ಸಂತ ಸೇವಾಲಾಲ್ ಜಯಂತಿಗೆ ಹೊಸ ಮೆರುಗು: ಡಿಜೆ ಸದ್ದಿಗೆ ಲಲನೆಯರ ಸ್ಟೆಪ್ಸ್
ಯಾದಗಿರಿ: ತಾವಾಯ್ತು.. ತಮ್ಮ ಕೆಲ್ಸ ಆಯ್ತು. ತಮ್ಮ ತಾಂಡಾ ಆಯ್ತು.. ಇಷ್ಟೇ ಅವ್ರ ಬದುಕು.. ಆದ್ರೆ ವರ್ಷಕ್ಕೊಮ್ಮೆ ಅವ್ರನ್ನೆಲ್ಲಾ ಒಟ್ಟುಗೂಡಿಸೋಕೇ ಅಂತಾನೆ ಸೇವಾಲಾಲ್ ಜಯಂತಿ ಬರುತ್ತೆ. ಆ ಜಯಂತಿಯಲ್ಲಿ ಮಾತ್ರ ಎಲ್ರೂ ಒಟ್ಟಿಗೆ ಸೇರಿ ಸಂಭ್ರಮಿಸ್ತಾರೆ. ಆದ್ರೆ ಆ ಸಂಭ್ರಮ ಅವ್ರಿಗೆ ಮಾತ್ರವಲ್ದೇ ನೋಡೋರಿಗೂ ಖುಷಿ ಕೊಡುತ್ತೆ. ಫುಲ್ ಜೋಶ್.. ಎಲ್ಲರ ಮುಖದಲ್ಲೂ ಖುಷಿಯೋ ಖುಷಿ. ವರ್ಷಕ್ಕೊಮ್ಮೆ ಸಿಗೋ ಇಂಥಾ ಚಾನ್ಸ್ನ ಮಿಸ್ ಮಾಡ್ಕೊಳ್ಳೋ ಮಾತೇ ಇಲ್ಲ. ಹಿಂಗಾಗೇ ಆಗಿದ್ದಾಗ್ಲಿ ಅಂತಾ ಎಲ್ರೂ ಕುಣಿದು ಕುಪ್ಪಳಿಸ್ತಿದ್ರು. ಯಾದಗಿರಿ ಜಿಲ್ಲೆ […]
ಯಾದಗಿರಿ: ತಾವಾಯ್ತು.. ತಮ್ಮ ಕೆಲ್ಸ ಆಯ್ತು. ತಮ್ಮ ತಾಂಡಾ ಆಯ್ತು.. ಇಷ್ಟೇ ಅವ್ರ ಬದುಕು.. ಆದ್ರೆ ವರ್ಷಕ್ಕೊಮ್ಮೆ ಅವ್ರನ್ನೆಲ್ಲಾ ಒಟ್ಟುಗೂಡಿಸೋಕೇ ಅಂತಾನೆ ಸೇವಾಲಾಲ್ ಜಯಂತಿ ಬರುತ್ತೆ. ಆ ಜಯಂತಿಯಲ್ಲಿ ಮಾತ್ರ ಎಲ್ರೂ ಒಟ್ಟಿಗೆ ಸೇರಿ ಸಂಭ್ರಮಿಸ್ತಾರೆ. ಆದ್ರೆ ಆ ಸಂಭ್ರಮ ಅವ್ರಿಗೆ ಮಾತ್ರವಲ್ದೇ ನೋಡೋರಿಗೂ ಖುಷಿ ಕೊಡುತ್ತೆ. ಫುಲ್ ಜೋಶ್.. ಎಲ್ಲರ ಮುಖದಲ್ಲೂ ಖುಷಿಯೋ ಖುಷಿ. ವರ್ಷಕ್ಕೊಮ್ಮೆ ಸಿಗೋ ಇಂಥಾ ಚಾನ್ಸ್ನ ಮಿಸ್ ಮಾಡ್ಕೊಳ್ಳೋ ಮಾತೇ ಇಲ್ಲ. ಹಿಂಗಾಗೇ ಆಗಿದ್ದಾಗ್ಲಿ ಅಂತಾ ಎಲ್ರೂ ಕುಣಿದು ಕುಪ್ಪಳಿಸ್ತಿದ್ರು.
ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣ ನಿನ್ನೆ ಅಕ್ಷರಶಃ ಬಂಜಾರ ಮಯವಾಗಿತ್ತು. ಎತ್ತ ನೋಡಿದ್ರು ಕಲರ್ ಫುಲ್ ಉಡುಗೆ ತೊಟ್ಟ ಯುವಕ ಯುವತಿಯರೆ ಕಾಣ್ತಿದ್ರು. ಡಿಜೆ ಸೌಂಡಿಗೆ ಮನಬಿಚ್ಚಿ ಕುಣಿದಿದ್ರು. ಸಂತ ಸೇವಾಲಾಲ್ರ 281ನೇ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ಸೇವಾಲಾಲ್ ಭಾವಚಿತ್ರವನ್ನ ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಸರ್ಕಾರಿ ಫ್ರೌಡಶಾಲೆಯ ಮೈದಾನದವರೆಗೆ ಮೆರವಣಿಗೆ ಮಾಡಲಾಯ್ತು.
ಮೆರವಣಿಗೆಗೆ ರಂಗು ನೀಡಿದ ಗೋಧಿ ಸಸಿ: ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ತಾಂಡಾಗಳಿಂದ ಬಂದಿದ್ದ ಸಾವಿರಾರು ಮಂದಿ ಭಾಗಿಯಾಗಿದ್ರು. ಅದ್ರಲ್ಲೂ ಕಲರ್ಫುಲ್ ಡ್ರೆಸ್ಗಳಲ್ಲಿ ರೆಡಿಯಾಗಿ ಕುಂಭ ಮತ್ತು ಸಸಿಗಳನ್ನ ಹೊತ್ತು ಸಾಗುತ್ತಿದ್ದ ನೋಟವಂತೂ ಎಲ್ಲರ ಗಮನ ಸೆಳೆದಿತ್ತು. ಇನ್ನು ಜಯಂತ್ಯೋತ್ಸವ ದಿನಕ್ಕಿಂತ ಮೊದಲು 21 ದಿನಗಳ ಕಾಲ ಮಹಿಳೆಯರು ಉಪವಾಸವಿದ್ದು ಗೋಧಿ ಸಸಿ ಬೆಳೆಯುತ್ತಾರೆ. ಜಯಂತಿ ದಿನ ಗೋದಿ ಸಸಿಯನ್ನ ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆ ರಂಗು ನೀಡುತ್ತಾರೆ. ಪ್ರತಿಯೊಂದು ತಾಂಡಾದ ಹೆಣ್ಮಕ್ಕಳು ಬಣ್ಣದ ಬಟ್ಟೆಗಳನ್ನ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾರೆ.
ಇನ್ನೊಂದು ವಿಶೇಷ ಅಂದ್ರೆ ಒಂದು ತಾಂಡಾದ ಯುವತಿಯರು ಧರಿಸುವ ಬಣ್ಣದ ಬಟ್ಟೆಯನ್ನ ಇನ್ನೊಂದು ತಾಂಡಾದ ಯುವತಿಯರು ಧರಿಸುವ ಹಾಗಿಲ್ಲ. ಹೀಗಾಗಿ ಜಿಲ್ಲೆಯ ಎಲ್ಲಾ ತಾಂಡಾ ನಿವಾಸಿಗಳು ಒಂದೊಂದು ರೀತಿ ರೆಡಿಯಾಗಿರ್ತಾರೆ. ಜೊತೆಗೆ ನಾಸಿಕ್ನಿಂದ ಬಂದಿದ್ದ ಡೋಲು ಟೀಂ ಕೂಡ ಇವ್ರ ಖುಷಿಯನ್ನ ಮತ್ತಷ್ಟು ಹೆಚ್ಚಿಸಿತ್ತು. ಸದ್ಯ ಸೇವಾಲಾಲ್ ಜಯಂತಿ ಹೆಸ್ರಲ್ಲಿ ಜಿಲ್ಲೆಯ ಎಲ್ಲಾ ತಾಂಡಾ ನಿವಾಸಿಗಳು ಒಟ್ಟಿಗೆ ಸೇರಿದ್ರು. ಕುಂಭ ಹಾಗೂ ಗೋಧಿ ಸಸಿ ಮೆರವಣಿಗೆ ಒಂದ್ಕಡೆಯಾದ್ರೆ ಕುಣಿದು ಕುಪ್ಪಳಿಸೋರ ನೋಟ ಮತ್ತಷ್ಟು ಖುಷಿ ಕೊಟ್ಟಿತ್ತು.