, ಸಾಂವಿಧಾನಿಕ ಬಿಕ್ಕಟ್ಟು: ಶಫಿ ಸಅದಿ

Published On - 1:24 pm, Tue, 15 March 22