ಸ್ನೇಹಿತನಿಗೆ ಪೋನ್ ಮಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಚಿಕ್ಕಮಗಳೂರು ಯುವಕ

|

Updated on: May 16, 2021 | 4:57 PM

ಸ್ನೇಹಿತನೊಂದಿಗೆ ಮಾತನಾಡುತ್ತಲೇ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರೇಕೊಳಲೆಯಲ್ಲಿ ನಡೆದಿದೆ. ಮಸೂದ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂಬುದು ಪರಿಶೀಲಿನೆಯ ಬಳಿಕ ತಿಳಿದು ಬಂದಿದೆ.

ಸ್ನೇಹಿತನಿಗೆ ಪೋನ್ ಮಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಚಿಕ್ಕಮಗಳೂರು ಯುವಕ
ಸಾಂದರ್ಭಿಕ ಚಿತ್ರ
Follow us on

ಚಿಕ್ಕಮಗಳೂರು: ಸ್ನೇಹಿತನೊಂದಿಗೆ ಮಾತನಾಡುತ್ತಲೇ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರೇಕೊಳಲೆಯಲ್ಲಿ ನಡೆದಿದೆ. ಮಸೂದ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂಬುದು ಪರಿಶೀಲನೆಯ ಬಳಿಕ ತಿಳಿದು ಬಂದಿದೆ.

ಮಸೂದ್​ ಚಿಕ್ಕಮಗಳೂರಿನ ಮಾರ್ಕೆಟ್​ ರಸ್ತೆಯ ನಿವಾಸಿ. ತನ್ನ ಸ್ನೇಹಿತನಿಗೆ ಕರೆ ಮಾಡುತ್ತಲೇ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಹಿರೇಕೊಳಲೆ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ಕೇಂದ್ರ ಕಾರಾಗೃಹದಲ್ಲಿ ವರದಕ್ಷಿಣೆ ಕಿರುಕುಳ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಶರಣು
ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಜೈಲುವಾಸಿಯಾಗಿದ್ದ 33 ವರ್ಷದ ಪ್ರದೀಪ್ ಕುಮಾರ್ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈ ಹಿಂದೆ ನಡೆದಿದೆ. ಮೈಸೂರಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರದೀಪ್ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಮೇ 10 ರಂದು ಜೈಲು ಸೇರಿದ್ದರು. ತನ್ನ ಸೆಲ್​ನಲ್ಲಿ ಬೆಡ್ ಶೀಟ್​ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಕೇಂದ್ರ ಕಾರಾಗೃಹದಲ್ಲಿ ವರದಕ್ಷಿಣೆ ಕಿರುಕುಳ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಶರಣು