AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಜಮೀನು ವಿವಾದ; ವೃದ್ಧ ದಂಪತಿ ಮೇಲೆ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಯತ್ನ

2 ಎಕರೆ ಜಮೀನಿಗಾಗಿ ಚಂದ್ರಶೆಟ್ಟಿ ಹಾಗೂ ಕಾಳೇಗೌಡ ಕುಟುಂಬದ ನಡುವೆ ಜಟಾಪಟಿಯಾಗಿ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ನಿನ್ನೆ ಮತ್ತೆ ಜಮೀನು ವಿಚಾರದಲ್ಲಿ ಕ್ಯಾತೆ ತೆಗೆದ ಕಾಳೇಗೌಡ ತನ್ನ ಕುಟುಂಬದ ಇಬ್ಬರು ಸದಸ್ಯರಾದ ರಾಕೇಶ್ ಮತ್ತು ದೇವರಾಜ್​ನನ್ನು ಕರೆದುಕೊಂಡು ಬಂದು ದಂಪತಿ ಮೇಲೆ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಮೈಸೂರಿನಲ್ಲಿ ಜಮೀನು ವಿವಾದ; ವೃದ್ಧ ದಂಪತಿ ಮೇಲೆ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಯತ್ನ
ದಂಪತಿ ಮೇಲೆ ಹಲ್ಲೆ
preethi shettigar
|

Updated on: May 16, 2021 | 9:55 AM

Share

ಮೈಸೂರು: ಜಮೀನು ವಿವಾದ ಹಿನ್ನೆಲೆ ವೃದ್ಧ ದಂಪತಿಯ ಮೇಲೆ ಹಲ್ಲೆ ಮಾಡಿ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊನ್ನೇನಹಳ್ಳಿ ಗ್ರಾಮದ ಚಂದ್ರಶೆಟ್ಟಿ ಮತ್ತು ಮಹದೇವಮ್ಮ ಹಲ್ಲೆಗೊಳಗಾದ ದಂಪತಿ. ಗಾಯಾಳು ದಂಪತಿಗೆ ಕೊರೊನಾ ಹಿನ್ನೆಲೆ ಹುಣಸೂರಿನಲ್ಲಿ ಚಿಕಿತ್ಸೆ ಲಭ್ಯವಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿಂದೆ ಹಲವು ಬಾರಿ ದಂಪತಿ ಮೇಲೆ ಹಲ್ಲೆ ನಡೆದಿದ್ದು, 2 ಎಕರೆ ಜಮೀನಿಗಾಗಿ ಚಂದ್ರಶೆಟ್ಟಿ ಹಾಗೂ ಕಾಳೇಗೌಡ ಕುಟುಂಬದ ನಡುವೆ ಜಟಾಪಟಿಯಾಗಿ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ನಿನ್ನೆ ಮತ್ತೆ ಜಮೀನು ವಿಚಾರದಲ್ಲಿ ಕ್ಯಾತೆ ತೆಗೆದ ಕಾಳೇಗೌಡ ತನ್ನ ಕುಟುಂಬದ ಇಬ್ಬರು ಸದಸ್ಯರಾದ ರಾಕೇಶ್ ಮತ್ತು ದೇವರಾಜ್​ನನ್ನು ಕರೆದುಕೊಂಡು ಬಂದು ದಂಪತಿ ಮೇಲೆ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸದ್ಯ ಕಾಳೇಗೌಡ ರಾಕೇಶ್ ದೇವರಾಜ್ ಸೇರಿದಂತೆ ಹಲವರ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಪೊಲೀಸರು ಹಲ್ಲೆ ಮಾಡಿದ್ದಾರೆಂಬ ವಿಡಿಯೋ ವೈರಲ್; ಕಾಂಗ್ರೆಸ್​ ಸದಸ್ಯೆಯನ್ನು ವಶಕ್ಕೆ ಪಡೆದ ಬೆಂಗಳೂರು ಸೈಬರ್​ ಪೊಲೀಸರು

ದಾವಣಗೆರೆಯ ಎರಡು ಕುಟುಂಬಗಳ ನಡುವೆ ಆಸ್ತಿಗಾಗಿ ಹೊಡೆದಾಟ; ಸಾಮಾಜಿಕ ಜಾಲತಾಣದಲ್ಲಿ ಗಲಾಟೆ ವಿಡಿಯೋ ವೈರಲ್