ಬೆಳಗಾವಿ: ಕಾಲೇಜು ವ್ಯಾನ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಢಿಕ್ಕಿ 20 ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರು ಗಂಭೀರ
ಕೆ ಎಸ್ ಆರ್ ಟಿಸಿ ಬಸ್ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡದ್ದಿರಿಂದ ಅಪಘಾತ ಸಂಭವಿಸಿದೆ.
Belagavi: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ಮತ್ತು ಕಾಲೇಜೊಂದರ ವ್ಯಾನಿನ ನಡುವೆ ಗುರುವಾರ ಬೆಳಗ್ಗೆ ದೊಡ್ಡ ಪ್ರಮಾಣದ ಅಪಘಾತ ನಡೆದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಗಿಲ್ಲ. ಬೆಳಗಾವಿ (Belagavi) ಜಿಲ್ಲೆ ಮೂಡಲಗಿ ಪೊಲೀಸ್ ಠಾಣೆ ವ್ಯಾಪ್ತಿಯ ಅ ಗುರ್ಲಪೂರ (Guralapur) ಗ್ರಾಮದ ಮೂಲಕ ಹಾದುಹೋಗುವ ಜತ್ತ-ಜಾಬೋಟಿ ಹೆದ್ದಾರಿಯಲ್ಲಿ (highway) ದುರ್ಘಟನೆ ಸಂಭವಿದೆ. ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಇದೆ. ಕೆ ಎಸ್ ಆರ್ ಟಿಸಿ ಬಸ್ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡದ್ದಿರಿಂದ ಅಪಘಾತ ಸಂಭವಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.