ಈ ರಾಶಿಯವರು ಇಂದು ಸ್ನೇಹಿತರೊಂದಿಗೆ ಪ್ರವಾಸ ಮಾಡುವರು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ, ಸೋಮವಾರ ಅವಕಾಶದ ತ್ಯಾಗ, ಅತಿಯಾದ ಭೋಗ, ಸಿಗದ ಆಸ್ತಿಯ ಭಾಗ ಇದೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಸಾಧ್ಯ, ಕರಣ: ಬಾಲವ, ಸೂರ್ಯೋದಯ – 06:16 am, ಸೂರ್ಯಾಸ್ತ – 06:46 pm, ಇಂದಿನ ಶುಭಾಶುಭಕಾಲ: ರಾಹು ಕಾಲ 07:50 – 09:24, ಯಮಘಂಡ ಕಾಲ 10:58 – 12:31, ಗುಳಿಕ ಕಾಲ 14:05 – 15:39
ಮೇಷ ರಾಶಿ: ಅಸ್ತವ್ಯಸ್ತ ಕೆಲಸದಿಂದ ಕಛೇರಿಯಲ್ಲಿ ನಿಂದನೆ. ನಿಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೂ ಮಕ್ಕಳ ಜೊತೆ ಕಾಲಕಳೆಯಬೇಕಾಗುವುದು. ಅನಿಶ್ಚಯವಾಗಿದ್ದ ನಿಮ್ಮ ವಿವಾಹವು ಇಂದು ನಿಶ್ಚಯವಾಗಲಿದೆ. ಪರೋಪಕಾರಸಿಂದ ಅಪಮಾನ. ನಿದ್ರಾಹೀನತೆಯಿಂದ ಆರೋಗ್ಯವು ಹಾಳು. ಸ್ನೇಹಿತರೊಂದಿಗೆ ಪ್ರವಾಸ ಮಾಡುವಿರಿ. ಬಹಳ ದಿನಗಳಿಂದ ಯಾವುದೇ ನಿರ್ಧಾರ ನಿಮ್ಮಿಂದ ಆಗಿಲ್ಲ ಎಂದು ಸ್ತ್ರೀರಿಂದ ಅಗೌರವ ಆಗುವುದು. ಬರಬೇಕಾದ ಸಂಪತ್ತು ಬರಲಿದೆ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡುವಿರಿ. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಬೇಕೆಂದೇ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ಇಂದು ಮಾಡಬೇಕಾದ ಕೆಲವು ವಿಚಾರಗಳನ್ನು ಮರೆಯುವಿರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ಏರಿಳಿತವೂ ನಿಮ್ಮನ್ನು ಏನೂ ಮಾಡಲಾಗದು. ಯಾರನ್ನೂ ಹತ್ತಿರ ಬಿಟ್ಟಕೊಳ್ಳಲಾರಿರಿ. ಸುಖದ ನಿರೀಕ್ಷೆಯು ನಿಮ್ಮನ್ನು ಸಂತೋಷದಿಂದ ಇಡುವುದು. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ.
ವೃಷಭ ರಾಶಿ: ಬಂಧುಗಳು ನಿಮ್ಮ ಜೀವನದಲ್ಲಿ ಪ್ರವೇಶಪಡೆಯಬಹುದು. ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಹೊಸತನವನ್ನು ರೂಢಿಸಿಕೊಳ್ಳುವ ನಿಮ್ಮ ಆಸಕ್ತಿಯನ್ನು ಕಂಡ ಜನರಿಂದ ಮೆಚ್ಚುಗೆಯನ್ನು ಗಳಿಸುವಿರಿ. ನಿಮ್ಮದಲ್ಲದ ವಸ್ತುವನ್ನು ಪಡೆಯುವ ಇಚ್ಛೆ ಹೆಚ್ಚಾಗುವುದು. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಿಮ್ಮ ಕಾರ್ಯಗಳನ್ನು ಮಾಡಿರಿ. ಸಂತಸದ ವಾರ್ತೆ ನಿಮ್ಮನ್ನು ಅರಸಿ ಬರಬಹುದು. ಹೇಳಬೇಕಾದುದನ್ನು ಹೇಳುವವರಿಗೆ ಮುಟ್ಟಿಸುವಿರಿ. ಅದನ್ನು ಗಣನೆಗೆ ತೆಗೆದುಕೊಳ್ಳದೇ ಮುಂದುವರಿಯುವಿರಿ. ಸೂಕ್ಷ್ಮತೆಯನ್ನು ಅರಿತು ವ್ಯವಹಾರವನ್ನು ಮಾಡಿ. ಕಳೆದುಕೊಂಡಿದ್ದನ್ನು ನೀವು ಪುನಃ ಪಡೆದುಕೊಳ್ಳುವ ಪ್ರಯತ್ನದಲ್ಲಿ ನೀವು ಇರುವಿರಿ. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳಬೇಕಾಗುವುದು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ.
