
ಕಲಬುರಗಿ: ರಾಜ್ಯದಲ್ಲೇ ಮೊದಲ ಬಲಿಯಾದ ಕಲಬುರಗಿಯನ್ನು ಕೊರೊನಾ ಕಾಡುತ್ತಿದೆ. ಜಿಲ್ಲೆಯ ಮೇಲೆ ಕೊವಿಡ್ ಕರಿ ನೆರಳು ಆವರಿಸಿದೆ. ಕೊರೊನಾ ವಾರಿಯರ್ಸ್ಗಳಲ್ಲಿ ಒಬ್ಬರಾದ ಖಾಕಿ ಮೇಲೆ ಮಹಾಮಾರಿಯ ಕಣ್ಣು ಬಿದಿದೆ. ಜಿಲ್ಲೆಯಲ್ಲಿ ಮತ್ತೆ ಐವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ರೋಜಾ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ, ಫರಹತಾಬಾದ್ ಠಾಣೆಯ ಓರ್ವ ಸಿಬ್ಬಂದಿ ಹಾಗೂ ಓರ್ವ ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್‌ಗೆ ಕೊರೊನಾ ಸೋಂಕು ತಗುಲಿದೆ.ರೋಜಾ ಮತ್ತು ಫರಹತಾಬಾದ್ ಠಾಣೆ ಸಿಬ್ಬಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಈ ಹಿಂದೆ ಜಿಲ್ಲೆಯ ಮೂವರು ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಐವರಿಗೆ. ಕಲಬುರಗಿಯಲ್ಲಿ ಒಟ್ಟು ಎಂಟು ಜನ ಪೊಲೀಸ್ ಸಿಬ್ಬಂದಿಗೆ ಕೊರೊನಾ ತಗುಲಿದೆ.