ಹಸಿರು ವಲಯದ ಬೇಲೂರು ತಾಲೂಕಿನಲ್ಲಿ 40 ಜನರಿಗೆ ಜ್ವರ, ಆತಂಕ

|

Updated on: Apr 25, 2020 | 11:42 AM

ಹಾಸನ: ಬೇಲೂರು ತಾಲೂಕಿನ ಗ್ರಾಮದಲ್ಲಿ ಹಲವರಿಗೆ ಎರಡು ವಾರಗಳಿಂದ ನಿರಂತರವಾಗಿ ಜ್ವರ ಬಾಧಿಸುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಕಳೆದ ಎರಡು ವಾರಗಳಿಂದ ಬೇಲೂರು ತಾಲೂಕಿನ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನರು ನಿತ್ಯವೂ ಆಸ್ಪತ್ರೆಗೆ ಬರುತ್ತಿದ್ದಾರೆ. ತಾಲ್ಲೂಕು ಆಡಳಿತದ ದಿವ್ಯ ನಿರ್ಲಕ್ಷ್ಯ: ಕೊರೊನೊ ಸೋಂಕು ಹೆಮ್ಮಾರಿ ಕಾಟದ‌ ನಡುವೆ ಈ ಜ್ವರದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಹತ್ತಾರು ಗ್ರಾಮಸ್ಥರು ಬೇಲೂರಿನ ಹಲವು ಖಾಸಗಿ ಕ್ಲಿನಿಕ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಸೂಕ್ತ ಸ್ಚಚ್ಛತೆ ಇಲ್ಲದೆ ಜನರಿಗೆ ಜ್ವರ ಬಂದಿರುವ ಶಂಕೆಯಿದೆ. […]

ಹಸಿರು ವಲಯದ ಬೇಲೂರು ತಾಲೂಕಿನಲ್ಲಿ 40 ಜನರಿಗೆ ಜ್ವರ, ಆತಂಕ
Follow us on

ಹಾಸನ: ಬೇಲೂರು ತಾಲೂಕಿನ ಗ್ರಾಮದಲ್ಲಿ ಹಲವರಿಗೆ ಎರಡು ವಾರಗಳಿಂದ ನಿರಂತರವಾಗಿ ಜ್ವರ ಬಾಧಿಸುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಕಳೆದ ಎರಡು ವಾರಗಳಿಂದ ಬೇಲೂರು ತಾಲೂಕಿನ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನರು ನಿತ್ಯವೂ ಆಸ್ಪತ್ರೆಗೆ ಬರುತ್ತಿದ್ದಾರೆ.

ತಾಲ್ಲೂಕು ಆಡಳಿತದ ದಿವ್ಯ ನಿರ್ಲಕ್ಷ್ಯ:
ಕೊರೊನೊ ಸೋಂಕು ಹೆಮ್ಮಾರಿ ಕಾಟದ‌ ನಡುವೆ ಈ ಜ್ವರದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಹತ್ತಾರು ಗ್ರಾಮಸ್ಥರು ಬೇಲೂರಿನ ಹಲವು ಖಾಸಗಿ ಕ್ಲಿನಿಕ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಸೂಕ್ತ ಸ್ಚಚ್ಛತೆ ಇಲ್ಲದೆ ಜನರಿಗೆ ಜ್ವರ ಬಂದಿರುವ ಶಂಕೆಯಿದೆ. ಆದ್ರೆ ತೀವ್ರ ಜ್ವರ ಕಾಣಿಸಿಕೊಂಡರೂ ಅಧಿಕಾರಿಗಳು ಸ್ಪಂದಿಸದಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದೆ. ತಾಲೂಕು ಆಡಳಿತದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.