ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಬಿಟ್ಟೂ ಬಿಡದೆ ಕಾಡುತ್ತಿದೆ ಕೊರೊನಾ ವೈರಸ್. ಹೆಮ್ಮಾರಿಯನ್ನು ತಡೆಯುವ ಸಲುವಾಗಿ ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ಸೀಲ್ ಹಾಕಲಾಗುತ್ತಿದೆ. ಇವರು ಕಡ್ಡಾಯವಾಗಿ ಕ್ವಾರಂಟೈನ್ ಆಗಲೇಬೇಕಿದೆ.
ಆದ್ರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ವಾರಂಟೈನ್ ಸೀಲ್ ಇದ್ರೂ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾರೆ. ಕೊರೊನಾ ಬಂದು ಬಿಎಂಟಿಸಿ ಸಿಬ್ಬಂದಿನ್ನ ಹಿಂಡಿ ಹಿಪ್ಪೆ ಮಾಡಿದ್ರೂ, BMTC ಸಿಬ್ಬಂದಿ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ.
ಕ್ವಾರಂಟೈನ್ ಸೀಲ್ ಇದ್ರೂ ಒಂದೇ ಬಸ್ನಲ್ಲಿ 24 ಮಂದಿ ಪ್ರಯಾಣ ಮಾಡಿದ್ದಾರೆ. ಕ್ವಾರಂಟೈನ್ ಸೀಲ್ ಒತ್ತಿಸಿಕೊಂಡಿದ್ರೂ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಬಿಎಂಟಿಸಿಯ ಬೇಜವಾಬ್ದಾರಿ ತೋರಿಸುತ್ತಿದೆ.
ಕ್ವಾರಂಟೈನ್ ಸೀಲ್ ಇದ್ದವರನ್ನ ಬಸ್ಗೆ ಹತ್ತಿಸಿಕೊಂಡಿರುವುದರಿಂದ ಮೊದಲಿಗೆ ಸಿಬ್ಬಂದಿಗೆ, ನಂತ್ರ ಇತರ ಪ್ರಯಾಣಿಕರಿಗೂ ಆಪತ್ತು ಎದುರಾಗ್ತಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಚಂದಾಪುರಕ್ಕೆ ಕ್ವಾರಂಟೈನ್ ಸೀಲ್ ಇರುವವರು ಪ್ರಯಾಣ ಮಾಡಿದ್ದಾರೆ.