ಅನಂತೇಶ್ವರ ರಥೋತ್ಸವ: ಸರ್ವಾಲಂಕಾರ ಶಿವಾಲಯದಲ್ಲಿ ಭಕ್ತಿಯ ಝೇಂಕಾರ

|

Updated on: Feb 27, 2020 | 11:26 AM

ಉಡುಪಿ: ಶಿವರಾತ್ರಿ ಅಂದ್ರೆ ಶಿವನ ಆಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತೆ. ಅದ್ರಲ್ಲೂ ಉಡುಪಿಯ ಅನಂತೇಶ್ವರನ ಸನ್ನಿಧಿಯಲ್ಲಿ ಮೂರು ದಿನ ಭಕ್ತರಿಗೆ ಹಬ್ಬವೋ ಹಬ್ಬ. ಯಾಕಂದ್ರೆ ಮೂರನೇ ದಿನ ನಡೆಯೋ ರಥೋತ್ಸವ ಹೊಸ ಲೋಕವನ್ನೇ ಸೃಷ್ಟಿಸುತ್ತೆ. ಅಲ್ಲಿಗೆ ಬರೋ ಪ್ರತಿ ಭಕ್ತನು ಅಲ್ಲಿನ ಸಿಂಗಾರಕ್ಕೆ ಮಾರುಹೋಗ್ತಾರೆ. ಹೆಜ್ಜೆ ಹೆಜ್ಜೆಗೂ ಹೂಗಳ ಸಿಂಗಾರ. ದೇಗುಲದ ತುಂಬೆಲ್ಲಾ ಸುಂದರ ಅಲಂಕಾರ. ಶಿವನ ಆಲಯದಲ್ಲಿ ಭಕ್ತಿಯ ಝೇಂಕಾರ. ರಥೋತ್ಸವದ ರಂಗಿನಲ್ಲಿ ಜನರ ಸಡಗರ. ತೇರು ಸಾಗಿದಂತೆಲ್ಲಾ ರಥಬೀದಿ ರಂಗು ಪಡೆದುಕೊಂಡಿತ್ತು. ಉಡುಪಿ ಅಂದ್ರೆ […]

ಅನಂತೇಶ್ವರ ರಥೋತ್ಸವ: ಸರ್ವಾಲಂಕಾರ ಶಿವಾಲಯದಲ್ಲಿ ಭಕ್ತಿಯ ಝೇಂಕಾರ
Follow us on

ಉಡುಪಿ: ಶಿವರಾತ್ರಿ ಅಂದ್ರೆ ಶಿವನ ಆಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತೆ. ಅದ್ರಲ್ಲೂ ಉಡುಪಿಯ ಅನಂತೇಶ್ವರನ ಸನ್ನಿಧಿಯಲ್ಲಿ ಮೂರು ದಿನ ಭಕ್ತರಿಗೆ ಹಬ್ಬವೋ ಹಬ್ಬ. ಯಾಕಂದ್ರೆ ಮೂರನೇ ದಿನ ನಡೆಯೋ ರಥೋತ್ಸವ ಹೊಸ ಲೋಕವನ್ನೇ ಸೃಷ್ಟಿಸುತ್ತೆ. ಅಲ್ಲಿಗೆ ಬರೋ ಪ್ರತಿ ಭಕ್ತನು ಅಲ್ಲಿನ ಸಿಂಗಾರಕ್ಕೆ ಮಾರುಹೋಗ್ತಾರೆ.

ಹೆಜ್ಜೆ ಹೆಜ್ಜೆಗೂ ಹೂಗಳ ಸಿಂಗಾರ. ದೇಗುಲದ ತುಂಬೆಲ್ಲಾ ಸುಂದರ ಅಲಂಕಾರ. ಶಿವನ ಆಲಯದಲ್ಲಿ ಭಕ್ತಿಯ ಝೇಂಕಾರ. ರಥೋತ್ಸವದ ರಂಗಿನಲ್ಲಿ ಜನರ ಸಡಗರ. ತೇರು ಸಾಗಿದಂತೆಲ್ಲಾ ರಥಬೀದಿ ರಂಗು ಪಡೆದುಕೊಂಡಿತ್ತು.

