‘ಪಾಸಿಟೀವ್’ ನ್ಯೂಸ್! ಕೊರೊನಾ ಗೆದ್ದ ಬೆಂಗಳೂರಿನ ನೂರು ವರ್ಷದ ಅಜ್ಜಿ

ಬೆಂಗಳೂರು: ಹೆಮ್ಮಾರಿ ಕೊರೊನಾದಿಂದ ಯಾವಾಗಲೂ ನಕಾರಾತ್ಮಕ ಸುದ್ದಿಗಳನ್ನ ಕೇಳುತ್ತಿರುವ ಸಂದರ್ಭದಲ್ಲಿ ಸಾವಿರಾರು ಕೊರೊನಾ ರೋಗಿಗಳಿಗೆ ಇವರೇ ಸ್ಫೂರ್ತಿಯಾಗಿದ್ದಾರೆ. ಹೌದು, ಕೇವಲ 9 ದಿನದಲ್ಲಿ 99 ವರ್ಷದ ಕೊರೊನಾ ಸೋಂಕಿತ ವೃದ್ಧೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕೊರೊನಾ ರೋಗಿ ಗುಣಮುಖ ಆಗಿರೋದು ಇವರೇ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿ ಆಗಿರುವ ವೃದ್ಧೆ ಮಾರ್ಸಿಲಿನ್ ಸಾಲ್ಡಾನಾರಿಗೆ ಸೋಂಕು ತಗುಲಿತ್ತು. 99 ವರ್ಷ ತುಂಬಿ 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಜೂನ್ 18 […]

‘ಪಾಸಿಟೀವ್’ ನ್ಯೂಸ್! ಕೊರೊನಾ ಗೆದ್ದ ಬೆಂಗಳೂರಿನ ನೂರು ವರ್ಷದ ಅಜ್ಜಿ
ಸಾಧು ಶ್ರೀನಾಥ್​

Updated on: Jun 27, 2020 | 12:28 PM

ಬೆಂಗಳೂರು: ಹೆಮ್ಮಾರಿ ಕೊರೊನಾದಿಂದ ಯಾವಾಗಲೂ ನಕಾರಾತ್ಮಕ ಸುದ್ದಿಗಳನ್ನ ಕೇಳುತ್ತಿರುವ ಸಂದರ್ಭದಲ್ಲಿ ಸಾವಿರಾರು ಕೊರೊನಾ ರೋಗಿಗಳಿಗೆ ಇವರೇ ಸ್ಫೂರ್ತಿಯಾಗಿದ್ದಾರೆ. ಹೌದು, ಕೇವಲ 9 ದಿನದಲ್ಲಿ 99 ವರ್ಷದ ಕೊರೊನಾ ಸೋಂಕಿತ ವೃದ್ಧೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕೊರೊನಾ ರೋಗಿ ಗುಣಮುಖ ಆಗಿರೋದು ಇವರೇ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿ ಆಗಿರುವ ವೃದ್ಧೆ ಮಾರ್ಸಿಲಿನ್ ಸಾಲ್ಡಾನಾರಿಗೆ ಸೋಂಕು ತಗುಲಿತ್ತು. 99 ವರ್ಷ ತುಂಬಿ 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಜೂನ್ 18 ರಂದು ತಮ್ಮ 99ನೇ ಹುಟ್ಟುಹಬ್ಬದ ದಿನವೇ ವಿಕ್ಟೋರಿಯಾ ಆಸ್ಪತ್ರೆಗೆ ವೃದ್ಧೆ ದಾಖಲಾಗಿದ್ದರು.

ವೃದ್ಧೆಯ ಪುತ್ರ, ಸೊಸೆ ಹಾಗೂ ಮೊಮ್ಮಗನಿಗೂ ಸೋಂಕು ತಗುಲಿತ್ತು. ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್​ನಲ್ಲಿ ವೃದ್ಧೆ ಚಿಕಿತ್ಸೆ ಪಡೆಯುತ್ತಿದ್ದರು. ಕೇವಲ 9 ದಿನಕ್ಕೆ ಗುಣಮುಖ ಆಗಿ ಇದೀಗ ಆಸ್ಪತ್ರೆಯಿಂದ ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ.

ವೃದ್ಧೆ ಗುಣಮುಖ ಆಗಿರುವುದು ವೈದ್ಯಲೋಕಕ್ಕೂ ಸಂತಸವಾಗಿದೆ. ವಿಕ್ಟೋರಿಯಾ ಟ್ರಾಮಾ ಕೇರ್ ಸೆಂಟರ್​ನಲ್ಲಿರುವ ರೋಗಿಗಳಿಗೆಲ್ಲಾ ಧೈರ್ಯ ಹೇಳಿ ಬಂದಿದ್ದಾರೆ.

 

Published On - 12:26 pm, Sat, 27 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us