ಜಿಲ್ಲಾಧಿಕಾರಿ ಕಚೇರಿಯ 14 ಸಿಬ್ಬಂದಿಗೆ ಕೊರೊನಾ ಪಾಸಿಟಿವ್

| Updated By: ಸಾಧು ಶ್ರೀನಾಥ್​

Updated on: Jul 21, 2020 | 11:01 AM

ಬಳ್ಳಾರಿ: ದಿನದಿಂದ ದಿನಕ್ಕೆ ಕೊರೊನಾ ಉಲ್ಬಣವಾಗುತ್ತಿದೆ. ಈಗ ಜಿಲ್ಲಾಧಿಕಾರಿ ಕಚೇರಿಗೆ ಕೊರೊನಾ ಶಾಕ್ ಕೊಟ್ಟಿದೆ. ಡಿಸಿ ಕಚೇರಿಯ 14 ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ. ಜಿಲ್ಲಾಧಿಕಾರಿಗಳ ಇಬ್ಬರು ಅಪ್ತ ಸಹಾಯಕರು ಸೇರಿ 14 ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ 14 ಕೇಸ್​ಗಳಿದ್ದು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಬಂದಿದೆ. ಸಿಬ್ಬಂದಿಗೆ ಕೊರೊನಾ ದೃಢವಾದರೂ ಸ್ಯಾನಿಟೈಜ್ ಮಾಡಿಸಿ ಕಚೇರಿ ತೆರೆಯಲು ಡಿಸಿ ಮುಂದಾಗಿದ್ದಾರೆ. ಮಧ್ಯಾಹ್ನದವರೆಗೆ ಡಿಸಿ ಕಚೇರಿಯಲ್ಲಿ ಸ್ಯಾನಿಟೈಸರ್ ಮಾಡಿಸಿ ಬಳಿಕ ಎಂದಿನಂತೆ ಕಾರ್ಯ ನಿರ್ವಹಿಸಲಾಗುತ್ತೆ […]

ಜಿಲ್ಲಾಧಿಕಾರಿ ಕಚೇರಿಯ 14 ಸಿಬ್ಬಂದಿಗೆ ಕೊರೊನಾ ಪಾಸಿಟಿವ್
Follow us on

ಬಳ್ಳಾರಿ: ದಿನದಿಂದ ದಿನಕ್ಕೆ ಕೊರೊನಾ ಉಲ್ಬಣವಾಗುತ್ತಿದೆ. ಈಗ ಜಿಲ್ಲಾಧಿಕಾರಿ ಕಚೇರಿಗೆ ಕೊರೊನಾ ಶಾಕ್ ಕೊಟ್ಟಿದೆ. ಡಿಸಿ ಕಚೇರಿಯ 14 ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ. ಜಿಲ್ಲಾಧಿಕಾರಿಗಳ ಇಬ್ಬರು ಅಪ್ತ ಸಹಾಯಕರು ಸೇರಿ 14 ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ 14 ಕೇಸ್​ಗಳಿದ್ದು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಬಂದಿದೆ. ಸಿಬ್ಬಂದಿಗೆ ಕೊರೊನಾ ದೃಢವಾದರೂ ಸ್ಯಾನಿಟೈಜ್ ಮಾಡಿಸಿ ಕಚೇರಿ ತೆರೆಯಲು ಡಿಸಿ ಮುಂದಾಗಿದ್ದಾರೆ. ಮಧ್ಯಾಹ್ನದವರೆಗೆ ಡಿಸಿ ಕಚೇರಿಯಲ್ಲಿ ಸ್ಯಾನಿಟೈಸರ್ ಮಾಡಿಸಿ ಬಳಿಕ ಎಂದಿನಂತೆ ಕಾರ್ಯ ನಿರ್ವಹಿಸಲಾಗುತ್ತೆ ಎಂದು ಖುದ್ದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ ಮಾಹಿತಿ ನೀಡಿದ್ದಾರೆ.