ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕಲಬುರಗಿಯಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ

ಕಲಬುರಗಿ ನಗರದ ತಾಜ್ ನಗರದ ನಿವಾಸಿ ಶೇಖ್ ಬಾಬಾನನ್ನು ಕೊಲೆ ಮಾಡಿದ ಆತನ ಪತ್ನಿಯ ಸೋದರ ಮೊಹ್ಮದ್ ಎಂಬ ಆರೋಪ ಕೇಳಿ ಬಂದಿದೆ. ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಶೇಖ್ ಬಾಬಾನನ್ನು ಕಳೆದ ರಾತ್ರಿ ಮನೆಯಿಂದ ಕರೆಯಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕಲಬುರಗಿಯಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ
ಶೇಖ್ ಬಾಬಾ
Follow us
ಆಯೇಷಾ ಬಾನು
|

Updated on: May 16, 2021 | 3:39 PM

ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿಯ ಗಾಲಿಬ್ ನಗರದಲ್ಲಿ ನಡೆದಿದೆ. ಶೇಖ್ ಬಾಬಾ(35) ಹತ್ಯೆಯಾದ ಆಟೋ ಚಾಲಕ.

ಕಲಬುರಗಿ ನಗರದ ತಾಜ್ ನಗರದ ನಿವಾಸಿ ಶೇಖ್ ಬಾಬಾನನ್ನು ಕೊಲೆ ಮಾಡಿದ ಆತನ ಪತ್ನಿಯ ಸೋದರ ಮೊಹ್ಮದ್ ಎಂಬ ಆರೋಪ ಕೇಳಿ ಬಂದಿದೆ. ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಶೇಖ್ ಬಾಬಾನನ್ನು ಕಳೆದ ರಾತ್ರಿ ಮನೆಯಿಂದ ಕರೆಯಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ಶೇಕ್ ಬಾಬ ಪತ್ನಿ ಸಹೋದರ ಮಹಮದ್ ಚಾಂದ್ ನಿಂದಲೇ ಈ ಕೃತ್ಯ ನಡೆದಿರಬಹದು ಎಂಬ ಆರೋಪ ಕೇಳಿ ಬಂದಿದೆ. ಇನ್ನು ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಶೇಖ್ ಬಾಬಾ ಕಳೆದ ಒಂದು ತಿಂಗಳ ಹಿಂದಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದ. ಕೊಲೆ ಸಂಬಂಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ: ಮೈಸೂರಿನಲ್ಲಿ ಜಮೀನು ವಿವಾದ; ವೃದ್ಧ ದಂಪತಿ ಮೇಲೆ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಯತ್ನ