ಚಾಮರಾಜನಗರ: ತಾಲೂಕಿನ ಬದನಗುಪ್ಪೆ ಕೆಲ್ಲಂಬಳ್ಳಿ ಬಳಿಯ ಕೈಗಾರಿಕಾ ಪ್ರದೇಶಕ್ಕೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದಾರೆ. ಈ ವೇಳೆ ನಿರುದ್ಯೋಗಿ ಯುವಕನೊಬ್ಬ ಸಚಿವ ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಕೆಲ್ಲಂಬಳ್ಳಿ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದ ಸಚಿವ ಜಗದೀಶ್ ಶೆಟ್ಟರ್‌ಗೆ ನಿರುದ್ಯೋಗಿ ಯುವಕನೊಬ್ಬ ಪ್ರಶ್ನೆಗಳ ಸುರಿಮಳೆಗೈದಿದ್ದಾನೆ.
ನಮ್ಮ ಜಮೀನನ್ನು ಖರೀದಿ ಮಾಡಲಾಗಿದೆ. ಜಮೀನು ಕಳೆದುಕೊಂಡು ನಾವು ನಿರುದ್ಯೋಗಿಗಳಾಗಿದ್ದೇವೆ. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಮಾತ್ರ ಕೆಲಸ ಕೊಡುತ್ತಿಲ್ಲ. ಆದರೆ ಬೇರೆ ಜಿಲ್ಲೆ, ರಾಜ್ಯದವರಿಗೂ ಕೆಲಸ ಕೊಡಲಾಗುತ್ತಿದೆ. ನಮಗೆ ಯಾವಾಗ ಕೆಲಸ ಕೊಡುತ್ತೀರಾ ಎಂದು ನಿರುದ್ಯೋಗಿ ಯುವಕ ಸಚಿವ ಶೆಟ್ಟರ್‌ಗೆ ಪ್ರಶ್ನೆ ಮಾಡಿದ್ದಾನೆ.
ಜಾಡಿಸಿ ಒದ್ದರೆ.. ಎಂದು AEEಗೆ ಬೈದ ಸಚಿವ ಮಾಧುಸ್ವಾಮಿ! ಅಧಿಕಾರಿ ಪತ್ನಿಗೂ ಬೈದ ಕಾನೂನು ಸಚಿವ!