
ಮಡಿಕೇರಿ: ಅಕ್ರಮವಾಗಿ ಮದ್ಯವನ್ನು ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಪ್ಯಾಪ್ತಿಯ ಗರಗಂದೂರು ಗ್ರಾಮದಲ್ಲಿ ಕೆ.ಲವ, ಫ್ರಾನ್ಸಿಸ್, ಸುರೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 42 ಸಾವಿರ ಮೌಲ್ಯದ 106 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಖದೀಮರು ಮಡಿಕೇರಿ ಕಾವೇರಿ ವೈನ್ಸ್ ನಿಂದ ಮದ್ಯ ಖರೀದಿ ಮಾಡಿ ಮಾರುತಿ 800 ಕಾರಿನಲ್ಲಿ ಗರಗಂದೂರಿಗೆ ಸಾಗಿಸುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 8:49 am, Tue, 26 May 20