Village Accountant Recruitment Scam: ಗ್ರಾಮ‌ ಲೆಕ್ಕಿಗ‌ ನೇರ ನೇಮಕಾತಿಯಲ್ಲಿ ಭಾರಿ ಮೋಸ ಆರೋಪ, ಓದದೆ ಪಾಸಾದವರಿಗೆ ಬಂಪರ್ ಕೊಡುಗೆ!

| Updated By: ಸಾಧು ಶ್ರೀನಾಥ್​

Updated on: May 11, 2022 | 10:50 PM

ಇತ್ತೀಚೆಗೆ ಪಿಎಸ್ಐ ಸೇರಿದಂತೆ ಅನೇಕ ನೇಮಕಾತಿಗಳಲ್ಲಿ ಅಕ್ರಮಗಳ ಕಮಟುವಾಸನೆ ರಾಜ್ಯಾದ್ಯಂತ ಬೀಸುತ್ತಿದೆ. ಇದೀಗ ಗ್ರಾಮ‌ಲೆಕ್ಕಿಗ‌ ನೇಮಕಾತಿಯಲ್ಲಿ ಭಾರಿ ಅನ್ಯಾಯವೆಸಗಿರುವ ಆರೋಪ ಕೇಳಿಬಂದಿದೆ. ಯಾದಗಿರಿ ಜಿಲ್ಲೆಯಲ್ಲಿ ನಡೆದಿದ್ದ ಗ್ರಾಮ‌ಲೆಕ್ಕಿಗ‌ ನೇಮಕಾತಿಯಲ್ಲಿ ಈ ಅಕ್ರಮ ಕೇಳಿಬಂದಿದೆ. ಆತಂಕದ ವಿಚಾರವೆಂದರೆ ಸದ್ಯದಲ್ಲೇ ಇನ್ನೂ ನಾಲ್ಕಾರು ಜಿಲ್ಲೆಗಳಲ್ಲಿ ಇಂತಹುದೇ ನೇರವಾಗಿ ಹತ್ತಾರು ಮಂದಿ ಗ್ರಾಮ‌ಲೆಕ್ಕಿಗ‌ರ ನೇಮಕಾತಿ ನಡೆಯಲಿದೆ.

Village Accountant Recruitment Scam: ಗ್ರಾಮ‌ ಲೆಕ್ಕಿಗ‌ ನೇರ ನೇಮಕಾತಿಯಲ್ಲಿ ಭಾರಿ ಮೋಸ ಆರೋಪ, ಓದದೆ ಪಾಸಾದವರಿಗೆ ಬಂಪರ್ ಕೊಡುಗೆ!
ಗ್ರಾಮ‌ ಲೆಕ್ಕಿಗ‌ ನೇರ ನೇಮಕಾತಿಯಲ್ಲಿ ಭಾರಿ ಮೋಸ, ಓದದೆ ಪಾಸಾದವರಿಗೆ ಬಂಪರ್ ಕೊಡುಗೆ!
Follow us on

ಇತ್ತೀಚೆಗೆ ಪಿಎಸ್ಐ ಸೇರಿದಂತೆ ಅನೇಕ ನೇಮಕಾತಿಗಳಲ್ಲಿ ಅಕ್ರಮಗಳ ಕಮಟುವಾಸನೆ ರಾಜ್ಯಾದ್ಯಂತ ಬೀಸುತ್ತಿದೆ. ಇದೀಗ ಗ್ರಾಮ‌ಲೆಕ್ಕಿಗ‌ ನೇಮಕಾತಿಯಲ್ಲಿ ಭಾರಿ ಅನ್ಯಾಯವೆಸಗಿರುವ ಆರೋಪ ಕೇಳಿಬಂದಿದೆ. ಯಾದಗಿರಿ ಜಿಲ್ಲೆಯಲ್ಲಿ ನಡೆದಿದ್ದ ಗ್ರಾಮ‌ಲೆಕ್ಕಿಗ‌ ನೇಮಕಾತಿಯಲ್ಲಿ ಈ ಅಕ್ರಮ ಕೇಳಿಬಂದಿದೆ. ಆತಂಕದ ವಿಚಾರವೆಂದರೆ ಸದ್ಯದಲ್ಲೇ ಇನ್ನೂ ನಾಲ್ಕಾರು ಜಿಲ್ಲೆಗಳಲ್ಲಿ ಇಂತಹುದೇ ನೇರವಾಗಿ ಹತ್ತಾರು ಮಂದಿ ಗ್ರಾಮ‌ಲೆಕ್ಕಿಗ‌ರ ನೇಮಕಾತಿ ನಡೆಯಲಿದೆ. ಅದರಲ್ಲಿನ್ನೆಷ್ಟು ಭ್ರಷ್ಟಾಚಾರ ನಡೆಯಲಿದೆಯೋ ಎಂಬ ಆತಂಕ ರಾಜ್ಯದ ಜನತೆಯಲ್ಲಿ ಮನೆ ಮಾಡಿದೆ.

