ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿ, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ರಾಜವಂಶಸ್ಥ ಯದುವೀರ್
ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ನಿನ್ನೆಯಿಂದ ಬಹುತೇಕ ಲಾಕ್ಡೌನ್ಗೆ ಹೋಲುವ ಕೊರೊನಾ ಕರ್ಫ್ಯೂನ ಜಾರಿಗೊಳಿಸಿದೆ. ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ತನ್ನ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೈಸೂರು: ಕಳೆದ ಬಾರಿ ಕೊರೊನಾದಿಂದ ಆದ ನಷ್ಟ ಒಂದೆರಡಲ್ಲ. ಅದೆಷ್ಟೋ ಜೀವಿಗಳನ್ನು ಬಲಿ ತೆಗೆದುಕೊಂಡ ಕೊರೊನಾ ದೇಶದ ಆರ್ಥಿಕ ಪರಿಸ್ಥಿಯನ್ನು ಕುಂಟಿತಗೊಳಿಸಿದೆ. ಹದಗೆಟ್ಟ ಆರ್ಥಿಕತೆ ಇನ್ನೇನು ಸರಿಯಾಗುತ್ತದೆ ಎಂದು ಯೋಚಿಸುವ ಹೊತ್ತಿಗೆ ಕೊರೊನಾ ಎರಡನೇ ಅಲೆ ಬಂದು ಅಪ್ಪಳಿಸಿದೆ. ಕಳೆದ ಬಾರಿಗಿಂತ ಇದರ ಆರ್ಭಟ ಹೆಚ್ಚಾಗಿದ್ದು, ಎಲ್ಲರಿಗೂ ಆತಂಕ ಎದುರಾಗಿದೆ. ಮಹಾಮಾರಿ ಕೊರೊನಾ ತೊಲಗಿ ಹೋಗಲಿ ದೇಶ ಮತ್ತು ರಾಜ್ಯ ಮೊದಲ ಸ್ಥಿತಿಗೆ ಬರಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ. ಅದರಂತೆ ಮೈಸೂರು ರಾಜವಂಶಸ್ಥ ಯದುವೀರ್ ಸಂಕಷ್ಟಗಳನ್ನು ತಾಯಿ ಪರಿಹರಿಸು ಎಂದು ಜಗನ್ಮಾತೆ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ನಿನ್ನೆಯಿಂದ ಬಹುತೇಕ ಲಾಕ್ಡೌನ್ಗೆ ಹೋಲುವ ಕೊರೊನಾ ಕರ್ಫ್ಯೂನ ಜಾರಿಗೊಳಿಸಿದೆ. ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ತನ್ನ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ರಾಜವಂಶಸ್ಥ ಯದುವೀರ್ ಧನ್ಯವಾದ ಅರ್ಪಿಸಿದ್ದಾರೆ.
ನಮ್ಮ ದೇಶ ಎದುರಿಸುತ್ತಿರುವ ಈ ಕಠಿಣ ಸಂದರ್ಭದಲ್ಲಿ ನಮ್ಮ ಪ್ರಾರ್ಥನೆಗಳು ಎಲ್ಲರೊಂದಿಗೆ ಇರುತ್ತವೆ. ಸಂಕಷ್ಟಕರ ಸಮಯದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮುಂಚೂಣಿಯಲ್ಲಿದ್ದು ಕಾರ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ತಿಳಿಸುತ್ತೇವೆ. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ನಮಗೆ ಎದುರಾಗಿರುವ ಎಲ್ಲ ಸಂಕಷ್ಟಗಳನ್ನು ಉಪಶಮನ ಮಾಡಿ ನಮ್ಮೆಲ್ಲರಿಗೆ ಸಮಸ್ತ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ
ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರಕ್ಕೆ ದಾವಣಗೆರೆ ಪಾಲಿಕೆಯಿಂದ ಉಚಿತ ವಾಹನ
ಅಪಾಯದಲ್ಲಿರುವ ಭಾರತಕ್ಕೆ ಸಹಾಯ ಮಾಡಲು ವಿಶ್ವ ವಿಫಲವಾಗಿದೆ: ಯುಎಸ್ನ ವೈದ್ಯಕೀಯ ಸಲಹೆಗಾರ ಡಾ. ಫೌಸಿ ಅಸಮಾಧಾನ
(yaduveer krishnadatta chamaraja wadiyar thanked doctors and health workers in social media)