
ಯಾದಗಿರಿ, ಸೆಪ್ಟೆಂಬರ್ 03: ಕಾನ್ಸ್ಟೇಬಲ್ ಹಾಗೂ ಆತನ ಸಹೋದರನಿಂದ ಚಿಕ್ಕಪ್ಪನ ಪತ್ನಿ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ (sexually assault) ಆರೋಪ ಕೇಳಿಬಂದಿದೆ. ಯಾದಗಿರಿ (Yadgiri) ಸಂಚಾರಿ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿರುವ ರಮೇಶ್ ಮತ್ತು ಜೆಸ್ಕಾಂ ನೌಕರ ಲಕ್ಷ್ಮಣ್ ವಿರುದ್ಧ ಸಂತ್ರಸ್ತೆ ದೂರು ಹಿನ್ನಲೆ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸತತ ಏಳು ವರ್ಷಗಳಿಂದ ಇಬ್ಬರು ಬಲವಂತವಾಗಿ ಅತ್ಯಾಚಾರ ಎಸಗಿರುವ ಆರೋಪಿಸಲಾಗಿದೆ. ಪ್ರಾಣ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಜೊತೆಗೆ ತನ್ನ ಮಗಳಿಗೆ ಅಶ್ಲೀಲ ವಾಟ್ಸಪ್ ಮೆಸೇಜ್ ಕಳುಹಿಸುತ್ತಿದ್ದರು. ಬಟ್ಟೆಯನ್ನ ಬಿಚ್ಚಿ ಬೆತ್ತಲೆ ದೇಹವನ್ನ ತೋರಿಸು ಎಂದು ಪೀಡಿಸುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಾಸನ ನಗರದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ನಡೆದಿರುವ ಇದೊಂದು ಘಟನೆಯನ್ನ ಕೇಳಿದರೆ ನೀವು ನಿಜಕ್ಕೂ ಬೆಚ್ಚಿಬೀಳಿತ್ತೀರಾ. 28 ವರ್ಷದ ಬುದ್ಧಿಮಾಂದ್ಯ ಹೆಣ್ಣುಮಗಳೊಬ್ಬಳ ಮೇಲೆ ರಾಕ್ಷಸರಂತೆ ಎರಗಿರುವ ಕೀಚಕರು ನಡೆಸಿರುವ ಅಮಾನವೀಯ ಪೈಶಾಚಿಕ ಕೃತ್ಯ ಮನುಷ್ಯ ಕುಲವೇ ತಲೆ ತಗ್ಗಿಸುವಂತಿದೆ.
ಇದನ್ನೂ ಓದಿ: ಮಂಗಳೂರು: ಅಪ್ರಾಪ್ತೆ ಮೇಲೆ ಯುವಕರಿಬ್ಬರಿಂದ ಅತ್ಯಾಚಾರ, ವಿಡಿಯೋ ವೈರಲ್ ಮಾಡಿದವರೂ ಖಾಕಿ ಬಲೆಗೆ!
ಇಲ್ಲಿನ ಇಮ್ರಾನ್, ಅಜೀಜ್, ಇರ್ಫಾನ್ ಹಾಗೂ ಮತ್ತೋರ್ವನ ವಿರುದ್ದ ಅತ್ಯಾಚಾರ ಕೇಸ್ ದಾಖಲಾಗಿದೆ. ಯುವತಿ ಮೇಲೆ ನೀಚರಂತೆ ಎರಗಿದ್ದು ಮಾತ್ರವಲ್ಲ ತಮ್ಮ ಹೀನ ಕೃತ್ಯವನ್ನ ಮೊಬೈಲ್ನಲ್ಲಿ ಸೆರೆಹಿಡಿದುಕೊಂಡಿದ್ದರು.
ಇದನ್ನೂ ಓದಿ: 26 ರ ವಿಧವೆ ಜೊತೆ 52 ವರ್ಷದ ಇಬ್ಬರು ಹೆಂಡಿರ ಗಂಡನ ಲಿವಿಂಗ್ ಟುಗೆದರ್! ಯುವತಿ ದೂರವಾಗ್ತಾಳೆಂದು ಬೆಂಕಿ ಹಚ್ಚಿ ಕೊಲೆ
ಯುವತಿಯ ತಮ್ಮನ ಮೊಬೈಲ್ಗೆ ಈ ವಿಡಿಯೋ ಬಂದಿದೆ. ವಿಡಿಯೋ ನೋಡಿ ಕುಸಿದು ಹೋದ ಕುಟುಂಬ ಕೂಡಲೇ ಪೆನ್ಷನ್ ಮೊಹಲ್ಲಾ ಠಾಣೆಗೆ ದೂರು ನೀಡಿದ್ದಾರೆ. ರಾಕ್ಷಸರ ನೀಚತನದ ಬಗ್ಗೆ ವಿವರಿಸಿದ್ದಾರೆ ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಇರ್ಫಾನ್ಮ, ಅಜೀಜ್ ಹಾಗೂ ಇಮ್ರಾನ್ನನ್ನ ಬಂಧಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜನರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.