ಮಿಥುನ ರಾಶಿ: ವಿವಾಹದ ವಿಷಯದಲ್ಲಿ ನಿಮ್ಮದೇ ಅಂತಿಮ ತೀರ್ಮಾನವಾಗಬಹುದು. ನಿಮಗೇ ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹಿಂಜರಿಕೆ ಉಂಟಾಗಬಹುದು. ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ. ಸ್ನೇಹಿತರ ವರ್ತನೆಯು ನಿಮಗೆ ವಿಚಿತ್ರವೆನಿಸಬಹುದು. ಒಂಟಿಯಾಗಿ ದೂರದ ಪ್ರಯಾಣವನ್ನು ಮಾಡಲು ಇಚ್ಛಿಸುವಿರಿ. ನಟರಿಗೆ ಉತ್ತಮವಾದ ಅವಕಾಶಗಳು ಬರಲಿವೆ. ಹೊಸದಾದ ವಾಹನವನ್ನು ಖರೀದಿಸುವಿರಿ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ವ್ಯಾಪಾರದ ನಷ್ಟವನ್ನು ಇನ್ನಾವುದರಿಂದಲೇ ತುಂಬಿಕೊಳ್ಳುವಿರಿ. ಮನೆಯ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವುದಿಲ್ಲ. ನಿಮ್ಮ ಶ್ರಮವು ಯಾರಿಗೂ ಕಾಣಿಸದೇ ಹೋಗಬಹುದು. ಭೂಮಿಯ ಕೆಲಸಕ್ಕೆ ಹೆಚ್ಚು ಒತ್ತು. ನಿಮಗೆ ಆಗದವರ ಮೇಲೆ ಸಲ್ಲದ ದೂರನ್ನು ಕೊಡುವಿರಿ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಶಿಸ್ತನ್ನು ಕಾಪಾಡಿಕೊಂಡು ಕೆಲಸ ಮಾಡಿಕೊಳ್ಳುವಿರಿ.
ಕರ್ಕಾಟಕ ರಾಶಿ: ಒಂದು ನಿರ್ಧಾರವನ್ನು ಬಹುಬೇಗ ಮಾಡಲಾಗದು. ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಏಕಾಗ್ರತೆಯ ಕೊರತೆ ನಿಮ್ಮನ್ನು ಬಹಳವಾಗಿ ಕಾಡಬಹುದು. ಇಂದು ನಿಮ್ಮನ್ನೂ ನಿಮ್ಮ ಸುತ್ತಲನ್ನೂ ಬಹಳ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಿರಿ. ಎತ್ತರದ ಯಾವುದಾರೂ ಪ್ರದೇಶಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪ್ರಭಾವೀ ನಾಯಕರ ಭೇಟಿಯಿಂದ ನಿಮ್ಮ ಮುಂದಿನ ಯೋಜನೆಗೆ ಸಹಕರಿಯಾಗಬಹುದು. ಮಕ್ಕಳ ನಡತೆಯಿಂದ ನಿಮ್ಮ ಮೇಲೆ ಆಪಾದನೆಗಳು ಬರಬಹುದು. ಉನ್ನತ ಸಭೆಗಳಿಗೆ ಭಾಗವಹಿಸಲು ಆಹ್ವಾನವು ಬರಬಹುದು. ಸಂಗಾತಿಯಿಂದ ಹಣವನ್ನು ಪಡೆಯಲಿದ್ದೀರಿ. ಪಾಲುದಾರಿಕೆಯನ್ನು ಪಡೆಯುವ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನವಿರಲಿ. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಆಕರ್ಷಣೆಗೆ ಹೆಚ್ಚು ಮಹತ್ತ್ವವನ್ನು ಕೊಡುವಿರಿ.
