Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಅಬ್ಬರದ ಮಧ್ಯೆ ಅಸ್ತಮಾ ಹೆಚ್ಚಾಗುವ ಭೀತಿಯೇ? ಚಿಂತೆ ಬೇಡ

ಕೊರೊನಾದ ಆರ್ಭಟದ ನಡುವೆ ಅತಿ ಹೆಚ್ಚು ಆತಂಕಗೊಂಡಿರೋದು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರು. ಮನುಷ್ಯನ ಶ್ವಾಸಕೋಶಕ್ಕೇ ನೇರವಾಗಿ ಲಗ್ಗೆಯಿಡುವ ಕೊರೊನಾ ಕೊನೆಗೆ ಮನುಷ್ಯರ ಉಸಿರನ್ನೇ ನಿಲ್ಲಿಸಿಬಿಡುತ್ತದೆ. ಹಾಗಾಗಿ ಉಸಿರಾಟದ ಸಮಸ್ಯೆ ಇರೋರು ಅದರಲ್ಲೂ ಅಸ್ತಮಾ ಇರೋರು ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಬೇಕು. ಹಾಗಂದ್ರೆ, ಮನೆಯಲ್ಲೇ ಇದ್ದು ಆಸ್ತಮಾವನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾ? ಖಂಡಿತ. ಆದರೆ, ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ.. ಅಸ್ತಮಾವನ್ನ ಹತೋಟಿಯಲ್ಲಿಡಲು ಸುಲಭ ಸೂತ್ರಗಳು ಅಸ್ತಮಾವನ್ನು ನಿಯಂತ್ರಿಸುವಲ್ಲಿ ಪ್ರಮುಖವಾದ ಅಸ್ತ್ರ ನಿಮ್ಮ ಇನ್ಹೇಲರ್​. ಹಾಗಾಗಿ, ನಿಮ್ಮ ಮತ್ತು ನಿಮ್ಮ […]

ಕೊರೊನಾ ಅಬ್ಬರದ ಮಧ್ಯೆ ಅಸ್ತಮಾ ಹೆಚ್ಚಾಗುವ ಭೀತಿಯೇ? ಚಿಂತೆ ಬೇಡ
Follow us
KUSHAL V
|

Updated on: Jun 29, 2020 | 4:34 PM

ಕೊರೊನಾದ ಆರ್ಭಟದ ನಡುವೆ ಅತಿ ಹೆಚ್ಚು ಆತಂಕಗೊಂಡಿರೋದು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರು. ಮನುಷ್ಯನ ಶ್ವಾಸಕೋಶಕ್ಕೇ ನೇರವಾಗಿ ಲಗ್ಗೆಯಿಡುವ ಕೊರೊನಾ ಕೊನೆಗೆ ಮನುಷ್ಯರ ಉಸಿರನ್ನೇ ನಿಲ್ಲಿಸಿಬಿಡುತ್ತದೆ. ಹಾಗಾಗಿ ಉಸಿರಾಟದ ಸಮಸ್ಯೆ ಇರೋರು ಅದರಲ್ಲೂ ಅಸ್ತಮಾ ಇರೋರು ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಬೇಕು. ಹಾಗಂದ್ರೆ, ಮನೆಯಲ್ಲೇ ಇದ್ದು ಆಸ್ತಮಾವನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾ? ಖಂಡಿತ. ಆದರೆ, ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ..

ಅಸ್ತಮಾವನ್ನ ಹತೋಟಿಯಲ್ಲಿಡಲು ಸುಲಭ ಸೂತ್ರಗಳು ಅಸ್ತಮಾವನ್ನು ನಿಯಂತ್ರಿಸುವಲ್ಲಿ ಪ್ರಮುಖವಾದ ಅಸ್ತ್ರ ನಿಮ್ಮ ಇನ್ಹೇಲರ್​. ಹಾಗಾಗಿ, ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೆ ಅಸ್ತಮಾ ಇದ್ದಲ್ಲಿ ಇನ್ಹೇಲರ್​ನ ಸದಾ ನಿಮ್ಮ ನಿಮ್ಮ ಬಳಿ ಇರುವಂತೆ ನೋಡಿಕೊಳ್ಳಿ. ಸಮಸ್ಯೆಯ ಅತೀವ ಲಕ್ಷಣಗಳು ಕಂಡುಬಂದಲ್ಲಿ ಪ್ರತಿ 30 ಅಥವಾ 60 ಸೆಕಂಡ್​ಗಳ ಅಂತರದಲ್ಲಿ ಕೂಡಲೇ ಬಳಸಬೇಕು. ಅಸ್ತಮಾದ ಲಕ್ಷಣಗಳು ಕೊಂಚ ಕಡಿಮೆಯಾಗೋವರೆಗೂ ಹೀಗೆಯೇ ಮಾಡಿ. ಆದರೆ ಗಮನವಿರಲಿ, ಒಂದೇ ಸಮಯದಲ್ಲಿ 10ಕ್ಕೂ ಹೆಚ್ಚು ಬಾರಿ ಇನ್ಹೇಲರ್ ಬಳಸಬೇಡಿ.

ಅಸ್ತಮಾ ಬಂದ್ರೆ ಗಾಬರಿ ಬೇಡ.. ರಿಲಾಕ್ಸ್​ ಒಂದು ವೇಳೆ ಇನ್ಹೇಲರ್​ ಬಳಸಿಯೂ ಹತೋಟಿಗೆ ಬಾರದಿದ್ದರೆ ಗಾಬರಿ ಆಗಬೇಡಿ. ರಿಲಾಕ್ಸ್​ ಆಗಿ. ಕುಳಿತಿರುವ ಸ್ಥಳದಲ್ಲಿ ನೆಟ್ಟಗೆ ಕೂತುಕೊಳ್ಳಿ ಅಥವಾ ನಿಂತುಕೊಂಡರೆಯೇ ಮತ್ತೂ ಒಳ್ಳೇಯದು. ಇದರಿಂದ ಶ್ವಾಸಕೋಶದ ಮೇಲಿನ ಒತ್ತಡ ತುಸು ಕಡಿಮೆಯಾಗಿ ಉಸಿರಾಡಲು ಅನುಕೂಲವಾಗುತ್ತೆ. ಆಳವಾಗಿ ಉಸಿರಾಡುವುದರಿಂದ ಅಸ್ತಮಾದ ಲಕ್ಷಣ ಸ್ವಲ್ಪ ತಗ್ಗುತ್ತದೆ. ಹೀಗಾಗಿ, ಈ ಕೆಲವು ಸೂತ್ರಗಳನ್ನ ನೆನಪಿನಲ್ಲಿ ಇಟ್ಟುಕೊಂಡರೆ ಈ ಮಹಾಮಾರಿಯ ಅಬ್ಬರದ ಮಧ್ಯೆಯೂ ಅಸ್ತಮಾ ಪೇಷಂಟ್​ಗಳು ನಿರಾಳವಾಗಿರಬಹುದು.

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು