ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮೆಡಿಕಲ್ ಕಿಟ್ ನೀಡೋದು ತಪ್ಪಲ್ಲ, ಆದರೆ ಸರ್ಕಾರ ಸೂಚಿಸಿರುವ ಔಷಧಗಳನ್ನೇ ನೀಡಲಿ: ಸುಧಾಕರ್
ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಮೆಡಿಕಲ್ ಕಿಟ್ ನೀಡೋದು ತಪ್ಪಲ್ಲ. ಆದರೆ ಸರ್ಕಾರ ಸೂಚಿಸಿರುವ ಔಷಧಿಗಳನ್ನೇ ನೀಡಬೇಕು. ಇಲ್ಲವಾದರೆ ಜನರಿಗೆ ಗೊಂದವಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಯೂತ್ ಕಾಂಗ್ರೆಸ್ ಕಿಟ್ನಲ್ಲಿ ಸ್ಟಿರಾಯ್ಡ್ ನೀಡಿದ ವಿಚಾರಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಮೆಡಿಕಲ್ ಕಿಟ್ ನೀಡೋದು ತಪ್ಪಲ್ಲ. ಆದರೆ ಸರ್ಕಾರ ಸೂಚಿಸಿರುವ ಔಷಧಿಗಳನ್ನೇ ನೀಡಬೇಕು. ಇಲ್ಲವಾದರೆ ಜನರಿಗೆ ಗೊಂದವಾಗುತ್ತದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಸುಧಾಕರ್, ಅಧಿಕ ಸ್ಟಿರಾಯ್ಡ್ ಬಳಕೆ ಮಾಡಿದರೆ ಮಧುಮೇಹ ಇರುವವರಿಗೆ 10 ದಿನಗಳಲ್ಲಿ ಮೂಗಿನ ಮೂಲಕ ಫಂಗಲ್ ಇನ್ಫೆಕ್ಷನ್ ಪ್ರಾರಂಭ ಆಗಿ ಕಣ್ಣಿನ ನರಗಳಿಗೆ ಹೋಗಬಹುದು. ಕೊನೆಗೆ ದೃಷ್ಟಿ ಕೂಡ ಹೋಗುವ ಅಪಾಯ ಇದೆ. ಚಿಕಿತ್ಸೆ ಸರಿಯಾದ ಸಮಯಕ್ಕೆ ಆಗದಿದ್ದರೆ ಸಾವೂ ಕೂಡ ಸಂಭವಿಸಬಹುದು. ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡ ಕೂಡಲೇ ನೇತ್ರ ತಜ್ಞರ ಜೊತೆ ಸಮಾಲೋಚನೆ ಮಾಡಿದ್ದೇವೆ. ಬೌರಿಂಗ್ನಲ್ಲಿ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ನೀಡಲು ಪ್ರಾರಂಭ ಮಾಡುತ್ತಿದ್ದೇವೆ. ಇದರ ಔಷಧಿ ಸ್ವಲ್ಪ ತುಟ್ಟಿ ಇದೆ ಎಂದು ಹೇಳಿದ್ದಾರೆ.
ಬ್ಲ್ಯಾಕ್ ಫಂಗಸ್‌ಗೆ ಬೆಂಗಳೂರಿನಲ್ಲಿ ಇಬ್ಬರು ಬಲಿ, ಒಬ್ಬ ವ್ಯಕ್ತಿಗೆ 2-4 ಲಕ್ಷ ವೆಚ್ಚವಾಗಲಿದೆ ಸತತ ಏಳು ವಾರಗಳ ಚಿಕಿತ್ಸೆ ಮಾಡಬೇಕು. 3-4 ಲಕ್ಷ ಒಬ್ಬ ವ್ಯಕ್ತಿಗೆ ಖರ್ಚಾಗಬಹುದು. ಇದಕ್ಕೆ ಚಿಕಿತ್ಸೆ ಉಚಿತವಾಗಿ ನೀಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕಿನಿಂದ ಗೆದ್ದು ಬಂದ್ವೀ ಎಂಬ ಸಂತೋಷದಲ್ಲಿದ್ದವರಲ್ಲಿ ಇತ್ತೀಚೆಗೆ ಬ್ಲ್ಯಾಕ್ ಫಂಗಸ್‌ಗೆ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದವರ ಜೀವನದಲ್ಲಿ ಮತ್ತೆ ಸಂಕಷ್ಟಗಳು ಎದುರಾಗಿವೆ. ಕೊರೊನಾ ಅಬ್ಬರದ ನಡುವೆ ಬ್ಲ್ಯಾಕ್ ಫಂಗಸ್ ಉಲ್ಬಣಗೊಂಡಿದೆ. 100 ಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು ರಾಜ್ಯದ ನಾನಾ ಕಡೆಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಇಂದು ಇಬ್ಬರು ಮೃತಪಟ್ಟಿದ್ದಾರೆ. ಚಿಕ್ಕಪೇಟೆಯ 64 ವರ್ಷದ ವೃದ್ಧ ಹಾಗೂ ಕೊಟಾಲಂ ನಿವಾಸಿ 57 ವರ್ಷದ ಮಹಿಳೆ ಬಲಿಯಾಗಿದ್ದಾರೆ. ಸದ್ಯ ಈಗ ಬೆಂಗಳೂರಿನಲ್ಲೂ ಹೆಚ್ಚಾದ ಬ್ಲ್ಯಾಕ್ ಫಂಗಸ್ನಿಂದ ಆತಂಕ ಹೆಚ್ಚಾಗಿದೆ.
ಇನ್ನು ಕೊವಿಡ್ ಟೆಸ್ಟ್ ಪಾಸಿಟಿವಿಟಿ ದರ ಇಳಿಕೆ ಕುರಿತು ಮಾತನಾಡಿದ ಸುಧಾಕರ್, ಪಾಸಿಟಿವಿಟಿ ದರ ಇಳಿಯೋದು ಮುಖ್ಯ ಹೊರತು ನಂಬರ್ ಮುಖ್ಯ ಅಲ್ಲ. ಬೆಂಗಳೂರಲ್ಲಿ ಪಾಸಿಟಿವಿಟಿ ಕಡಿಮೆ ಆಗುತ್ತಿದೆ ಹೀಗಾಗಿ ನಂಬರ್ ಕಡಿಮೆ ಬರುತ್ತಿದೆ. ಹೊರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕೊವಿಡ್ ಸೋಂಕಿನ ವಿರುದ್ಧ ಹೋರಾಟಕ್ಕೆ ಇನ್ನಷ್ಟು ಸಿದ್ಧತೆ, ಶೀಘ್ರವೇ 2,480 ವೈದ್ಯರ ನೇಮಕ: ಸಚಿವ ಕೆ.ಸುಧಾಕರ್
Published On - 4:19 pm, Sun, 16 May 21