‘ಪ್ರೀತಿಯ ಮದುವೆ’ಗೆ ಯುವಕನ ಮನೆಯ ನಾಲ್ವರ ಭೀಕರ ಹತ್ಯೆ, ಎಲ್ಲಿ?

ರಾಯಚೂರು:ಪ್ರೀತಿ ಅದೊಂದು ಮಾಯೆ, ಪ್ರೀತಿಯ ಬಲೆಗೆ ಬಿದ್ದವರಲ್ಲಿ ಕೆಲವರು ಸಮಾಜದ ಪರಿಧಿಗಳೆಲ್ಲವನ್ನೂ ಮೆಟ್ಟಿ ನಿಂತು ತಮ್ಮ ಕುಟುಂಬದವರನ್ನೆಲ್ಲ ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರೆ, ಇನ್ನು ಕೆಲವರು ಸಮಾಜವನ್ನು ಗೆಲ್ಲಲಾಗದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಒಂದಿಷ್ಟು ಜನ ಸಮಾಜದ ಅಥವಾ ಕುಟುಂಬದ ವಿರೋಧದ ನಡುವೆಯೂ ಪ್ರೇಮ ಬಂಧನಕ್ಕೊಳಗಾಗಿ ಮರ್ಯಾದಾ ಹತ್ಯೆ ಎಂಬ ಹೀನಕೃತ್ಯಗಳಿಗೆ ಬಲಿಯಾಗುತ್ತಾರೆ. ಈಗ ಇಂತಹುದೆ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಸುಕಾಲಪೇಟೆಯಲ್ಲಿ ನಡೆದಿದ್ದು, ಸ್ಥಳಿಯಾರಾದ ಮೌನೇಶ್​​ ಮತ್ತು ಮಂಜುಳಾ ಕೆಲ ದಿನಗಳ ಹಿಂದೆ ಪ್ರೀತಿಸಿ […]

‘ಪ್ರೀತಿಯ ಮದುವೆ’ಗೆ ಯುವಕನ ಮನೆಯ ನಾಲ್ವರ ಭೀಕರ ಹತ್ಯೆ, ಎಲ್ಲಿ?
Edited By:

Updated on: Jul 11, 2020 | 8:05 PM

ರಾಯಚೂರು:ಪ್ರೀತಿ ಅದೊಂದು ಮಾಯೆ, ಪ್ರೀತಿಯ ಬಲೆಗೆ ಬಿದ್ದವರಲ್ಲಿ ಕೆಲವರು ಸಮಾಜದ ಪರಿಧಿಗಳೆಲ್ಲವನ್ನೂ ಮೆಟ್ಟಿ ನಿಂತು ತಮ್ಮ ಕುಟುಂಬದವರನ್ನೆಲ್ಲ ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರೆ, ಇನ್ನು ಕೆಲವರು ಸಮಾಜವನ್ನು ಗೆಲ್ಲಲಾಗದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಒಂದಿಷ್ಟು ಜನ ಸಮಾಜದ ಅಥವಾ ಕುಟುಂಬದ ವಿರೋಧದ ನಡುವೆಯೂ ಪ್ರೇಮ ಬಂಧನಕ್ಕೊಳಗಾಗಿ ಮರ್ಯಾದಾ ಹತ್ಯೆ ಎಂಬ ಹೀನಕೃತ್ಯಗಳಿಗೆ ಬಲಿಯಾಗುತ್ತಾರೆ.

ಈಗ ಇಂತಹುದೆ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಸುಕಾಲಪೇಟೆಯಲ್ಲಿ ನಡೆದಿದ್ದು, ಸ್ಥಳಿಯಾರಾದ ಮೌನೇಶ್​​ ಮತ್ತು ಮಂಜುಳಾ ಕೆಲ ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇದನ್ನೊಪ್ಪದ ಕಿಡಿಗೇಡಿಗಳು, ಯುವಕನ ಮನೆಯವರೇ ಆದ ಸುಮಿತ್ರಮ್ಮ(55), ಶ್ರೀದೇವಿ(38), ನಾಗರಾಜ್(28), ಹನುಮೇಶ(30) ಎಂಬುವವರನ್ನು ಭೀಕರವಾಗಿ ನಡುರಸ್ತೆಯಲ್ಲೇ ಕಲ್ಲು, ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಈರಪ್ಪ(60)ನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳಿಯ ಆಸ್ಪತ್ರೆಗೆ ಕಳುಹಿಸಿದ್ದಾರೆ. ತನಿಖೆಯನ್ನ ಚುರುಕುಗೊಳಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Published On - 6:48 pm, Sat, 11 July 20