ಅಂತ್ಯವಾಗುತ್ತದಾ ಲಾಕ್​ಡೌನ್? ನಿಯಮ ಸಡಿಲಿಕೆ ಮುನ್ಸೂಚನೆ ಏನು ?

ಅಂತ್ಯವಾಗುತ್ತದಾ  ಲಾಕ್​ಡೌನ್? ನಿಯಮ ಸಡಿಲಿಕೆ ಮುನ್ಸೂಚನೆ ಏನು ?

ಬೆಂಗಳೂರು: ದೇಶದಲ್ಲಿ ಕೊರೊನಾ ರಣಕೇಕೆ ಜೋರಾಗಿದ್ರೆ, ಲಾಕ್​​ಡೌನ್​ ನಿಯಮ ಒಂದೊಂದಾಗೇ ಸಡಿಲಿಕೆಯಾಗ್ತಿದೆ. ಏಪ್ರಿಲ್ 27ರಂದು ರಾಜ್ಯದ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಲಿದ್ದಾರೆ.

ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​ಗೆ ಇನ್ನು 2 ದಿನ ಬಾಕಿ ಇರುವಂತೆಯೇ ಕೇಂದ್ರ ಸರ್ಕಾರ ಲಾಕ್​​​​ಡೌನ್​ ರೂಲ್ಸ್ ಸಡಿಲಿಸ್ತಿರೋದು ಅಚ್ಚರಿ ಮೂಡಿಸಿದೆ. ಮೇ 3ಕ್ಕೆ ಲಾಕ್​ಡೌನ್​ ಮುಂದುವರಿಯುತ್ತಾ? ಹಲವು ಕಟ್ಟುನಿಟ್ಟಿನ ನಿಯಮ ಜಾರಿ ಇರುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ.

ಒಟ್ನಲ್ಲಿ ಇಲ್ಲಿ ಒಂದು ವಿಚಾರವನ್ನ ರಾಜ್ಯದ ಜನತೆ ಅರ್ಥಮಾಡಿಕೊಳ್ಳಲೇಬೇಕು. ಕೆಲ ಕ್ಷೇತ್ರಗಳಿಗಷ್ಟೇ ರಿಲೀಫ್ ಕೊಟ್ಟಿರೋದಕ್ಕೆ ಕಾರಣ ಕೊರೊನಾ ಕಂಟ್ರೋಲ್​ ಜೊತೆಗೆ ಕೇಂದ್ರ ಹಾಗೂ ರಾಜ್ಯದ ಹಣಕಾಸಿನ ಪರಿಸ್ಥಿತಿ ಸರಿದೂಗಿಸೋಕೆ. ಇವೆಲ್ಲವನ್ನೂ ಗಮದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಿದ್ದು, ಲಾಕ್​​ಡೌನ್​ನಿಂದ ಲಾಕ್ ಆಗಿದ್ದ ಜನರಿಗೆ ಕೊಂಚ ರಿಲೀಫ್ ಸಿಕ್ಕಿದಂತಾಗಿದೆ.

Published On - 10:50 am, Sat, 25 April 20

Click on your DTH Provider to Add TV9 Kannada