ಹೆಚ್.ಡಿ.ಕುಮಾರಸ್ವಾಮಿ ಪಲ್ಟಿ ಗಿರಾಕಿ; ಶಾಸಕ ಜಮೀರ್ ಅಹ್ಮದ್ ಹೇಳಿಕೆ

HD Kumaraswamy: ನನ್ನ ಕ್ಷೇತ್ರದಲ್ಲಿ ಧಾರ್ಮಿಕ ಗುರುಗಳಿಗೆ 5,000 ರೂ. ಫುಡ್ ಕಿಟ್​ಗಳನ್ನು ವಿತರಿಸಿದ್ದೇವೆ. ಅರ್ಚಕರು, ಜೈನ್, ಕ್ರೈಸ್ತ ಗುರುಗಳಿಗೆ ಕಿಟ್ ವಿತರಿಸಿದ್ದೇವೆ. ಕೊರೊನಾ ಬೇಗ ತೊಲಗಲಿ ಎಂದು ಈ ಸಹಾಯ ಮಾಡಿದ್ದೇವೆ. ಬೇರೆಯವರು ಇದೇ ರೀತಿ ಸಹಾಯ ಹಸ್ತ ಚಾಚಬೇಕು ಎಂದರು.

ಹೆಚ್.ಡಿ.ಕುಮಾರಸ್ವಾಮಿ ಪಲ್ಟಿ ಗಿರಾಕಿ; ಶಾಸಕ ಜಮೀರ್ ಅಹ್ಮದ್ ಹೇಳಿಕೆ
ಶಾಸಕ ಜಮೀರ್ ಅಹ್ಮದ್
Updated By: Digi Tech Desk

Updated on: Jun 09, 2021 | 1:31 PM

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಲ್ಟಿ ಗಿರಾಕಿ. ಅವರು ಯಾವಾಗ ಬೇಕಿದ್ದರೂ ಪಲ್ಟಿ ಹೊಡೆಯುತ್ತಾರೆ. ಅಧಿಕಾರ ಸಿಕ್ಕರೆ ಹೊಡೆಯುತ್ತಾರೆ. ಅಧಿಕಾರ ಸಿಕ್ಕರೆ ಯಾರ ಕಾಲು ಬೇಕಾದ್ರೂ ಹಿಡೀತಾರೆ. ಆದರೆ ದೇವೇಗೌಡರು ಹಾಗಲ್ಲ, ಅವರಿಗೆ ಸಿದ್ಧಾಂತವಿದೆ. ಕುಮಾರಸ್ವಾಮಿಗೆ ಯಾವ ಸಿದ್ಧಾಂತವೂ ಇಲ್ಲ. ಪದೇ ಪದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹತ್ತಿರ ಕುಮಾರಸ್ವಾಮಿ ಯಾಕೆ ಹೋಗಬೇಕು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.

ನನ್ನ ಕ್ಷೇತ್ರದಲ್ಲಿ ಧಾರ್ಮಿಕ ಗುರುಗಳಿಗೆ 5,000 ರೂ. ಫುಡ್ ಕಿಟ್​ಗಳನ್ನು ವಿತರಿಸಿದ್ದೇವೆ. ಅರ್ಚಕರು, ಜೈನ್, ಕ್ರೈಸ್ತ ಗುರುಗಳಿಗೆ ಕಿಟ್ ವಿತರಿಸಿದ್ದೇವೆ. ಕೊರೊನಾ ಬೇಗ ತೊಲಗಲಿ ಎಂದು ಈ ಸಹಾಯ ಮಾಡಿದ್ದೇವೆ. ಬೇರೆಯವರು ಇದೇ ರೀತಿ ಸಹಾಯ ಹಸ್ತ ಚಾಚಬೇಕು ಎಂದು ಶಾಸಕ ಜಮೀರ್ ಅಹ್ಮದ್ ಅಭಿಪ್ರಾಯಪಟ್ಟರು.

ಒಟ್ಟು 385 ಜನರಿಗೆ ತಲಾ 5,000 ನೀಡಿದ್ದೇವೆ. ಮುಜರಾಯಿ ಇಲಾಖೆ ಪ್ಯಾಕೇಜ್ ಘೋಷಿಸಿದೆ. ಅರ್ಚಕರು, ಇಮಾಮರಿಗೆ ನೀಡಿದ್ದಾರೆ. ಜೈನ್, ಕ್ರಿಸ್ತ, ಬೌದ್ಧ ಗುರುಗಳಿಗೆ ನೀಡಿಲ್ಲ. ಅಂತವರಿಗೆ ನಾವು ಸಹಾಯ ಹಸ್ತ ಚಾಚಿದ್ದೇವೆ. ಒಂದೇ ವೇದಿಕೆಯಲ್ಲಿ ಎಲ್ಲ ಗುರುಗಳನ್ನ ಸೇರಿಸಿದ್ದೇವೆ ಎಂದು ಜಮೀರ್ ಅಹ್ಮದ್ ತಿಳಿಸಿದರು.

ಇದನ್ನೂ ಓದಿ

ಹೆಚ್ಚು ಹಣ ವಸೂಲಿ ಮಾಡಿದ ಆರೋಪ; ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ನೋಟಿಸ್

‘ಕೊವಿಶೀಲ್ಡ್​ ಎರಡೂ ಡೋಸ್​ ಲಸಿಕೆ ಪಡೆದ ವರ ಬೇಕು’ ಮ್ಯಾಟ್ರಿಮೋನಿಯ ಜಾಹಿರಾತಿನ ಹಿಂದಿನ ಸತ್ಯವೇನು?

(Zamir Ahmed said there was no theory for Kumaraswamy)

Published On - 1:21 pm, Wed, 9 June 21