ಸಿಂಹ ರಾಶಿ: ಪರರ ಉದ್ಯೋಗಕ್ಕೆ ಅಸೂಯೆಪಟ್ಟು ನಿಮ್ಮ ಉದ್ಯೋಗ ಹಾಳು. ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಾಯಿಸುವಿರಿ. ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗುವುದು. ಧಾರ್ಮಿಕ ಕಾರ್ಯಗಳಿಂದ ಆದಾಯ ಹೆಚ್ಚಾಗುವುದು. ನಾಲ್ಕು ಜನರ ಮಾತುಗಳನ್ನು ಕೇಳಿ ಸರಿ ಯಾವುದು ಎನ್ನುವ ಗೊಂದಲಕ್ಕೆ ನೀವು ಬರಬಹುದು. ಮಣ್ಣಿನ ವಸ್ತುಗಳ ಮಾರಾಟದಿಂದ ಲಾಭ. ಇಂದು ಉದ್ಯೋಗಿಗಳಿಗೆ ಕಛೇರಿಯಲ್ಲಿ ಎಲ್ಲರ ಜೊತೆ ಉತ್ತಮ ಸಮಯ ಕಳೆಯುವ ಅವಕಾಶವು ಸಿಗುವುದು. ತಪ್ಪನ್ನು ಮಾಡಿ ಅನಂತರ ಅದನ್ನು ಸರಿ ಮಾಡಿಕೊಳ್ಳಲು ವಿವಿಧ ಪ್ರಯತ್ನವನ್ನು ಮಾಡುವಿರಿ. ನೀರಿನಿಂದ ಭಯವು ಉಂಟಾಗುವುದು. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು.
ಕನ್ಯಾ ರಾಶಿ: ಆಕರ್ಷಕ ಕೆಲಸಗಳಿಂದ ನಿಮಗೆ ಪ್ರಸಿದ್ಧಿ ಸಿಗಲಿದೆ. ನಿಮ್ಮನ್ನು ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳಿ. ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ಭೂಮಿಗೆ ಸಂಬಂಧಿಸಿದ ಕಾರ್ಯವನ್ನು ಮಾಡಿಸುವಿರಿ. ವ್ಯರ್ಥವಾದ ಸುತ್ತಾಟವು ನಿಮಗೆ ಬೇಸರ ತರಿಸಬಹುದು. ಯಾರನ್ನೋ ನಂಬಿ ಮೋಸಹೋಗುವ ಸಾಧ್ಯತೆ ಇರುತ್ತದೆ. ಗಳಿಕೆ ಭರದಲ್ಲಿ ಸೂಕ್ತವಾದ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಲು ಶ್ರಮವನ್ನು ವಹಿಸಬೇಕು. ಚಂಚಲವಾದ ಮನಸ್ಸು ನಿಮ್ಮನ್ನು ಓದಲು ಬಿಡದು. ಏಕಾಂಗಿಯಾಗಿ ದಿನವನ್ನು ಕಳೆಯದೇ ಸ್ನೇಹಿತರ ಜೊತೆ ಸೇರಿಕೊಳ್ಳುವಿರಿ. ಹಳೆಯ ವಾಹನವನ್ನು ಪಡೆದುಕೊಳ್ಳುವಿರಿ. ಹಿರಿಯರಿಗೆ ಎದುರು ಮಾತನಾಡಿ ಅನಂತರ ಪಶ್ಚಾತ್ತಾಪಪಡುವಿರಿ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮಾಡಿಕೊಳ್ಳಬೇಕು. ಬೇಡವಾದುದರ ಬಗ್ಗೆ ಆಸೆ ಬೇಡ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು.