Yadagiri: ಅರಣ್ಯದಲ್ಲಿ ಹತ್ತಿದ್ದ ಬೆಂಕಿ ನಂದಿಸಲು ಹೋಗಿ ಬೆಂಕಿಗಾಹುತಿಯಾದ ಅರಣ್ಯ ವೀಕ್ಷಕ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 09, 2023 | 6:35 PM

ಜಿಲ್ಲೆಯ ವಡಗೇರ ತಾಲೂಕಿನ ಬಿಳ್ಹಾರ್ ಅರಣ್ಯ ಪ್ರದೇಶದಲ್ಲಿ ಹತ್ತಿದ್ದ ಬೆಂಕಿ ನಂದಿಸಲು ಹೋಗಿ ಅರಣ್ಯ ವೀಕ್ಷಕ ಯಾಕೂಬ್(55) ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.

Yadagiri: ಅರಣ್ಯದಲ್ಲಿ ಹತ್ತಿದ್ದ ಬೆಂಕಿ ನಂದಿಸಲು ಹೋಗಿ ಬೆಂಕಿಗಾಹುತಿಯಾದ ಅರಣ್ಯ ವೀಕ್ಷಕ
ಮೃತ ಯಾಕೂಬ್
Follow us on

ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕಿನ ಬಿಳ್ಹಾರ್ ಅರಣ್ಯ ಪ್ರದೇಶದಲ್ಲಿ ಹತ್ತಿದ್ದ ಬೆಂಕಿ ನಂದಿಸಲು ಹೋಗಿದ್ದ ಅರಣ್ಯ ವೀಕ್ಷಕ ಯಾಕೂಬ್ (55) ನಿನ್ನೆ (ಜ.8) ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದಾನೆ. ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ವಡಗೇರ ಆಸ್ಪತ್ರೆ ಎದುರುಗಡೆಯ ಮುಖ್ಯ ರಸ್ತೆ ಮೇಲೆ ಟ್ರಾಕ್ಟರ್​ನಲ್ಲಿ ಶವವಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಗಿದ್ದು, ಇನ್ನೊಂದೆಡೆ ಆಸ್ಪತ್ರೆಯ ಕೊಣೆಯಲ್ಲಿ ಅರಣ್ಯ ಅಧಿಕಾರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾಕೂಬ್ ದಿನಗೂಲಿ ನೌಕರನಾಗಿ ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕನಾಗಿ ಕೆಲಸ ಮಾಡುತ್ತಿದ್ದ. ಅರಣ್ಯ ಇಲಾಖೆಯ ಅಧಿಕಾರಿಗಳೇ ಬೆಂಕಿ ಹಚ್ಚುವಂತೆ ಹೇಳಿದ್ದು, ಈ ಕಾರಣಕ್ಕೆ ಅರಣ್ಯ ವೀಕ್ಷಕ ಯಾಕೂಬ್ ಮೃತ ಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ನಿನ್ನೆ ಘಟನಾ ಸ್ಥಳಕ್ಕೆ‌ ಬರದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ. 25 ಲಕ್ಷ ಪರಿಹಾರ‌ ನೀಡುವಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹ ಪಡಿಸಿದ್ದಾರೆ.

