ಬೆಂಗಳೂರು: ಯುವರಾಜ್ ಸ್ವಾಮಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ ಬೆನ್ನಲ್ಲೇ, ಆತನೊಂದಿಗೆ ಹಲವು ರಾಜಕೀಯ ಗಣ್ಯರು ಇರುವ ಫೋಟೋಗಳು ವೈರಲ್ ಆಗಿವೆ. ಅದರಲ್ಲಿ ಸಚಿವ ವಿ.ಸೋಮಣ್ಣ ಫೋಟೋ ಸಹ ಒಂದು. ಇದೀಗ ವಿ. ಸೋಮಣ್ಣ ಅವರು ಯುವರಾಜ್ ಮತ್ತು ತಮ್ಮ ಭೇಟಿಯ ಬಗ್ಗೆ ಮಾತನಾಡಿ, ಯುವರಾಜ್ ಎಂದಿಗೂ ನಮ್ಮ ಮನೆಗೆ ಬಂದಿರಲಿಲ್ಲ. ನಾನೇ ಅವರ ಮನೆಗೆ ಹೋಗಿದ್ದೆ ಎಂದೂ ತಿಳಿಸಿದ್ದಾರೆ.
ಟಿವಿ9 ಜತೆ ಮಾತನಾಡಿದ ಸೋಮಣ್ಣ, ಯುವರಾಜ್ ನಮ್ಮ ಕ್ಷೇತ್ರದಲ್ಲೇ ವಾಸವಾಗಿರೋದು. ತಮ್ಮ ಮನೆಗೆ ಒಮ್ಮೆ ಬರುವಂತೆ ತುಂಬ ಒತ್ತಾಯ ಮಾಡಿದ್ದ. ಹಾಗಾಗಿ ಅವರ ಮನೆಗೆ ಹೋಗಿ 5 ನಿಮಿಷಗಳ ಕಾಲ ಇದ್ದುಬಂದೆ. ತಿಂಡಿಯನ್ನೂ ಮಾಡಿದ್ದೇನೆ. ಆದರೆ ಅವರ ಮನೆಗೆ ಹೋಗಿದ್ದಾಗ ನಂಗೆ ಶಾಕ್ ಆಗಿತ್ತು. ಒಬ್ಬ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ ಇಷ್ಟೆಲ್ಲ ವ್ಯವಸ್ಥೆಯಾ ಎಂದೂ ಎನ್ನಿಸಿತ್ತು ಎಂದು ಹೇಳಿದ್ದಾರೆ.
ಆತನನ್ನು ಡೆಲ್ಲಿ ಸ್ವಾಮಿ ಎಂದೇ ಕರೆಯುತ್ತಿದ್ದೆ..!
ಹಾಗೇ, ಒಮ್ಮೆ ನನ್ನನ್ನು ಚೆನ್ನೈಗೆ ಬನ್ನಿ, ಅಮಿತ್ ಶಾರನ್ನು ಭೇಟಿ ಮಾಡಿಸುತ್ತೇನೆ ಎಂದೂ ಫೋನ್ ಮಾಡಿ ಕರೆದಿದ್ದರು. ಆದರೆ ನಾನು ಯುವರಾಜ್ ಮಾತಿಗೆ ಸ್ಪಂದಿಸಿರಲಿಲ್ಲ. ನಾನು ಆತನನ್ನು ಡೆಲ್ಲಿ ಸ್ವಾಮಿ ಎಂದೇ ಕರೆಯುತ್ತಿದ್ದೆ. ಆತನಿಂದ ನನಗೆ ಯಾವ ವಂಚನೆಯೂ ಆಗಿಲ್ಲ. ಈಗ ಎಲ್ಲ ರೀತಿಯ ತನಿಖೆಗೂ ನಾನು ಸಹಕರಿಸುತ್ತೇನೆ. ನನ್ನದು ತಪ್ಪಿದ್ದರೆ ಖಂಡಿತ ಶಿಕ್ಷೆಯಾಗಲಿ ಎಂದಿದ್ದಾರೆ.
ಯುವರಾಜ್ ಸ್ವಾಮಿ ಮತ್ತೊಂದು ವಂಚನೆ: ನಿವೃತ್ತ ಮಹಿಳಾ ಜಡ್ಜ್ 8 ಕೋಟಿ ಕೊಟ್ಟು ವಿಶೇಷ ಹುದ್ದೆ ಬಯಸಿದ್ದರು!
Published On - 2:16 pm, Sat, 9 January 21