ವಿದ್ಯುತ್ ತಂತಿ ತಗುಲಿ ಒಂದೇ ಗ್ರಾಮದ ಮೂವರು ರೈತರು ಸಾವು, ಮುಗಿಲು ಮುಟ್ಟಿದ ಆಕ್ರಂದನ

ವಿದ್ಯುತ್ ತಗುಲಿ ಒಂದೇ ಗ್ರಾಮದ ಮೂವರು ರೈತರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಭತ್ತ ನಾಟಿ ಮಾಡುವಾಗ ರೈತ ಏಕಾಏಕಿ ಬಿದ್ದು ಮೃತಪಟ್ಟಿದ್ದಾನೆ. ಇನ್ನೊಂದೆಡೆ ಟ್ರಾನ್ಸ್​​ಪರ್ಮರ್ ಸರಿಪಡಿಸುವ ವೇಳೆ ವಿದ್ಯುತ್ ತಗುಲಿ ಲೈನ್ ಮ್ಯಾನ್ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನು ಭೀಮಾ ನದಿ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಈ ಪ್ರತ್ಯೇಕ ಘಟನೆಗಳ ವಿವರ ಈ ಕೆಳಗಿನಂತಿದೆ.

ವಿದ್ಯುತ್ ತಂತಿ ತಗುಲಿ ಒಂದೇ ಗ್ರಾಮದ ಮೂವರು ರೈತರು ಸಾವು, ಮುಗಿಲು ಮುಟ್ಟಿದ ಆಕ್ರಂದನ
ಆಸ್ಪತ್ರೆ ಬಳಿ ಜಮಾಯಿಸಿರುವ ಸಂಬಂಧಿಕರು
Edited By:

Updated on: Jul 18, 2025 | 7:19 PM

ಯಾದಗಿರಿ, (ಜುಲೈ 18): ವಿದ್ಯುತ್ ತಂತಿ ತಗುಲಿ‌ ಮೂವರು ರೈತರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ನಡೆದಿದೆ. ಮೋಟಾರ್ ಪಂಪ್ ಸೆಟ್ ರಿಪೇರಿ ವೇಳೆ ವಿದ್ಯುತ್ ತಗುಲಿದ್ದು, ಸದಬ ಗ್ರಾಮದ ಮೂವರು ಮೃತಪಟ್ಟಿದ್ದಾರೆ. ಈರಪ್ಪ(40) ದೇವು(30) ಸುರೇಶ್(22) ಮೃತ ದುರ್ದೈವಿಗಳು. ಮರಣೋತ್ತರ ಪರೀಕ್ಷೆಗಾಗಿ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು, ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯ ರಕ್ಷಣೆ

ಯಾದಗಿರಿ: ಸೇತುವೆ ಮೇಲಿಂದ ಜಿಗಿಯಲು ಮುಂದಾಗಿದ್ದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಯಾದಗಿರಿ ಹೊರವಲಯದ ಭೀಮಾ ನದಿ ಸೇತುವೆ ಮೇಲಿಂದ ನದಿಗೆ ಜಿಗಿದು ಆತ್ಮಹತ್ಯೆಗ ಮುಂದಾಗಿದ್ದ ಗುರುಮಠಕಲ್ ತಾಲೂಕಿನ ಚಿನ್ನಕಾರ ಗ್ರಾಮದ ವೃದ್ಧೆಯನ್ನು ಬೈಕ್ ಸವಾರ ರಕ್ಷಣೆ ಮಾಡಿದ್ದಾರೆ. ಬಳಿಕ ಬೈಕ್ ಸವಾರ, ವೃದ್ಧೆಯನ್ನ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ. ಇದರೊಂದಿಗೆ ಬೈಕ್ ಸವಾರನ ಸಮಯಪ್ರಜ್ಞೆ ವೃದ್ಧೆಯ ಜೀವ ಉಳಿದಿದೆ.

ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು

ಚಿಕ್ಕಮಗಳೂರು: ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹೊನ್ನೇಕೊಪ್ಪ ಗ್ರಾಮದಲ್ಲಿ ನಡೆದಿದೆ. ಪ್ರವೀಣ್ (27) ಮೃತ ಮೆಸ್ಕಾಂ ಲೈನ್ ಮ್ಯಾನ್. ಟ್ರಾನ್ಸ್​ ನ್ಸ್ಫಾರ್ಮರ್ ಸರಿ ಪಡಿಸುವಾಗ ಏಕಾಏಕಿ ತಂತಿಯನ್ನು ವಿದ್ಯುತ್ ಪೂರೈಕೆಯಾಗಿದೆ. ಪರಿಣಾಮ ಪ್ರವೀಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾಗಲಕೋಟೆ ಮೂಲದ ಪ್ರವೀಣ್, ಬಾಳೆಹೊನ್ನೂರು ವಿಭಾಗದಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂಬಂಧ ಸ್ಥಳೀಯರ ಮೆಸ್ಕಾ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಗದ್ದೆ ನಾಟಿ ವೇಳೆ ರೈತ ಸಾವು

ಶಿವಮೊಗ್ಗ: ಗದ್ದೆಯಲ್ಲಿ ನಾಟಿ ಮಾಡುವ ವೇಳೆ ವೇಳೆ ಕಾಲು ಜಾರಿ ಬಿದ್ದು ರೈತನೋರ್ವ ಸಾವನ್ನಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಕಣ್ಣೂರು ಗ್ರಾಮದಲ್ಲಿ ನಡೆದಿದೆ. ಸತ್ಯನಾರಾಯಣ ಕೈಸೋಡಿ (50) ಮೃತ ದುರ್ದೈವಿ. ಕಣ್ಣೂರಿನ ತನ್ನ ಗದ್ದೆಯಲ್ಲಿ ನಾಟಿ ಮಾಡುವ ವೇಳೆ ಸತ್ಯನಾರಾಯಣ ಆಕಸ್ಮಿಕವಾಗಿ ಕಾಲು ಜಾರಿಬಿದ್ದಾನೆ. ಬಿದ್ದ ತಕ್ಷಣ ಸತ್ಯನಾರಾಯಣ್ ಗೆ ಸಮೀಪದ ಆನಂದಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದ್ರೆ, ಅಷ್ಟೊತ್ತಿಗಾಗಲೇ ಸತ್ಯನಾರಾಯಣ್ ಸಾವನ್ನಪ್ಪಿದ್ದರು. ರೈತ ಸತ್ಯನಾರಾಯಣ ಇಂದು (ಜುಲೈ 18( ಬೆಳಗ್ಗೆಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.