ಕಟಪಾಡಿಯಲ್ಲಿ ಭಜನಾ ಕೂಟ: ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಯುವ ಸಮೂಹ

ಉಡುಪಿ: ಕಟಪಾಡಿ ಸಮೀಪದ ವಿಶ್ವನಾಥ ಕ್ಷೇತ್ರದಲ್ಲಿ ಯುವ ಸಮೂಹಕ್ಕಾಗಿ ಭಜನಾ ಕೂಟ ಆಯೋಜಿಸಲಾಗಿತ್ತು. ಈ ಭಜನಾ ಕೂಟದಲ್ಲಿ ಯುವಕ-ಯುವತಿಯರು ಸಾಂಪ್ರದಾಯಿಕ ಡ್ರೆಸ್ ತೊಟ್ಟು ಮಿರ ಮಿರ ಮಿಂಚಿದ್ರು. ಅಲ್ದೇ ತಾಳಕ್ಕೆ ತಕ್ಕಂತೆ ಯುವಕರು ಡ್ಯಾನ್ಸ್ ಮಾಡಿದ್ರು. ಇತ್ತ ದಾಸರ ಕೀರ್ತನೆಗಳಿಗೆ ಯುವತಿಯರು ನೃತ್ಯ ಮಾಡೋ ಮೂಲಕ ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದ್ರು. ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು:  ಇನ್ನು, ಯುವವಾಹಿನಿ ಸಂಘಟನೆಯವರು ವಿವಿಧ ತಂಡಗಳನ್ನು ಆಹ್ವಾನಿಸಿ ಕುಣಿತ, ಭಜನೆ ಏರ್ಪಡಿಸಿದ್ರು. ಪರಸ್ಪರ ಸ್ಪರ್ಧೆಗೆ ಇಳಿದವರಂತೆ […]

ಕಟಪಾಡಿಯಲ್ಲಿ ಭಜನಾ ಕೂಟ: ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಯುವ ಸಮೂಹ
ಸಾಧು ಶ್ರೀನಾಥ್​

Updated on: Nov 30, 2019 | 8:42 AM

ಉಡುಪಿ: ಕಟಪಾಡಿ ಸಮೀಪದ ವಿಶ್ವನಾಥ ಕ್ಷೇತ್ರದಲ್ಲಿ ಯುವ ಸಮೂಹಕ್ಕಾಗಿ ಭಜನಾ ಕೂಟ ಆಯೋಜಿಸಲಾಗಿತ್ತು. ಈ ಭಜನಾ ಕೂಟದಲ್ಲಿ ಯುವಕ-ಯುವತಿಯರು ಸಾಂಪ್ರದಾಯಿಕ ಡ್ರೆಸ್ ತೊಟ್ಟು ಮಿರ ಮಿರ ಮಿಂಚಿದ್ರು. ಅಲ್ದೇ ತಾಳಕ್ಕೆ ತಕ್ಕಂತೆ ಯುವಕರು ಡ್ಯಾನ್ಸ್ ಮಾಡಿದ್ರು. ಇತ್ತ ದಾಸರ ಕೀರ್ತನೆಗಳಿಗೆ ಯುವತಿಯರು ನೃತ್ಯ ಮಾಡೋ ಮೂಲಕ ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದ್ರು.

ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು: 
ಇನ್ನು, ಯುವವಾಹಿನಿ ಸಂಘಟನೆಯವರು ವಿವಿಧ ತಂಡಗಳನ್ನು ಆಹ್ವಾನಿಸಿ ಕುಣಿತ, ಭಜನೆ ಏರ್ಪಡಿಸಿದ್ರು. ಪರಸ್ಪರ ಸ್ಪರ್ಧೆಗೆ ಇಳಿದವರಂತೆ ಭಾವಪರವಶರಾಗಿ ಯುವಕ-ಯುವತಿಯರು ಕುಣಿದು ಕುಪ್ಪಳಿಸಿದ್ರು. ದಾಸರ ಕೀರ್ತನೆಗಳನ್ನು ರಾಗವಾಗಿ ಹಾಡುತ್ತಾ, ಹೆಜ್ಜೆ ಹಾಕಿ ಮೈ ಮರೆತ್ರು. ಯುವಜನಾಂಗಕ್ಕೆ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮ ಆಯೋಜಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ರು.

ಭಜನೆ ಇದ್ದಲ್ಲಿ ವಿಭಜನೆ ಇಲ್ಲ. ನಿಂತು ಹಾಡಿದರೆ ದೇವರು ಕುಣಿವ. ಕುಣಿದು ಹಾಡಿದರೆ ದೇವರು ಒಲಿವ ಅನ್ನೋ ಮಾತಿದೆ. ಇಷ್ಟು ದಿನ ಟ್ರಿಪ್.. ಮೋಜು ಮಸ್ತಿ ಅನ್ಕೊಂಡು ಬ್ಯುಸಿ ಇದ್ದ ಯುವ ಸಮೂಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಫುಲ್ ಥ್ರಿಲ್ ಆಗಿದ್ದಂತೂ ನಿಜ.

Published On - 8:42 am, Sat, 30 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us