ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಸಂಕಷ್ಟ: ಚಾಮುಂಡೇಶ್ವರಿ ದೇವಿಗೆ ಅಭಿಮಾನಿಯಿಂದ ವಿಶೇಷ ಪೂಜೆ
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ನಿವಾಸಿಯಾದ ವೆಂಕಟೇಶ್ ಎಂಬ ಅಭಿಮಾನಿಯೊಬ್ಬರು ನಗರದ ಚಾಮುಂಡೇಶ್ವರಿ ದೇವಲಾಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಆ ಮೂಲಕ ರಾಧಿಕಾ ಕುಮಾರಸ್ವಾಮಿಯವರಿಗೆ ಬಂದಿರುವ ಸಂಕಷ್ಟ ಪರಿಹಾರವಾಗಲೆಂದು ಉರುಳು ಸೇವೆ ಮಾಡಿದ್ದಾರೆ.
ಮಂಡ್ಯ: ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ಸಂಕಷ್ಟ ಎದುರಾಗಿದ್ದು, ಅದರ ನಿವಾರಣೆಗಾಗಿ ರಾಧಿಕಾ ಅಭಿಮಾನಿಯೊಬ್ಬರು ಮಂಡ್ಯ ಜಿಲ್ಲೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ನಿವಾಸಿಯಾದ ವೆಂಕಟೇಶ್ ಎಂಬ ಅಭಿಮಾನಿಯೊಬ್ಬರು ನಗರದ ಚಾಮುಂಡೇಶ್ವರಿ ದೇವಲಾಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಆ ಮೂಲಕ ರಾಧಿಕಾ ಕುಮಾರಸ್ವಾಮಿಗೆ ಬಂದಿರುವ ಸಂಕಷ್ಟ ಪರಿಹಾರವಾಗಲೆಂದು ಉರುಳು ಸೇವೆ ಮಾಡಿದ್ದಾರೆ.
ಮೈ ತುಂಬಾ ರಾಧಿಕಾ ಕುಮಾರಸ್ವಾಮಿ ಚಿತ್ರಗಳ ಹೆಸರಿನ ಹಚ್ಚೆ ರಾಧಿಕಾ ಕುಮಾರಸ್ವಾಮಿ ನಟಿಸಿರುವ ಚಿತ್ರಗಳ ಹೆಸರುಗಳನ್ನು ಮೈ ತುಂಬಾ ಹಚ್ಚೆ ಹಾಕಿಸಿಕೊಂಡಿರುವ ಅಭಿಮಾನಿ, ರಾಧಿಕಾ ಅವರ ಏಳಿಗೆ ಸಹಿಸದೆ ಈ ರೀತಿ ಅವರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಕಣ್ಣೀರು ಸುರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ವಿಚಾರ: ಇಂದು ಮಧ್ಯಾಹ್ನ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