ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಗಾಗಿ ಅತ್ಯಂತ ಪುರಾತನವಾದ 150 ವರ್ಷ ಹಳೆಯ ಆಂಜನೇಯ ಸ್ವಾಮಿ ದೇವಸ್ಥಾನ ನೆಲಸಮವಾಗಿದೆ. ಗಾರೇಭಾವಿ ಪಾಳ್ಯ ಆಂಜನೇಯನ ಗುಡಿಯ ಮೇಲೆ ಜೆಸಿಬಿಗಳು ಘರ್ಜನೆ ಮಾಡಿವೆ. 2ನೇ ಹಂತದ ಆರ್.ವಿ ರಸ್ತೆ ಯಿಂದ ಬೊಮ್ಮಸಂದ್ರ ಮಾರ್ಗದ ಮೆಟ್ರೋ ಕಾಮಗಾರಿಗಾಗಿ ಭಾರಿ ವಿರೋಧದ ನಡುವೆ ದೇವಸ್ಥಾನ ತೆರವು ಮಾಡಲಾಗುತ್ತಿದೆ.
ಆಂಜನೇಯ ದೇವಸ್ಥಾನ ಉಳಿಸಿಕೊಳ್ಳಲು ಸ್ಥಳೀಯರು ಪ್ರಯತ್ನ ಪಟ್ಟಿದ್ದರು. ಭಕ್ತರು ಪ್ರತಿಭಟನೆ ನಡೆಸಿದ್ದರು. ಆದರೆ ಯಾವುದಕ್ಕೂ ಜಗ್ಗದೆ ನಮ್ಮ ಮೆಟ್ರೋ ಸಾಗಿದೆ. ಭಾರಿ ಪೊಲೀಸ್ ಭದ್ರತೆ ನಡುವೆ ದೇವಸ್ಥಾನ ತೆರವು ಕಾರ್ಯ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಖುಷಿ ಕುಮಾರ್ ಸ್ವಾಮೀಜಿ, ಬಿಎಮ್ಆರ್ಸಿಎಲ್ ನಡೆಯನ್ನು ಖಂಡಿಸಿದ್ದಾರೆ.
Published On - 2:12 pm, Mon, 27 January 20