ಕೊರೊನಾ ಸೋಂಕು: ಮಂಗಳೂರಿನಲ್ಲಿ ಗರ್ಭಿಣಿ ವೈದ್ಯೆ ಬಲಿ; ಮುಳಬಾಗಿಲಿನಲ್ಲಿ ಸ್ಟುಡಿಯೋ ಮಾಲೀಕ-ಪತ್ನಿ ಸಾವು
ಕೊರೊನಾ ಸೋಂಕಿಗೆ ಮಂಗಳೂರಿನಲ್ಲಿ 27 ವರ್ಷದ ಗರ್ಭಿಣಿ ವೈದ್ಯೆ ಬಲಿಯಾಗಿದ್ದರೆ ಕೋಲಾರದ ಮುಳಬಾಗಿಲಿನಲ್ಲಿ ಸ್ಟುಡಿಯೋ ಮಾಲೀಕ ಮತ್ತು ಅವರ ಪತ್ನಿ ಮೃತಪಟ್ಟಿದ್ದಾರೆ.
ಮಂಗಳೂರು: ಕೊರೊನಾ ಸೋಂಕಿಗೆ ಮಂಗಳೂರಿನಲ್ಲಿ 27 ವರ್ಷದ ಗರ್ಭಿಣಿ ವೈದ್ಯೆ ಬಲಿಯಾಗಿದ್ದರೆ ಕೋಲಾರದ ಮುಳಬಾಗಿಲಿನಲ್ಲಿ ಸ್ಟುಡಿಯೋ ಮಾಲೀಕ ಮತ್ತು ಅವರ ಪತ್ನಿ ಮೃತಪಟ್ಟಿದ್ದಾರೆ. ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಕೇರಳದ ತಲಶೇರಿ ಮೂಲದ ಡಾ.ಮಹಾ ಬಷೀರ್ ಸಾವನ್ನಪ್ಪಿದ್ದಾರೆ. 6 ತಿಂಗಳ ಗರ್ಭಿಣಿಯಾಗಿದ್ದ ಡಾ.ಮಹಾ ಬಷೀರ್ ಕೊನೆಯುಸಿರೆಳೆದಿದ್ದಾರೆ. ವೈದ್ಯೆಯ ಎಲ್ಲ ಕುಟುಂಬಸ್ಥರಿಗೆ ಕೊರೊನಾ ಪಾಸಿಟಿವ್ ಆಗಿದೆ. ಮೃತ ವೈದ್ಯೆಯ ಹೆಸರು ಡಾ.ಮಹಾ ಬಷೀರ್. ಆಕೆಯ ಪತಿಯ ಹೆಸರು ಡಾ.ಶವಾಫೆರ್ ಮಹಮ್ಮದ್. ಕಣಚೂರು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಮಹಾ ಬಷೀರ್, ಪತಿ ಇಂಡಿಯಾನಾ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು.
ಡಾ.ಮಹಾ ಬಷೀರ್ ಮತ್ತು ಡಾ.ಶವಾಫೆರ್ ಮಹಮ್ಮದ್ ವೈದ್ಯ ಜೋಡಿ ಕಳೆದ 8 ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ಡಾ. ಮಾಬಷೀರಾ 6 ತಿಂಗಳ ಗರ್ಭಿಣಿಯಾಗಿದ್ದರು. ಡಾ. ಮಾಬಷೀರಾ, ಸೋಂಕು ತಗುಲಿದ ಬಳಿಕ ಇಂಡಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮುಳಬಾಗಿಲಿನಲ್ಲಿ ಸ್ಟುಡಿಯೋ ಮಾಲೀಕ-ಪತ್ನಿ ಸಾವು:
ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ ಕೊರೊನಾ ಸೋಂಕಿನಿಂದ ದಂಪತಿ ಮೃತಪಟ್ಟಿದ್ದಾರೆ. ಜೆಮಿನಿ ಫೋಟೋ ಸ್ಟುಡಿಯೋ ಮಾಲೀಕ ರಮೇಶ್(46) ಮತ್ತು ಅನುಸೂಯ(41) ದಂಪತಿ ಮಹಾಮಾರಿ ಕೊರೊನಾಗೆ ಅಸುನೀಗಿದವರು.
3 ದಿನಗಳ ಹಿಂದೆ ದಂಪತಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಕೋಲಾರದ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ದಂಪತಿ ಆಸ್ಪತ್ರೆಯಲ್ಲೇ ಇಂದು ಮೃತಪಟ್ಟಿದ್ದಾರೆ.
(young doctor in mangalore and couple in mulbagal died due to coronavirus)
ಇದನ್ನೂ ಓದಿ: ಅಕ್ಕಿ ಕೇಳಿದವರಿಗೆ ಸತ್ತುಹೋಗಿ ಎಂದ ಆಹಾರ ಸಚಿವ ಉಮೇಶ್ ಕತ್ತಿ!
Published On - 2:44 pm, Wed, 28 April 21