ವಾಲ್ಮೀಕಿ ಸಮುದಾಯದ ಯುವಕರಿಂದ ಶ್ರೀರಾಮುಲುಗೆ ಘೇರಾವ್

ಒಂದು ಕೋಮಿನ ಯುವಕರು ಮತ್ತೊಂದು ಕೋಮಿನ ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಗೋಕಾಕ್ ತಾಲೂಕಿನ ಕಣಗಾಂವ ಮೂಲದ ವಾಲ್ಮೀಕಿ ಸಮಾಜದ ಯುವಕರು ನ್ಯಾಯ ಒದಗಿಸಬೇಕೆಂದು ಸಚಿವ ಶ್ರೀರಾಮುಲುಗೆ ಆಗ್ರಹಿಸಿದ್ದಾರೆ.

ವಾಲ್ಮೀಕಿ ಸಮುದಾಯದ ಯುವಕರಿಂದ ಶ್ರೀರಾಮುಲುಗೆ ಘೇರಾವ್
ಮುತ್ತಿಗೆ ಹಾಕಿದ ವಾಲ್ಮೀಕಿ ಸಮುದಾಯದ ಯುವಕರು
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 03, 2021 | 12:57 PM

ಬಾಗಲಕೋಟೆ: ಎರಡು ಕೋಮುಗಳ ನಡುವಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿ ನ್ಯಾಯ ಕೊಡಿಸುವಂತೆ ಯುವಕರು ಆಗ್ರಹಿಸಿ ಸಚಿವ ಶ್ರೀರಾಮುಲುರನ್ನು ಮುತ್ತಿಗೆ ಹಾಕಿದ ಘಟನೆ ತಾಲೂಕಿನ ಗದ್ದನಕೇರಿ ಕ್ರಾಸ್​ನಲ್ಲಿ ನಡೆದಿದೆ.

ಒಂದು ಕೋಮಿನ ಯುವಕರು ಮತ್ತೊಂದು ಕೋಮಿನ ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಗೋಕಾಕ್ ತಾಲೂಕಿನ ಕಣಗಾಂವ ಮೂಲದ ವಾಲ್ಮೀಕಿ ಸಮುದಾಯದ ಯುವಕರು ನ್ಯಾಯ ಒದಗಿಸಬೇಕೆಂದು ಸಚಿವ ಶ್ರೀರಾಮುಲುಗೆ ಆಗ್ರಹಿಸಿದ್ದಾರೆ. ಯುವಕರ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದ ಶ್ರೀರಾಮುಲು
ಸಿದ್ದರಾಮಯ್ಯರವರಿಗೆ ಮತ್ತೆ ಸಿಎಂ ಆಗಬೇಕೆಂಬ ಆಸೆಯಿದೆ. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಅಲ್ಲದೇ ಕನಸು ಮನಸಲ್ಲು ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆಗಲ್ಲ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಬಹಳಷ್ಟು ಭವಿಷ್ಯ ಹೇಳಿ ಉಪಚುನಾವಣೆಯಲ್ಲಿ ಸೋತರು. ಇದರ ಜೊತೆಗೆ ಬಿ.ಎಸ್. ಯಡಿಯೂರಪ್ಪ ಕುರ್ಚಿ ಉಳಿಯಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಪೂರ್ಣಾವಧಿವರೆಗೂ ಬಿ.ಎಸ್. ಯಡಿಯೂರಪ್ಪರವರು ಸಿಎಂ ಆಗಿರುತ್ತಾರೆ. ಡಿಕೆಶಿ ಸ್ಥಾನ ಕಸಿದುಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಆದರೆ ಸಿದ್ದರಾಮಯ್ಯಗೆ ಪಕ್ಷದಲ್ಲಿ ಸ್ಥಾನಮಾನವಿಲ್ಲ. ಸಿದ್ದರಾಮಯ್ಯ ಅವರನ್ನು ನಿಯಂತ್ರಿಸಲು ಡಿಕೆಶಿ ಪ್ರಯತ್ನಿಸ್ತಿದ್ದಾರೆ ಎಂದರು.

ಸಿಎಂ ಯಾರಾಗಬೇಕೆಂದು ಅವರಲ್ಲೇ ಪೈಪೋಟಿ ಬಿದ್ದ ಕಾರಣ ಕಾಂಗ್ರೆಸ್ ಪಾರ್ಟಿ ಒಡಕಾಗಿದೆ ಎಂದ ಶ್ರೀರಾಮುಲು ಡಿಕೆಶಿಗೆ ವಿಪಕ್ಷ ಸ್ಥಾನ ಉಳಿಸಿಕೊಳ್ಳಲು ಸವಾಲ್ ಹಾಕಿದ್ದಾರೆ.

ಕಾಂಗ್ರೆಸ್​ ಪಕ್ಷಕ್ಕೆ ‘ಕೈ’ ಚಿಹ್ನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೂಟಾ ಸಿಂಗ್​!