ಇನ್ನು ಸದ್ಯಕ್ಕೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿರುವ ಗ್ರಾಮ‌ಲೆಕ್ಕಿಗ‌ ನೇಮಕಾತಿ ಅಕ್ರಮದ ಬಗ್ಗೆ ಮತ್ತಷ್ಟು ಹೇಳುವುದಾದರೆ ಕಷ್ಟಪಟ್ಟು ಓದಿ ಪಾಸಾದವರಿಗೆ ಹುದ್ದೆ ಸಿಕ್ಕಿಲ್ಲವೆಂಬ ಆರೋಪ ಗಾಢವಾಗಿ ಕೇಳಿಬಂದಿದೆ. ಕೊವಿಡ್‌ ವೇಳೆ ನಡೆದ ಪ್ರಕ್ರಿಯೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ಅಭ್ಯರ್ಥಿಗಳಿಗೆ ಹುದ್ದೆ ಪ್ರಾಪ್ತಿಯಾಗಿದ್ದು, 135 ಮಂದಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾಡಳಿತ. ಈ ಪೈಕಿ 32 ಮಂದಿ ಪಿಯುಸಿಯಲ್ಲಿ ಶೇ.100ರಷ್ಟು ಅಂಕ ಪಡೆದವರು ಕೊವಿಡ್ ವೇಳೆ ಪರೀಕ್ಷೆ ಬರೆಯದೆ ಪಾಸಾಗಿದ್ದ ವಿದ್ಯಾರ್ಥಿಗಳು 2020ರಲ್ಲಿ ಶೇ. 98, 99ರಷ್ಟು ಅಂಕ ಪಡೆದವರಿಗೂ ಹುದ್ದೆ ತಪ್ಪಿದೆ. ಅನ್ಯಾಯ ಸರಿಪಡಿಸುವಂತೆ ಅಭ್ಯರ್ಥಿಗಳಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ. ಜಿಲ್ಲಾಡಳಿತವು 27 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ನೇಮಕಾತಿ ನಡೆಸಿದೆ.

ಇದೇ ಮಾರ್ಚ್ 29 ರಂದು ಅರ್ಜಿ ಹಾಕೋದು ಆರಂಭವಾಗಿತ್ತು. ಅರ್ಜಿ‌‌ ಸಲ್ಲಿಸಲು ಎಪ್ರಿಲ್ ‌29 ತನಕ ಸಮಯಾವಕಾಶ ನೀಡಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮಾತ್ರ ಮೀಸಲಿದ್ದ ಹುದ್ದೆಗಳು ಇವಾಗಿದ್ದವು. 6108 ಮಂದಿ ಅಭ್ಯರ್ಥಿಗಳು 27 ಹುದ್ದೆಗಳಿಗೆ ಅರ್ಜಿ ಹಾಕಿದ್ದರು. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ವಾಟಗಲ್ ಗ್ರಾಮದ ಬಸವರಾಜೇಶ್ವರಿ ಎಂಬ ಅಭ್ಯರ್ಥಿ ಆಕ್ಷೇಪಣೆ ಸಲ್ಲಿಸಿದ್ದಾರೆ.

Published On - 10:46 pm, Wed, 11 May 22