ಉಡುಪಿ ಅಂದ್ರೆ ಥಟ್ಟನೆ ನೆನಪಾಗೋಗು ಶ್ರೀಕೃಷ್ಣ. ಆದ್ರಿಲ್ಲಿ ಕೃಷ್ಣ ಮಠ ಫೇಮಸ್ ಆದ್ರೂ ಕೃಷ್ಣ ನೆಲೆ‌ ನಿಲ್ಲೋಕೆ ಆಶ್ರಯ ಕೊಟ್ಟಿದ್ದು ಅನಂತೇಶ್ವರ. ಹೀಗಾಗಿ ಅನಂತೇಶ್ವರನಿಗೂ ಅಷ್ಟೇ ಸ್ಥಾನಮಾನವಿದೆ. ಪ್ರತೀ ವರ್ಷ ಶಿವರಾತ್ರಿ ಬಂದ್ರೆ ಮೂರು ದಿನ ಅನಂತೇಶ್ವರನಿಗೆ ವಿಶೇಷ ಪೂಜೆ ಮಾಡ್ತಾರೆ.

ಮೊದಲೆರಡು ದಿನ ಪೂಜೆ, ಆರಾಧನೆಗಳು ನಡೆದ್ರೆ ಮೂರನೇ ದಿನ ಅದ್ಧೂರಿ ರಥೋತ್ಸವ ನಡೆಯುತ್ತೆ. ಈ ವೇಳೆ ಸುತ್ತಮುತ್ತಲ ಹಳ್ಳಿ ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗ್ತಾರೆ. ರಥೋತ್ಸದ ಸಾಗಿದಂತೆಲ್ಲಾ ಹೊಸ ಕಳೆ ಕಟ್ಟುತ್ತೆ. ಅದ್ರಲ್ಲೂ ದೇವಸ್ಥಾನದಲ್ಲಂತೂ ಹೆಜ್ಜೆ ಹೆಜ್ಜೆಗೂ ಹೂಗಳಲ್ಲೇ ಮಾಡಿದ ಸಿಂಗಾರವನ್ನ ನೋಡೋದೇ ಚೆಂದ.

ಇನ್ನು ಈ ಶಿವ ಸನ್ನಿಧಿಯಿಂದ ಈ ಗ್ರಾಮಕ್ಕೆ ಶಿವಳ್ಳಿ ಎಂಬ ಹೆಸರು ಬಂದಿದೆ. ಭಕ್ತರ ಸಂಕಷ್ಟವನ್ನು ಪರಿಹರಿಸುವ ಈ ದೇವನನ್ನು ಅನಂತ ದು:ಖ ನಾಶ ಮಾಡುವ ದೇವರೆಂದು ಪೂಜಿಸುತ್ತಾರೆ. ಹೀಗಾಗೇ ಪ್ರತೀ ಶಿವರಾತ್ರಿ ವೇಳೆ ನಡೆಯೋ ರಥೋತ್ಸವದಲ್ಲಿ ಭಾಗಿಯಾಗಿ ಬೇಡಿಕೊಳ್ತಾರೆ. ಕಷ್ಟಗಳನ್ನ ನಿವಾರಿಸು ಅಂತಾ ಪ್ರಾರ್ಥಿಸ್ತಾರೆ. ಇನ್ನು ರಥೋತ್ಸವದಲ್ಲಿ ಪರ್ಯಾಯ ಶ್ರೀಪಾದರ ಜೊತೆ ಇತರ ಮಠಾಧೀಶರೂ ಭಾಗಿಯಾಗಿದ್ರು. ಜೊತೆಗೆ ಸಹಸ್ರಾರು ಭಕ್ತರು ತೇರನೆಳೆದು ಸಂಭ್ರಮಿಸಿದ್ರು.

ಹಳಿ ಕೇಳಿ ಉಡುಪಿ ದೇವಾಲಯಗಳ ನಗರಿ. ಪ್ರತಿ ದಿನವೂ ಭಗವಂತನಿಗೆ ವಿಶೇಷ ಪೂಜೆಗಳು ನಡೆಯುತ್ತೆ. ದೂರದ ಊರುಗಳಿಂದ ದೇವನನ್ನ ಕಣ್ತುಂಬಿಕೊಳ್ಳೋಕೆ ಬರ್ತಾರೆ.


Published On - 8:35 pm, Wed, 26 February 20