ನೈಸ್ ರಸ್ತೆಯಲ್ಲಿ ಓವರ್​ಟೇಕ್ ಮಾಡಲು ಹೋಗಿ​ ಬೈಕ್ ಸವಾರನ ದುರ್ಮರಣ

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಓವರ್​ಟೇಕ್ ಮಾಡಲು ಹೋಗಿ​ ಟ್ಯಾಂಕರ್​ ಹರಿದು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಸೋಹಿಲ್ ಬಿಸ್ವಾಸ್(19) ಸಾವನ್ನಪ್ಪಿದ್ದಾನೆ. ಬೆಳಿಗ್ಗೆ 10ಗಂಟೆಯ ಸುಮಾರಿಗೆ ಕನಕಪುರ ರಸ್ತೆಯ ಯುನಿಟೆಕ್ ಗೇಟ್​ ಬಳಿ ಘಟನೆ ನಡೆದಿದ್ದು, ಹರಿಯಾಣ ಮೂಲದ ಕ್ಯಾಂಟರ್​ ಡ್ರೈವರ್​ನನ್ನು ಪೊಲೀಸರು ಬಂಧಿಸಿದ್ದು, ಕುಮಾರಸ್ವಾಮಿ ಲೇಔಟ್​ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪಶ್ಚಿಮ ಬಂಗಾಳದ ಸೊಹಿಲ್ ಕಾಂಕ್ರೀಟ್ ಟ್ಯಾಪಿಂಗ್ ಕೆಲಸ ಮಾಡುತಿದ್ದ. ಇಂದು ಕೂಡ ಕೆಲಸಕ್ಕೆಂದು ಗೆಳೆಯನ ಜೊತೆ ಎಲೆಕ್ಟ್ರಾನಿಕ್ ಸಿಟಿಯಿಂದ ಕನಕಪುರರಸ್ತೆಗೆ ಬೈಕ್​ನಲ್ಲಿ ತೆರಳುತಿದ್ದ ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್​ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಬೈಕ್​ಗೆ ಡಿಕ್ಕಿಯಾಗಿದೆ. ಕೆಳಗೆ ಬಿದ್ದ ಸೋಹಿಲ್ ಮೇಲೆ ಕ್ಯಾಂಟರ್​ ಗಾಲಿ ಹರಿದು ತೊಡೆಗೆ ಗಂಭೀರ ಗಾಯವಾಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸೊಹಿಲ್ ಸಾವನ್ನಪ್ಪಿದ್ದಾನೆ.

ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿದ ಬೆಂಕಿ, ಸುಟ್ಟು ಕರಕಲಾದ ಮನೆ

ಬಾಗಲಕೋಟೆ: ಜಿಲ್ಲೆಯ ಇಳಕಲ್ ತಾಲ್ಲೂಕಿನ ಗೊರಬಾಳ ಗ್ರಾಮದ ಕನಕಪ್ಪ ಘಂಟಿ ಎಂಬುವರ ಮನೆ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಸ್ಥಳಕ್ಕಾಗಮಿಸಿದ ಇಳಕಲ್ ಅಗ್ನಿಶಾಮಕ ದಳ ಸಿಬ್ಬಂದಿಯು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ಮನೆಯಲ್ಲಿದ್ದ ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳು, ದವಸ ದಾನ್ಯ, ಸುಟ್ಟು ಹೋಗಿದೆ ಜೊತೆಗೆ ಮನೆಯಲಿದ್ದ ಮೂರು ಲಕ್ಷ ಹಣ ಸುಟ್ಟು ಹೋಗಿದ್ದು, ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ದಟ್ಟ ಮಂಜಿನಿಂದ ಆಗ್ರಾ ಎಕ್ಸ್​ಪ್ರೆಸ್​ವೇಯಲ್ಲಿ ಟ್ರಕ್-ಬಸ್​ ನಡುವೆ ಡಿಕ್ಕಿ; ಅಪಘಾತದಲ್ಲಿ ನಾಲ್ವರು ಸಾವು

ಟ್ರ್ಯಾಕ್ಟರ್​ನಿಂದ ಆಯತಪ್ಪಿ ಬಿದ್ದು ಶಿವಾನಂದ‌ ಧನಿಂಗ(29) ಸ್ಥಳದಲ್ಲೇ ಸಾವು

ವಿಜಯಪುರ: ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಬಳಿ ತೋಟದಲ್ಲಿ ರೂಟರ್ ಹೊಡೆಯುತ್ತಿದ್ದ ಟ್ರ್ಯಾಕ್ಟರ್​ನಿಂದ ಆಯತಪ್ಪಿ ಬಿದ್ದ ಶಿವಾನಂದ‌ ಧನಿಂಗ(29) ರೂಟರ್​ನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಕುರಿತು ಇಂಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