ಚಲಿಸುತ್ತಿದ್ದ ಬೈಕ್ನಿಂದ ಬಿದ್ದು ಯುವಕ ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪ್ಪಗೊಂಡನಹಳ್ಳಿ ಬಳಿ ಚಲಿಸುತ್ತಿದ್ದ ಬೈಕ್ನಿಂದ ಬಿದ್ದು ಸವಾರ ಮೃತಪಟ್ಟ ಘಟನೆ ನಡೆದಿದೆ. ಹೊನ್ನೇನಹಳ್ಳಿಯ ಅಂಜನಮೂರ್ತಿ(23) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪ್ಪಗೊಂಡನಹಳ್ಳಿ ಬಳಿ ಚಲಿಸುತ್ತಿದ್ದ ಬೈಕ್ನಿಂದ ಆಯಾ ತಪ್ಪಿ ಬಿದ್ದು ಸವಾರ ಮೃತಪಟ್ಟ ಘಟನೆ ನಡೆದಿದೆ. ಹೊನ್ನೇನಹಳ್ಳಿಯ ಅಂಜನಮೂರ್ತಿ(23) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಇನ್ನು ಹಿಂಬದಿ ಕುಳಿತ್ತಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗೆ ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರಿನ ಪಕ್ಕದಲ್ಲೇ ಚಾಲಕನ ಮೃತ ದೇಹ ಅನುಮಾನಾಸ್ಪದವಾಗಿ ಕಾರಿನ ಪಕ್ಕದಲ್ಲಿಯೇ ಚಾಲಕ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮನ್ನೇಹುಂಡಿ ಗ್ರಾಮದ ಬಳಿ ನಡೆದಿದೆ. ಸಿದ್ದರಾಜು(27) ಮೃತ ದುರ್ದೈವಿ. ಕಳೆದ ಎರಡು ವರ್ಷಗಳಿಂದ ಸಿದ್ದರಾಜು ಬಂತೇಜಿ ಬುದ್ದವಿಹಾರ ಕಾರು ಚಾಲಕನಾಗಿದ್ದ. ಸಿದ್ದರಾಜುರನ್ನ ಕೊಲೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಸಿದ್ದರಾಜುವಿನ ಮೃತ ದೇಹ ಕಾರಿನ ಚಕ್ರದ ಪಕ್ಕದಲ್ಲೇ ಸಿಕ್ಕಿದೆ. ಕಾರಿನ ಬಾಗಿಲು ಸಹ ಮುಚ್ಚೇ ಇದೆ. ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮದ್ಯ ಕೊಡಿಸುವ ವಿಚಾರಕ್ಕೆ ಕಿರಿಕ್ ಆಗಿ ವ್ಯಕ್ತಿ ಹತ್ಯೆ ಮದ್ಯ ಕೊಡಿಸುವ ವಿಚಾರಕ್ಕೆ ಕಿರಿಕ್ ಆಗಿದ್ದು ಅದು ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಹಲಸೂರು ಪೊಲೀಸರ ಕಾರ್ಯಾಚರಣೆಯಿಂದ ಕೊಲೆ ಮಾಡಿದ 24 ಗಂಟೆಗಳಲ್ಲಿ ಆರೋಪಿಗಳ ಬಂಧನವಾಗಿದೆ. ನಾಗರಾಜ್ ಹಾಗೂ ಮನು ಬಂಧಿತ ಆರೋಪಿಗಳು. ಕಳೆದ ತಿಂಗಳ 28ನೇ ತಾರೀಖು ಕ್ಷುಲ್ಲಕ ಕಾರಣಕ್ಕೆ ಸ್ಟಿಫನ್ ಎಂಬಾತನ ಹತ್ಯೆ ಮಾಡಲಾಗಿತ್ತು.
ಘಟನೆ ವಿವರ ಪ್ರತಿವಾರಕ್ಕೊಮ್ಮೆ ಮೂರು ಜನ ಸೇರಿ ಎಣ್ಣೆ ಪಾರ್ಟಿ ಮಾಡುತಿದ್ದರು. ಅದೇ ರೀತಿ ಕಳೆದ ಭಾನುವಾರ ಸಹ ದೊಮ್ಮಲೂರಿನ ಬಯಲು ರಂಗ ಮಂದಿರದಲ್ಲಿ ಮೂರು ಜನ ಒಟ್ಟಾಗಿ ಸೇರಿದ್ದರು. ಈ ವೇಳೆ ಹಣಕಾಸಿನ ವಿಚಾರವಾಗಿ ಸ್ಟೀಫನ್ ಜೊತೆ ಜಗಳ ಶುರುವಾಗಿತ್ತು. ಮದ್ಯ ಕೊಡಿಸಿಲ್ಲ ಎಂದು ಅವರೊಳಗೆ ಜಗಳ ಶುರುವಾಗಿತ್ತು. ಈ ವೇಳೆ ಇಬ್ಬರು ಆರೋಪಿಗಳು ಸ್ಟೀಫನ್ ಮೇಲೆ ಹಲ್ಲೆ ನಡೆಸಿ ಬಳಿಕ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಬಯಲು ರಂಗಮಂದಿರದ ಒಳಭಾಗದಲ್ಲಿರುವ ಕಾಲುವೆಗೆ ತಳ್ಳಿದ ಕೊಲೆ ಮಾಡಿದ್ದಾರೆ. ನಂತರ ಕೃತ್ಯ ಎಸಗಿ ಆರೋಪಿಗಳು ನಾಪತ್ತೆಯಾಗಿದ್ದರು. ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ತನಿಖೆ ನಡೆಸಿದ ಹಲಸೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಗದಗ: ಚಲಿಸುತ್ತಿದ್ದ ಟ್ರ್ಯಾಕ್ಟರ್ನಿಂದ ಬಿದ್ದು ಚಾಲಕ ಸಾವು