ನ್ಯೂಜಿಲೆಂಡ್​ನಲ್ಲೂ ಸದ್ದು ಮಾಡಿದ ಮಿಣಿ ಮಿಣಿ, ಹೌದು ಹುಲಿಯಾ ಡೈಲಾಗ್‌!

ವೆಲ್ಲಿಂಗ್ಟನ್: ರಾಜ್ಯದಲ್ಲಿ ಸಖತ್ ಟ್ರೆಂಡ್‌ ಸೃಷ್ಟಿಸಿರುವ ಹೌದು ಹುಲಿಯಾ ಮತ್ತು ಮಿಣಿ ಮಿಣಿ ಪೌಡರ್ ಡೈಲಾಗ್‌ ನ್ಯೂಜಿಲೆಂಡ್ ನಾಡಿಗೂ ಎಂಟ್ರಿ ಕೊಟ್ಟಿದೆ. ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ನಿನ್ನೆ ನಡೆದ ಟಿ20 ಪಂದ್ಯದಲ್ಲಿ ಕ್ರಿಕೆಟ್‌ ಅಭಿಮಾನಿಗಳಿಬ್ಬರು ಈ ಟ್ರೆಂಡಿಂಗ್ ಡೈಲಾಗ್‌ ಹೊಡೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಗಮನ ಸೆಳೆದ ಡೈಲಾಗ್​: ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಿನ್ನೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ದ್ವಿತೀಯ ಕಾದಾಟ ನಡೀತು. ಈ ಪಂದ್ಯದ ವೀಕ್ಷಣೆಗೆ ಮೈದಾನಕ್ಕೆ ಆಗಮಿಸಿದ್ದ […]

ನ್ಯೂಜಿಲೆಂಡ್​ನಲ್ಲೂ ಸದ್ದು ಮಾಡಿದ ಮಿಣಿ ಮಿಣಿ, ಹೌದು ಹುಲಿಯಾ ಡೈಲಾಗ್‌!
Follow us
ಸಾಧು ಶ್ರೀನಾಥ್​
|

Updated on:Jan 27, 2020 | 7:00 PM

ವೆಲ್ಲಿಂಗ್ಟನ್: ರಾಜ್ಯದಲ್ಲಿ ಸಖತ್ ಟ್ರೆಂಡ್‌ ಸೃಷ್ಟಿಸಿರುವ ಹೌದು ಹುಲಿಯಾ ಮತ್ತು ಮಿಣಿ ಮಿಣಿ ಪೌಡರ್ ಡೈಲಾಗ್‌ ನ್ಯೂಜಿಲೆಂಡ್ ನಾಡಿಗೂ ಎಂಟ್ರಿ ಕೊಟ್ಟಿದೆ. ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ನಿನ್ನೆ ನಡೆದ ಟಿ20 ಪಂದ್ಯದಲ್ಲಿ ಕ್ರಿಕೆಟ್‌ ಅಭಿಮಾನಿಗಳಿಬ್ಬರು ಈ ಟ್ರೆಂಡಿಂಗ್ ಡೈಲಾಗ್‌ ಹೊಡೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಗಮನ ಸೆಳೆದ ಡೈಲಾಗ್​: ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಿನ್ನೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ದ್ವಿತೀಯ ಕಾದಾಟ ನಡೀತು. ಈ ಪಂದ್ಯದ ವೀಕ್ಷಣೆಗೆ ಮೈದಾನಕ್ಕೆ ಆಗಮಿಸಿದ್ದ ಒಬ್ಬ ಅಭಿಮಾನಿ ಹೌದು ಹುಲಿಯಾ ಅನ್ನೋ ಡೈಲಾಗ್ ಹೊಡೆದು, ಅದನ್ನೇ ಬರೆದಿರುವ ಬೋರ್ಡ್ ಪ್ರದರ್ಶಿಸಿದ್ದ. ಅತ್ತ ಹೌದು ಹುಲಿಯಾ ಅನ್ನೋ ಡೈಲಾಗ್ ಬರ್ತಿದ್ರೆ, ಇತ್ತ ಮತ್ತೊಬ್ಬ ಕ್ರೀಡಾಭಿಮಾನಿ ಮಿಣಿ ಮಿಣಿ ಪೌಡರ್ ಎಂದು ಕೂಗುತ್ತಾ ಬೋರ್ಡ್ ತೋರಿಸುತ್ತಿರೋ ವೀಡಿಯೋ ವೈರಲ್ ಆಗಿತ್ತು.

ಬೆಳಗಾವಿಯ ಕಾಗವಾಡದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ ಅಭಿಮಾನಿಯೊಬ್ಬ ಹೌದು ಹುಲಿಯಾ ಎಂದು ಕೂಗಿದ್ದ. ಇತ್ತೀಚೆಗೆ ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣದ ವೇಳೆ ಸುದ್ದಿಗೋಷ್ಠಿ ನಡೆಸುತ್ತಿದ್ದ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಮಿಣಿ ಮಿಣಿ ಪೌಡರ್ ಉಲ್ಲೇಖಿಸಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್: ಇನ್ನು ಇದೇ ಪಂದ್ಯದಲ್ಲಿ ಆರ್​ಸಿಬಿ ಅಭಿಮಾನಿಯೊಬ್ಬ 12 ವರ್ಷದಿಂದ ಐಪಿಎಲ್ ಕಪ್ ಗೆದ್ದಿಲ್ಲ. ಈ ವರ್ಷದಲ್ಲಾದ್ರೂ ಕಪ್ ಗೆಲ್ತೀರಾ ಅಂತಾ ಪೋಸ್ಟರ್ ಹಿಡಿದಿದ್ದ. ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗೇ ಸೌಂಡ್ ಮಾಡ್ತಿದೆ. ಒಟ್ನಲ್ಲಿ, ರಾಜ್ಯದಲ್ಲಿ ಸದ್ಯ ಹೌದು ಹುಲಿಯಾ ಮತ್ತು ಮಿಣಿ ಮಿಣಿ ಪೌಡರ್ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ನ್ಯೂಜಿಲೆಂಡ್‌ನಲ್ಲಿ ಪಂದ್ಯ ನೋಡಲು ಹೋಗಿದ್ದ ಕನ್ನಡಿಗರು ಅಲ್ಲೂ ಈ ಎರಡೂ ಡೈಲಾಗ್‌ಗಳನ್ನು ನೆನಪಿಸಿ ಗಮನ ಸೆಳೆದಿದ್ದಾರೆ.

Published On - 9:40 am, Mon, 27 January 20

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