AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷೇತ್ರಕ್ಕೆ ಘನತೆ ಮತ್ತು ಗೌರವ ತಂದುಕೊಟ್ಟಿರುವ ಪಕ್ಷದ ಅಭ್ಯರ್ಥಿಗೆ ವೋಟು ನೀಡಿದ್ದೇನೆ: ಶರತ್ ಬಚ್ಚಗೌಡ, ಪಕ್ಷೇತರ ಶಾಸಕ

ಕ್ಷೇತ್ರಕ್ಕೆ ಘನತೆ ಮತ್ತು ಗೌರವ ತಂದುಕೊಟ್ಟಿರುವ ಪಕ್ಷದ ಅಭ್ಯರ್ಥಿಗೆ ವೋಟು ನೀಡಿದ್ದೇನೆ: ಶರತ್ ಬಚ್ಚಗೌಡ, ಪಕ್ಷೇತರ ಶಾಸಕ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 10, 2022 | 3:18 PM

Share

ನಾನೊಬ್ಬ ಪಕ್ಷೇತರ ಶಾಸಕನಾಗಿರುವಿದರಿಂದು ಬ್ಯಾಲೆಟ್ ಪೇಪರ್ ಯಾವ ಪಕ್ಷದವರಿಗೂ ತೋರಿಸುವ ಅವಶ್ಯಕೆಯಿಲ್ಲ. ನನ್ನ ಕ್ಷೇತ್ರಕ್ಕೆ ಮತ್ತ್ತು ನನಗೆ ಯಾವ ಪಕ್ಷ ಘನತೆ ಗೌರವ ಒದಗಿಸಿದೆಯೋ ಆ ಪಕ್ಷಕ್ಕೆ ವೋಟು ಹಾಕಿದ್ದೇನೆ ಅಂತ ಒಗಟಾಗಿ ಹೇಳಿದರು.

Bengaluru:  ನಮಗೆಲ್ಲ ಗೊತ್ತಿರುವ ಹಾಗೆ ಹೊಸಕೋಟೆಯ ಬಿಜೆಪಿ ಶಾಸಕ ಶರತ್ ಬಚ್ಚೇಗೌಡ (Sharath Bachche Gowda) ವಿಧಾನ ಸಭೆಗೆ ಆಯ್ಕೆಯಾದಾಗಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ (Congress Party) ಬೆಂಬಲ ನೀಡುತ್ತಾ ಬಂದಿದ್ದಾರೆ. ರಾಜ್ಯಸಭೆಗೆ ಚುನಾವಣೆಗೆ ಶುಕ್ರವಾರ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಯಾವ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಾರೋ ಅನ್ನೋ ಕುತೂಹಲವಿದ್ದಿದ್ದು ಸಹಜವೇ, ಯಾಕೆಂದರೆ ಕೆಲ ಬಿಜೆಪಿ ನಾಯಕರು (BJP leaders) ಶರತ್ ತಮ್ಮ ಅಭ್ಯರ್ಥಿಗೆ ವೋಟು ಹಾಕಲಿದ್ದಾರೆ ಅಂತ ಹೇಳಿದ್ದರು, ಪತ್ರಕರ್ತರು ಖುದ್ದು ಅವರನ್ನೇ ಕೇಳಿದಾಗ ನಾನೊಬ್ಬ ಪಕ್ಷೇತರ (independent) ಶಾಸಕನಾಗಿರುವಿದರಿಂದು ಬ್ಯಾಲೆಟ್ ಪೇಪರ್ ಯಾವ ಪಕ್ಷದವರಿಗೂ ತೋರಿಸುವ ಅವಶ್ಯಕೆಯಿಲ್ಲ. ನನ್ನ ಕ್ಷೇತ್ರಕ್ಕೆ ಮತ್ತ್ತು ನನಗೆ ಯಾವ ಪಕ್ಷ ಘನತೆ ಗೌರವ ಒದಗಿಸಿದೆಯೋ ಆ ಪಕ್ಷಕ್ಕೆ ವೋಟು ಹಾಕಿದ್ದೇನೆ ಅಂತ ಒಗಟಾಗಿ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.