ಯಲಹಂಕ ವಿದ್ಯುತ್ ಚಿತಾಗಾರದಲ್ಲಿ 22 ಆಂಬುಲೆನ್ಸ್​ ಕ್ಯೂ: ಎಂಟ್ರಿ ಗೇಟ್ ಕ್ಲೋಸ್ ಮಾಡಿದ ಚಿತಾಗಾರದ ಸಿಬ್ಬಂದಿ!

|

Updated on: Apr 20, 2021 | 4:29 PM

ಮೇಡಿ ಅಗ್ರಹಾರ ಬಳಿಯ ಈ ಚಿತಾಗಾರದಲ್ಲಿ ಈಗಿರುವ ಮೃತದೇಹಗಳ ಅಂತ್ಯಕ್ರಿಯೆಗೆ ಸಮಯ ಬೇಕು. ಹಾಗಾಗಿ ಇನ್ನು ಮುಂದೆ ಬರುವ ಌಂಬುಲೆನ್ಸ್​ಗಳ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ ಎಂದು ಚಿತಾಗಾರದ ಸಿಬ್ಬಂದಿ ಹೇಳಿದ್ದಾರೆ.

ಯಲಹಂಕ ವಿದ್ಯುತ್ ಚಿತಾಗಾರದಲ್ಲಿ 22  ಆಂಬುಲೆನ್ಸ್​ ಕ್ಯೂ: ಎಂಟ್ರಿ ಗೇಟ್ ಕ್ಲೋಸ್ ಮಾಡಿದ ಚಿತಾಗಾರದ ಸಿಬ್ಬಂದಿ!
ಯಲಹಂಕ ವಿದ್ಯುತ್ ಚಿತಾಗಾರದಲ್ಲಿ 22 ಆಂಬುಲೆನ್ಸ್​ ಕ್ಯೂ: ಎಂಟ್ರಿ ಗೇಟ್ ಕ್ಲೋಸ್ ಮಾಡಿದ ಚಿತಾಗಾರದ ಸಿಬ್ಬಂದಿ!
Follow us on

ಬೆಂಗಳೂರು: ರಾಜಧಾನಿಯ ಉತ್ತರ ಭಾಗದಲ್ಲಿರುವ ಯಲಹಂಕ ಬಳಿಯ ಮೇಡಿ ಅಗ್ರಹಾರದಲ್ಲಿರುವ ವಿದ್ಯುತ್ ಚಿತಾಗಾರವನ್ನು ಸದ್ಯಕ್ಕೆ ಕ್ಲೋಸ್ ಮಾಡಲಾಗಿದೆ. ಈಗಾಗಲೇ ಚಿತಾಗಾರ ಆವರಣದಲ್ಲಿ 22 ಌಂಬುಲೆನ್ಸ್​ ವಾಹನಗಳು ಕ್ಯೂ ನಿಂತಿರುವ ಹಿನ್ನೆಲೆ ಈ ಅನಿವಾರ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಿಲ್ಲದ ಕೊರೊನಾ ಮಾರಣಹೋಮದಿಂದಾಗಿ ಬೆಂಗಳೂರಿನ ಸುಮನಹಳ್ಳಿ ಚಿತಾಗಾರದ ಬಳಿ ಕ್ಯೂ ಹೆಚ್ಚಿದೆ. ಶವಗಳನ್ನು ಹೊತ್ತು ತಂದ 13 ಆ್ಯಂಬುಲೆನ್ಸ್ ಕ್ಯೂ ನಿಂತಿವೆ. ಬೆಳಗ್ಗೆಯಿಂದ ಈವರೆಗೆ 12 ಶವಸಂಸ್ಕಾರ ನಡೆದಿದೆ. ಇನ್ನೂ 13 ಶವಸಂಸ್ಕಾರ ಮಾಡಬೇಕಾಗಿದೆ. ಹೀಗಾಗಿ ಚಿತಾಗಾರದ ಬಳಿ ಆ್ಯಂಬುಲೆನ್ಸ್‌ಗಳು ಕ್ಯೂ ನಿಂತಿವೆ ಎಂದು ತಿಳಿದುಬಂದಿದೆ.

ಸಿಲಿಕಾನ್ ಸಿಟಿಯಲ್ಲಿ ನಿಲ್ಲುತ್ತಿಲ್ಲಾ ಸಾವಿನ ಸಂಖ್ಯೆ..

ಮೇಡಿ ಅಗ್ರಹಾರ ಬಳಿಯ ಈ ಚಿತಾಗಾರದಲ್ಲಿ ಈಗಿರುವ ಮೃತದೇಹಗಳ ಅಂತ್ಯಕ್ರಿಯೆಗೆ ಸಮಯ ಬೇಕು. ಹಾಗಾಗಿ ಇನ್ನು ಮುಂದೆ ಬರುವ ಌಂಬುಲೆನ್ಸ್​ಗಳ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ- ಚಿತಾಗಾರದ ಸಿಬ್ಬಂದಿ

ಬೆಂಗಳೂರಲ್ಲಿ ಕೊರೊನಾ ಪೇಷಂಟ್​ಗಳಿಗೆ ಬೆಡ್ ಸಿಗುತ್ತಿಲ್ಲ. ಬೆಡ್ ಸಿಗದೇ ವಾಹನದಲ್ಲೇ 65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕಳೆದ ರಾತ್ರಿಯಿಂದಲೂ ಅಲೆದಾಡಿದ್ದರೂ ಹಾಸಿಗೆ ಸಿಗಲಿಲ್ಲ. ನಗರದ ನಾಲ್ಕು ಖಾಸಗಿ ಆಸ್ಪತ್ರೆಗಳು ಅಲೆದಾಡಿದ್ರೂ ಬೆಡ್ ಸಿಗಲಿಲ್ಲ. ಕೊನೆಗೆ ಸೋಂಕಿತನ ಕುಟುಂಬಸ್ಥರು ರೋಗಿಯನ್ನು ಕೆಸಿ ಜನರಲ್ ಆಸ್ಪತ್ರೆಗೆ ಹೊತ್ತೊಯ್ದರು.

ಈ ವೇಳೆ ಇಲ್ಲಿ ಆಗಲ್ಲ‌ ವಿಕ್ಟೋರಿಯಾಗೆ ತಗೊಂಡೋಗಿ ಎಂದದ್ದಾರೆ ವೈದ್ಯರು. ವೈದ್ಯರು ಮತ್ತು ಸೋಂಕಿತನ ಕುಟುಂಬಸ್ಥರ ನಡುವೆ ಮಾತುಕತೆ ನಡೀತಿರುವಾಗಲೇ ಸೋಂಕಿತ ಪ್ರಾಣಬಿಟ್ಟಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪಿಕ್ ಅಪ್ ವಾಹನದಲ್ಲೇ ಕೊರೊನಾ ಪೇಷಂಟ್ ಸಾವಿಗೀಡಾಗಿದ್ದಾರೆ. ಆಗ ವೈದ್ಯರು ಲಗೇಜ್ ವಾಹನದಲ್ಲೇ ಸೋಂಕಿತ ಮೃತ ದೇಹ ನೋಡಿ ವಾಪಸ್ ಆಗಿದ್ದಾರೆ. ಮೃತ ದೇಹವನ್ನ ವಾಹನದಲ್ಲೇ ಇಟ್ಟು ಪರದಾಡಿದ ಕುಟುಂಬಸ್ಥರು ಕೊನೆಗೆ ಅದೇ ವಾಹನದಲ್ಲಿ ಸೋಂಕಿತನ ಮೃತ ದೇಹವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ.

(yelahanka electrical crematorium overflows with bodies entrance closed for more ambulances)

Published On - 3:38 pm, Tue, 20 April 21